ಎಮ್ಮೆಹಟ್ಟಿಗೆ ಪರಿಷತ್ ಸದಸ್ಯ ಎಂ.ಜಿ ಮುಳೆ ಭೇಟಿ

ಸುದ್ದಿಲೈವ್/ಹೊಳೆಹೊನ್ನೂರು

ಒಂದೇ ಅಪಘಾತದಲ್ಲಿ 13 ಜನ ಮೃತ ಪಟ್ಟಿರುವ ಪ್ರಕರಣ ಸಮುದಾಯಕ್ಕೆ ಮಾತ್ರವಲ್ಲದೆ ಗ್ರಾಮಕ್ಕೂ ತುಂಬಲಾರದ ನಷ್ಠ ಎಂದು ಪರಿಷತ್ ಸದಸ್ಯ ಎಂ.ಜಿ ಮುಳೆ ಹೇಳಿದರು.

ಸಮೀಪದ ಎಮ್ಮೆಹಟ್ಟಿಗೆ ಮಂಗಳವಾರ ಬೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮೃತ ಕುಟುಂಬಸ್ಥರಿಗೆ ವೈಯಕ್ತಿಕ ನೆರವು ನೀಡಿ ಮಾತನಾಡಿದರು.

ಆಯಸ್ಸು ಪೂರ್ಣವಾಗದೆ ದುರಂತ ಸಾವು ಕಾಣುವುದು ನೋವಿನ ಸಂಗತಿ. ಮೃತರ ಕುಟುಂಗಳಿಗೆ ಶಾಶ್ವತ ಪರಿಹಾರ ಕಲ್ಪುಸವ ನಿಟ್ಟಿನಲ್ಲಿ ಸರ್ಕಾರೊಂದಿಗೆ ಚರ್ಚಿಸಿ ಕುಟುಂಸ್ಥರ ನೆರವಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಸರ್ಕಾರವಲ್ಲದೆ ಸ್ಥಳೀಯ ಜನ ಪ್ರತಿನಿಧಿಗಳು ಕುಟುಂಸ್ಥರ ಸಹಕಾರ ನೀಡುತ್ತಿರುವುದೆ. ರಾಜ್ಯವೇ ಬೀಕರ ಅಪಘಾತ ಕಂಡು ಮರುಗಿದೆ.

ಸಂಬಂದಿಗಳೆ ಅಂಗವಿಕಲೆ ಸಂಕಷ್ಠಗಳಿಗೆ ಮಿಡಿಯಬೇಕು. ಪತಿಯನ್ನು ಕಳೆದುಕೊಂಡ ರೇಣುಕಾಳಿಗೆ ಉದ್ಯೋಗ ಕೊಡಿಸುವ ವಿಚಾರದಲ್ಲಿ ಸಂತ್ರಸ್ಥೆಗೆ ಆತ್ಮಸ್ಥೆöÊರ್ಯ ತುಂಬಬೇಕು. ಗ್ರಾಮಸ್ಥರು ನೊಂದವರಿಗೆ ಮತ್ತಷ್ಟು ಸಹಕಾರ ನೀಡಿ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕಿದೆ ಎಂದರು.

ಸಮಾಜದ ಅಧ್ಯಕ್ಷ ಲೋಕೇಶ್ ರಾವ್ ಮಾತನಾಡಿ ನೋವುಗಳಿಗೆ ಸ್ಪಂದಿಸುವುದು ನಮ್ಮೇಲ್ಲರ ಜವಬ್ದಾರಿ. ಅಪಘಾತದಲ್ಲಿ ಗಾಯಾಳುಗಳಿಗೆ ಬದುಕು ಕಟ್ಟಿಕೊಡಬೇಕಾದ ಕೆಲಸವನ್ನು ಮಾಡಲಾಗುತ್ತಿದೆ. ಇಬ್ಬರು ಗುಣವಾಗಿ ಮನೆ ಸೇರಿದ್ದಾರೆ. ಇನ್ನಿಬ್ಬರು ಗಾಯಾಳುಗಳು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ನೋವುಂಡಿರುವ ಸಂಬAದಿಗಳ ನೋವುಗಳಿಗೆ ಬೆನ್ನುಲುಬಾಗಿ ನಿಂತು ಜೀವನ ಕಟ್ಟಿಕೊಡಬೇಕಾಗಿದೆ. ಅಪಘಾತದ ಸಮಯದಲ್ಲಿ ಗ್ರಾಮಸ್ಥರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ ಎಂದರು.

ಉಪಾಧ್ಯಕ್ಷ ನಾಗೇಶ್‌ರಾವ್, ಮಾಜಿ ಎಪಿಎಂಸಿ ಸದಸ್ಯ ಸತೀಶ್, ಬಾಳೋಜಿ ಬಸವರಾಜ್, ಸಚಿನ್‌ಸಿಂದ್ಯಾ, ದೇವರಾಜ್ ಸಿಂದೆ, ಬಸವರಾಜ್, ತಿಪ್ಪೇಶರಾವ್, ಮುರಾರಿರಾವ್, ರಾಜಪ್ಪ, ಹಾಲೋಜಿರಾವ್, ಬಿ.ವೈ ಬಸೋಜಿರಾವ್, ಕಗ್ಗಿ ಮಲ್ಲೇಶ್‌ರಾವ್, ರಂಗನಾಥರಾವ್, ರಾಮು ಇತರರಿದ್ದರು.

ಇದನ್ನೂ ಓದಿ-https://suddilive.in/archives/18888

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close