ಎಂಎಲ್ ಸಿ ಡಾ.ಸರ್ಜಿ, ಸಂಸದರನ್ನ ಒಳಗೊಂಡ ಬಿಜೆಪಿ ನಿಯೋಗ ಎಮ್ಮೆಹಟ್ಟಿಗೆ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮಕ್ಕೆ ಇಂದು ಬಿಜೆಪಿ ಜಿಲ್ಲಾ ಘಟಕ ಭೇಟಿ ಪರಿಹಾರ ನೀಡಿತ್ತು. ಹಾವೇರಿ ಬಳಿ ಅಪಘಾತದಲ್ಲಿ 13 ಜನ ಮೃತರಾಗಿದ್ದರು. ಇಂದು ಬಿಜೆಪಿ ನಿಯೋಗ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ತೆರಳಿತ್ತು.

ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಮೇಘರಾಜ್, ಸಂಸದ ರಾಘವೇಂದ್ರ, ನೂತನ ಎಂಎಲ್ ಸಿ ಡಾ.ಧನಂಜಯ ಸರ್ಜಿ, ಡಿಎಸ್ ಅರುಣ್, ಮಾಜಿ ಶಾಸಕ ಅಶೋಕ್ ನಾಯ್ಕ್ ಭೇಟಿ ನೀಡಿ ಪರಿಹಾರ ನೀಡಿದರು.

ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ, ಭೀಕರ ಅಪಘಾತದಲ್ಲಿ 13 ಜನ ಅಸುನೀಗಿದ್ದರು.
ಈ ಹಿಂದೆ ನಾವು ಈ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೆವು. ಈ ನೊಂದ ಕುಟುಂಬಕ್ಕೆ ಪರಿಹಾರ ನೀಡುವ ಮಾನವೀಯ ಕೆಲಸ ಮಾಡಿದ್ದೇವೆ ಎಂದರು.

ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆವೆ.
ಬಿಜೆಪಿ ಪಕ್ಷದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಿದ್ದೆವೆ ಎಂದ ಸಂಸದರು ದೇಶದ ರಾಜಕಾರಣದ ಬಗ್ಗೆಯೂ ಮಾತನಾಡಿದರು.
ಜು. 15 ರಂದು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಶಾಸಕ ನಾಗೇಂದ್ರರನ್ನ ಇಡಿ ಬಂಧಿಸಿದೆ. ಈಗಲೇ ಅವರನ್ನು ಆರೋಪಿ ಎಂದು ಹೇಳಲು ಬರೋಲ್ಲ.
ತನಿಖೆಯ ಪಟ್ಟಿಯಲ್ಲಿ ಅವರ ಹೆಸರು ಇರುವುದರಿಂದ ವಿಚಾರಣೆ ನಡೆಸಲಾಗುತ್ತಿದೆ.
ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದರು.

ಎರಡುವರೆ ವರ್ಷದ ಹಿಂದೆ ಅಧ್ಯಕ್ಷರಾಗಿದ್ದ ವೀರಯ್ಯ ಅವರ ಹೆಸರು ಥಳಕು ಹಾಕಲಾಗುತ್ತಿದೆ.
ಕಾಂಗ್ರೆಸ್ ನ ಸೇಡಿನ ರಾಜಕೀಯ ಜನರಿಗೆ ಅರ್ಥವಾಗುತ್ತದೆ. ನಾಳೆ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಛೀಮಾರಿ ಹಾಕುವ ಕೆಲಸ ಮಾಡಲಿದ್ದೆವೆ ಎಂದರು.

ಎಲ್ಲಾ ವಿಭಾಗಗಳಲ್ಲೂ ಬೆಲೆ ಏರಿಕೆಯಾಗಿದೆ.
ರೈತರ ಪ್ರೋತ್ಸಾಹ ಧನದ ಮೇಲೂ ಈ ಸರ್ಕಾರ ಕಣ್ಣು ಹಾಕಿದೆ. ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿದ್ದಾರೆ. ಕರೆಂಟ್ ಬಿಲ್, ಅಬಕಾರಿ ಸುಂಕ, ಪೆಟ್ರೋಲ್ ಸುಂಕ, ಹಾಲಿನ ದರ ಏರಿಕೆ ಮಾಡಿದ್ದಾರೆ. ಈ ಸರ್ಕಾರದ ವಿರುದ್ಧ ಜನರು ಬೇಸರಗೊಂಡಿದ್ದಾರೆ.

ಇನ್ನೂ ಸಮಾಧಾನಕರ ಮಳೆ ಕೂಡ ಆಗಿಲ್ಲ.
ಕೆರೆ, ಕಟ್ಟೆಗಳಿಗೆ ನೀರು ಸರಿಯಾಗಿ ಹರಿದಿಲ್ಲ.
ಜನರು ನೆಮ್ಮದಿಯಿಂದ ಇಲ್ಲ. ಸರ್ಕಾರದ ವಿರುದ್ಧ ಛಾಟಿ ಬೀಸಲು ನಾಳೆ ನಡೆಯುವ ಅಧಿವೇಶನದಲ್ಲಿ ಹೋರಾಟ ಮಾಡಲು ನಮ್ಮ ಪಕ್ಷ ಸನ್ನದ್ಧವಾಗಿದೆ ಎಂದರು.‌

ಇದನ್ನೂ ಓದಿ-https://suddilive.in/archives/19146

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close