ಆತ್ಮಹತ್ಯೆಗೆ ಯತ್ನ-ಓರ್ವ ಮಣಿಪಾಲಿಗೆ ದಾಖಲು

ಸುದ್ದಿಲೈವ್/ತೀರ್ಥಹಳ್ಳಿ

ಜಮೀನಿನಲ್ಲಿ ನೀರು ಹೋಗುವ ವಿಚಾರದಲ್ಲಿ – ಇಬ್ಬರು ಸಹೋದರರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು ಓರ್ವನನ್ನ ಮಣಿಪಾಲಿಗೆ ದಾಖಲಿಸಲಾಗಿದೆ.

ರಾಜ ಕಾಲುವೆ ಮತ್ತು ಗುಡ್ಡದನೀರು ತಮ್ಮ ಜಮೀನಿನ ಮೂಲಕ ಹೋಗುತ್ತದೆ ಎಂಬ ವಿಚಾರದಲ್ಲಿ ಗ್ರಾಮಸ್ಥರ ನಡುವೆ ಗಲಾಟೆ ನಡೆದು ನಂತರ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಲು ಮುಂದಾದ ಸಂದರ್ಭದಲ್ಲಿ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಅರಳಸುರುಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಲಿಸರ ಗ್ರಾಮದ ಸರ್ವೇ ನಂ 125 ಹಾಗೂ 126 ರ ಜಾಗದ ಮಾಲೀಕರು ದಿನೇಶ್ (45 ವರ್ಷ ) ಹಾಗೂ ಸತೀಶ್ (49 ವರ್ಷ ) ಎಂಬುವರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಬ್ಬರನ್ನು ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ, ಭೇಟಿ ನೀಡಿದ್ದಾರೆ.‌ ದಿನೇಶ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿಗೆ ಸಾಗಿಸಲಾಗಿದೆ.

ಇದನ್ನೂ ಓದಿ-https://suddilive.in/archives/18794

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close