ಮಹಾಮಾರಿ ಡೆಂಗ್ಯೂಗೆ ರಿಪ್ಪನ್‌ಪೇಟೆ ಮಹಿಳೆ ಬಲಿ?

ಸುದ್ದಿಲೈವ್/ರಿಪ್ಪನ್ ಪೇಟೆ

ತೀವ್ರ ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆ ರಶ್ಮಿ ಆರ್ ನಾಯಕ್ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇಲ್ಲಿನ ನಾಯಕ್ ಫರ್ಟಿಲೈಸರ್ಸ್ ಮಾಲೀಕ ರಾಮದಾಸ್ ನಾಯಕ್‌ರವರ ಪುತ್ರ ರಾಘವೇಂದ್ರ ನಾಯಕ್ ಅವರ ಪತ್ನಿ ರಶ್ಮಿ ಆರ್.ನಾಯಕ್ (42) ಕಳೆದ 15-20 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು ಶಿವಮೊಗ್ಗದ ಖಾಸಗಿ  ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರಿಗೆ ಪತಿ, ಇಬ್ಬರು ಪುತ್ರರು ಇದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಾಕಷ್ಟು ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಈ ಬಗ್ಗೆ  ಸ್ಥಳೀಯ ಆರೋಗ್ಯ ಇಲಾಖೆಯವರು ಸ್ಪಷ್ಟತೆ ನೀಡಿಲ್ಲ. ಆದರೆ ಕಳೆದ ಒಂದು ವಾರದಿಂದ ಸ್ಥಳೀಯ ಆರ್ ಟಿ ಪಿಸಿಆರ್ ನಲ್ಲಿ ಮಹಿಳೆಗೆ ಡೆಂಗ್ಯೂ ಪಾಸಿಟಿವ್ ಬಂದಿತ್ತು. ಮಹಿಳೆಗೆ ಡೇಂಗ್ಯೂಚಿಕಿತ್ಸೆ ಸಹ ನೀಡಲಾಗುತ್ತಿತ್ತು.

ಜ್ವರ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬಂದರೆ ಸರಿಯಾಗಿ ವೈದ್ಯಾಧಿಕಾರಿಗಳು ಸ್ಪಂಧಿಸಲಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಡೆಂಗ್ಯೂ ಬಗ್ಗೆ ಗೊತ್ತಿಲ್ಲದವರಂತೆ ಆಸ್ಪತ್ರೆಯವರು ಮೌನವಹಿಸಿರುವುದಾಗಿ ಹೇಳಿದ್ದಾರೆ. ಒಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ಡೇಂಗ್ಯೂ ಪಾಸಿಟಿವ್ ಕಂಡು ಬಂದಿದೆ.

ಸರ್ಕಾರ ನಿತ್ಯ ಡೆಂಗ್ಯೂ ಬಗ್ಗೆ ಜಾಗೃತಿ ವಹಿಸಿದರೂ ಕೂಡಾ ಇಲ್ಲಿನ ಆಸ್ಪತ್ರೆಯಲ್ಲಿ ಮಾತ್ರ ಸೂಕ್ತ ಚಿಕಿತ್ಸೆ ನೀಡಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕಳೆದ ಒಂದು ವಾರದಿಂದ ಡೇಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಮಹಿಳೆಗೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶಂಕಿತ ಡೇಂಗ್ಯೂ ಜ್ವರಕ್ಕೆ  ಮಹಿಳೆ ಬಲಿಯಾಗಿರುವ ಬಗ್ಗೆ ತಿಳಿದು ಬಂದಿದೆ.‌

ಜಿಲ್ಲೆಯಲ್ಲಿ 305 ಪಾಸಿಟಿವ್ ಇದೆ. 35 ಜನ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುಯ್ತಿದೆ.‌ ಉಳಿದವರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.

ಇದನ್ನೂ ಓದಿ-https://suddilive.in/archives/18873

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close