ಕುಸಿದು ಬಿದ್ದ ತಡೆಗೋಡೆ-ರಾಜಕಾರಣಿಗಳು ಮತ್ತು ಸಾರ್ವಜನಿಕರು ಗಪ್ ಚುಪ್?

ಸುದ್ದಿಲೈವ್/ತೀರ್ಥಹಳ್ಳಿ

ನಿನ್ನೆ ಗುಡ್ಡ ಕುಸಿತಗೊಂಡಿದ್ದ ಕುರುವಳ್ಳಿ-ಬಾಳೇಬೈಲು ರಸ್ತೆಯ ತಡೆಗೋಡೆ ಇಂದು ಸಂಪೂರ್ಣ ಕುಸಿತಗೊಂಡಿದೆ. ಜನರ ತೆರಿಗೆ ರೂಪದಲ್ಲಿ ಬಿಡುಗಡೆಯಾಗಿದ್ದ 56 ಕೋಟಿ ವೆಚ್ಚದ ಕಾಮಗಾರಿ ನೀರಲ್ಲಿ ಹೋಮ ಮಾಡಿದಂತಾಗಿದೆ.

ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯ ತಡೆಗೋಡೆ ಸಂಪೂರ್ಣ ಕುಸಿದು ಹೋಗಿದೆ.  ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ  ತುಂಗಾ ಸೇತುವೆಗೆ 56 ಕೋಟಿ ರೂ ವೆಚ್ಚದ ತಡೆಗೋಡೆ ನಿರ್ಮಿಸಲಾಗಿತ್ತು. ಉದ್ಘಾಟನೆಗೊಂಡು ಕೆಲವೇ ತಿಂಗಳ ಒಳಗಾಗಿ ತಡೆಗೋಡೆ ಮುರಿದುಬಿದ್ದಿದೆ. ಇಂತಹ ಅಭಿವೃದ್ಧಿ ಕಾಮಗಾರಿಗಳು ಬೇಕಾ ಎಂಬ ಪ್ರಶ್ಬೆಯನ್ನ ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಈಗಾಗಲೇ ವಾಹನ ಓಡಾಟವನ್ನು ನಿರ್ಬಂಧಿಸಲಾಗಿದ್ದು ಸ್ಥಳದಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮೊಕ್ಕಂ ಹೂಡಿದ್ದಾರೆ. ಸೋಮವಾರ ಸಂಜೆ ವೇಳೆ ಕುಸಿಯುವ ಹಂತಕ್ಕೆ  ತಡೆಗೋಡೆ ತಲುಪಿತ್ತು. ಮಂಗಳವಾರ ಸಂಜೆಯಾಗುವಷ್ಟರಲ್ಲಿ ಕುಸಿದು ಬಿದ್ದಿದೆ.

ಒಂದೇ ಮಳೆಗೆ 56 ಕೋಟಿ ರೂ ವೆಚ್ಚದ ಸೇತುವೆ ಹಾಗೂ ತಡೆಗೋಡೆಯ ಕುಸಿತಗೊಂಡಿದೆ.
ಅವೈಜ್ಞಾನಿಕ ಕಾಮಗಾರಿ ತಡೆಗೋಡೆ ಕುಸಿಯಲು ಕಾರಣವನ್ನ ಜನ ಕೇಳುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಗಪ್ ಚುಪ್ ಆಗಿದ್ದಾರೆ.

ಇದನ್ನೂ ಓದಿ-https://suddilive.in/archives/19498

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close