ಸುದ್ದಿಲೈವ್/ಶಿವಮೊಗ್ಗ
ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಭಯವನ್ನು ಉಂಟುಮಾಡುವಂತೆ ಲಾಂಗ್ ಮತ್ತು ಚಾಕುಗಳನ್ನು ಹಿಡಿದುಕೊಂಡು ಪ್ರದರ್ಶಸಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಐದು ಜನ ಗಾಡಿಕೊಪ್ಪ ಯುವಕರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದರ್ಶನ್ ತಂದೆ ಚಂದ್ರಾನಾಯ್ಕ 02) ರಾಖೇಶ ತಂದೆ ಲೋಕೇಶ್ ನಾಯ್ಕ 03) ರಾಹುಲ್ ತಂದೆ ರಮೇಶ್ ನಾಯ್ಕ 04) ಸತೀಶ ತಂದೆ ಲಾಲಾ ನಾಯ್ಕ 05) ಚೇತನ್ ನಾಯ್ಕ ತಂದೆ ಜಯನಾಯ ವಾಸ ಗಾಡಿಕೊಪ್ಪ ತಾಂಡ ಈ ಐವರ ವಿರುದ್ಧ ಸು-ಮೋಟೋ ದೂರು ದಾಖಲಕಲಿಸಲಾಗಿದೆ.
ಇವರು ಮಾಡಿದ ವಿಡಿಯೋದಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ 05 ಜನ ಹುಡುಗರು ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದು ಅದರಲ್ಲಿ ಒಬ್ಬ ಹುಡುಗ ಸುಮಾರು 02 ಅಡಿ ಉದ್ದದ ಲಾಂಗ್ ಹಿಡಿದುಕೊಂಡಿದ್ದು ಇನ್ನೂ ಮೂರು ಜನ ಹುಡುಗರ ಕೈ ಗಳಲ್ಲಿ ಚಾಕುಗಳನ್ನು ಹಿಡಿದುಕೊಂಡಿದ್ದು ಮತ್ತೊಬ್ಬ ಹುಡುಗ ವಿಡಿಯೋದಲ್ಲಿ ಸ್ವಲ್ಪ ಮರೆಯಗಿ ಹಿಂದೆ ನಿಂತಿರುತ್ತಾನೆ.
ಅದಕ್ಕೆ ಬ್ಯಾಗ್ರೌಂಡ್ ನಲ್ಲಿ ‘ಮೈ ಮೇಲಿನ ಖಾಕಿ ಕೈ ಗೆ ತೂಪಾಕಿ ಬಂದ ಮೇಲೆ ಈ ನನ್ನ ಮಕ್ಕಳು ಗಂಡಸ್ಸು ಅಂತ ಅನಿಸಿಕೊಂಡಿರುವುದು, ಆದರೆ ನಮ್ಮ ಅಪ್ಪ ಅಮ್ಮ ನನ್ನ ಹುಟ್ಟೂವಾಗಲೇ ಗಂಡು ಅಂತ ಹುಟ್ಟಿಸಿದಾರೆ. ಈ ನನ್ನ ಮಗ ಅದೇನ್ ಕೀತಕ್ಕೊತ್ತನೋ ನೋಡೆಬಿಡೋಣ ಬನ್ ರೋ ಎಂದು ಆಡಿಯೋ ಪ್ಲೇ ಮಾಡಲಾಗಿದೆ. ಆ ವೇಳೆಯಲ್ಲಿ ಅವರು ಕೈಯ್ಯಲೆ.. ಮಾರಕಾಸ್ತ್ರಗಳನ್ನು ಹಿಡಿದು ನಡೆದುಕೊಂಡು ಹೋಗುವಂತೆ ವಿಡಿಯೋ ತೆಗೆಯಲಾಗಿದೆ. ಇದರ ವಿರುದ್ಧ ತುಂಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ಬೂ ಓದಿ-https://suddilive.in/archives/19136