ಚಲಿಸಿದ ವಾಮಾಚಾರದ ಪೊಟ್ಟಣ-ಗಾಬರಿಗೊಂಡ ಕುಟುಂಬಸ್ಥರು

ಸುದ್ದಿಲೈವ್/ಶಿವಮೊಗ್ಗ

ನಿಂಬು ಚಲಿಸಿದ್ದನ್ನು ನೋಡಿ ಭಯಭೀತರಾದ ಕುಟುಂಬಸ್ಥರು ವಾಮಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ವಾಮಾಚಾರದ ಬಗ್ಗೆ ಎನ್ ಸಿ ಮಾಡಿಕೊಳ್ಳಲಾಗಿದೆ.

ಬೈಕ್ ನಲ್ಲಿ ಬಂದು ವಾಮಾಚಾರದ ನಡೆಸಲಾಗಿದ್ದು ಎನ್ನಲಾದ ನಿಂಬೆಹಣ್ಣು ಹಾಗೂ ಬೆಲ್ಲ ಎಸೆದ್ರೂ ಹೋಗಿರುವ ಬಗ್ಗೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗ ನಗರದ ಕಾಶಿಪುರದ ಹನುಮಂತ ನಗರದ ಎರಡನೇ ತಿರುವಿನಲ್ಲಿ ಘಟನೆ ನಡೆದಿದೆ.

ಕಾಶಿಪುರದ ನಿವಾಸಿ ರವಿಕುಮಾರ್  ಇಂದು ಅವರ ಮನೆ ಮುಂದೆ ಬೈಕ್ ನಲ್ಲಿ ಬಂದವರು ಹರಿಸಿನ ಕುಂಕುಮ ಹಚ್ಚಿನ ನಿಂಬೆಹಣ್ಣನ್ನ ಮನೆಯ ದ್ವಿಚಕ್ರ ವಾಹನದ ಮುಂದೆ ಬಿಸಾಕಿ ಹೋಗಿರುವುದು ಸಿಸಿ ಟಿವಿ‌ಫೂಟೇಜ್ ನಲ್ಲಿ ಸೆರೆಯಾಗಿದೆ.

ಟಿವಿಎಸ್ ಬೈಕಿನಲ್ಲಿ ಬಂದ ಒಬ್ಬ ಪುರುಷ ಹಾಗೂ ಮಹಿಳೆಯಿಂದ ಈ ಕೃತ್ಯ ನಡೆದಿದೆ. ರವಿ ಕುಮಾರ್ ಮಗಳು ತುಳಸಿ ಪೂಜೆ ಮಾಡುವ ವೇಳೆ ನಿಂತಿದ್ದ ನಿಂಬೆಹಣ್ಣು ಚಲಿಸಿದೆ.  ವಾಮಾಚಾರ ಮಾಡಿದ ಬೆಲ್ಲ ಹಾಗೂ ನಿಂಬೆಹಣ್ಣು ಇದ್ದ ಪೊಟ್ಟಣ ಪತ್ತೆಯಾಗಿದೆ.

ವಾಮಾಚಾರದ ಪಟ್ಟಣ ಚಲಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ದೃಶ್ಯ ಗಮನಿಸುತ್ತಿದ್ದಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ  ಕುಟುಂಬಸ್ಥರು ದೂರು ನೀಡಿದ್ದಾರೆ. ಆದರೆ ಎಫ್ಐಆರ್ ದಾಖಲಾಗಿಲ್ಲವೆಂದು ಕುಉಂಬ ಆಕ್ಷೇಪಿಸಿದೆ.

ವಾಮಾಚಾರ ಮಾಡಿವವರನ್ನು ಬಂಧಿಸಿ ತನಿಖೆ ನಡೆಸುವಂತೆ ದೂರು ನೀಡಲಾಗಿದೆ. ಕಾನೂನು ರೀತಿ ನ್ಯಾಯ ಕೊಡಿಸಬೇಕೆಂದು ಪೊಲೀಸ್ ಇಲಾಖೆಯಲ್ಲಿ  ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/19189

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close