ಸುದ್ದಿಲೈವ್/ಶಿವಮೊಗ್ಗ
ಕಾಂಬೋಡಿಯಾದಲ್ಲಿರುವ ಕನ್ನಡಿಗರ ಹೆಣ್ಣುಮಕ್ಕಳನ್ನ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರಯವ ಅರೋಪ ಕೇಳಿ ಬರುತ್ತಿದೆ. ವಿದೇಶಗಳಿಗೆ ಕಳುಹಿಸುವ ಇಂತಹ ಏಜೆನ್ಸಿಗಳನ್ನ ಲೀಸ್ಟ್ ಮಾಡಲಾಗುತ್ತಿದೆ ಎಂದು ಅನಿವಾಸಿ ಭಾರತಿ ನಿವಾಸಿಗಳ ಹಿತರಕ್ಷಣ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದರು.
ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅನಿವಾಸಿ ಕನ್ನಡಿಗರ ಹಿತರಕ್ಷಣಾ ಸಮಿತಿಯ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಏಜೆನ್ಸಿಗಳ ಪಟ್ಟಿಯನ್ನ ಜಿಲ್ಕಾಧಿಕಾರಿಗಳಿಗೆ ಕಳುಹಿಸಲಾಗುವುದು. ಆವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.
ರಾಜ್ಯದ ಇತರೆ ಭಾಗಗಳಲ್ಲಿ ಹಕ್ಕಿಪಿಕ್ಕಿ ಜನಾಂಗದವರು ವ್ಯಾಪಾರಕ್ಕೆ ಹೋದಾಗ ಅವರನ್ನ ಪೊಲೀಸರು ಹಿಡಿದು ಕೂರಿಸುತ್ತಾರೆ. ಹಾಗಾಗಿ ಐಡಿ ಕಾರ್ಡ್ ನೀಡುವಂತೆ ಹಕ್ಕಿಪಿಕ್ಕಿ ಜನಾಂಗದ ನಾಯಕರು ಸಭೆಯಲ್ಲಿ ಒತ್ತಾಯಿಸಿದರು. ಇದಕ್ಮೆ ಉತ್ತರಿಸಿದ ಡಾ.ಆರತಿ ಕೃಷ್ಣ, ಇದಕ್ಕೆಬೇರೆ ಇಲಾಖೆ ಇದೆ. ಆದರೆ ನಮ್ಮಿಂದ ಹೊರ ದೇಶದಲ್ಲಿರುವರಿಗೆ ಗುರುತಿನ ಚೀಟಿ ಕೊಡುವುದಾಗಿ ಹೇಳಿದರು.
ಹೊರದೇಶದಲ್ಲಿರುವ ಅನಿವಾಸಿ ಭಾರತದವರು ನಮ್ಮ ಹಿತರಕ್ಷಣ ಸಮಿತಿಯೊಂದಿಗೆ ನೋಂದಣಿ ಮಾಡಿಸಿಕೊಳ್ಳಿ, ಗಿಡಮೂಲಿಕೆಯಿಂದ ತಯಾರಿಸುವ ಔಷಧಿಗಳನ್ನ ಹೊರದೇಶದಲ್ಲಿ ಮಾರಾಟ ಮಾಡಲು ಕೆಲ ಇಲಾಖೆಗಳು ಅಡ್ಡಿಪಡಿಸುತ್ತಿವೆ. ಇದಕ್ಜೆ ಅನುಕೂಲ ಮಾಡಿಕೊಡಲು ಹಕ್ಕಿಪಿಕ್ಕಿ ಮಹಿಳೆಯರು ಆಗ್ರಹಿಸಿದರು. ತಮ್ಮ ಸಮಸ್ಯೆಯ ಪಟ್ಟಿ ತಯಾರಿಸಿ ಸಮಿತಿಗೆ ನೀಡಲು ಉಪಾಧ್ಯಕ್ಷರು ನಿರ್ದೇಶಿಸಿದರು.
28 ಪಾಸ್ ಪೋರ್ಟ್ ವೆರಿಫಿಕೇಷನ್ ಗೆ ಬಂದಿದೆ ಇದರಲ್ಲಿ ಐದು ಪಾಸ್ ಪೋರ್ಟ್ ನೀಡಲಾಗಿದೆ ಉಳಿದ ಅರ್ಜಿ ಈಗ ಬಂದಿದೆ ಪರಿಶೀಲಿಸಿ ಕೊಡುವುದಾಗಿ ಅಡಿಷನ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ತಿಳಿಸಿದರು.
ಪ್ರತ್ಯೇಕ ಸಚಿವಾಲಯ ಮಾಡಲು ಪ್ರಸ್ತಾವನೆ ಇದೆ. ಕೇರಳದ ಮಾದರಿಯಲ್ಲಿ ಸಚಿವಾಲಯ ಆರಂಭಿಸಲು ಯೋಚಿಸಲಾಗುತ್ತಿದೆ. ಗಲ್ಫ್ ನಲ್ಲಿ ಅನಿವಾಸಿ ಕನ್ನಡಿಗರು ಇದ್ದಾರೆ. ಕೇರಳದಲ್ಲಿ ಪ್ರತ್ಯೇಕ ಸಚಿವಾಲಯವಿದೆ. 350 ಕೋಟಿ ಬಜೆಟ್ ನ್ನ ಕೇರಳದಲ್ಲಿ ಮೀಸಲಿಡಲಾಗುತ್ತಿದೆ ಇಲ್ಲೂ ಹಣ ತೆಗೆದಿಡಲು ಕೋರಲಾಗಿದೆ ಎಂದರು.
ಗಲ್ಫ್ ನಲ್ಲಿ ವರ್ಕರ್ಸ್ ಇದ್ದಾರೆ ಬ್ಲೂಕಾಲರ್ ವರ್ಕರ್ಸ್ ಗೆ ಸಮಸ್ಯೆ ಹೆಚ್ಚು. ಸ್ವದೇಶಕ್ಕೆ ಬರುವ ಈ ಬ್ಲೂಕಾಲರ್ ರವರನ್ನ ಹೆಂಡತಿಯವರೇ ಮನೆಯಿಂದ ಹೊರಹಾಕುತ್ತಿರುವ ಉದಹರಣೆಗಳಿವೆ.
ಫ್ರಾಡ್ ಏಜೆನ್ಸಿ ಮೂಲಕ ಕೆಲಸವೊಂದಕ್ಕೆ ವಿದೇಶಕ್ಕೆ ಕರೆದೊಯ್ಯಲಾಗಿದೆ. ಆತ ನ ಏಕಗೊಂಡಿದ್ದೇ ಬೇರೆ ಕೆಲಸವಾದರೆ, ಅಲ್ಲಿ ಆತನಿಗೆ ಬೇರೆ ಕೆಲಸ ನೀಡಲಾಗಿದೆ. ಆತನ ಪಾಸ್ ಪೋರ್ಟ್ ನೀಡುತ್ತಿಲ್ಲ. ಸನಸ್ಯೆಗೆ ಒಳಗಾಗಿದ್ದಾರೆ ಎಂದು ಡಾ.ಆರತಿ ಕೃಷ್ಣ ಸಭೆಗೆ ತಿಳಿಸಿದರು.
ಕಾಂಬೋಡಿಯಾ ವಿಯಟ್ನಾಮ್ ನಿಂದ ಮೂರು ಜನರನ್ನ ಪಾಸ್ಪೋರ್ಟ್ ಸಮಸ್ಯೆಯಿಂದ ಪಾರುಮಾಡಲಾಗಿದೆ. ಅಲ್ಲಿಂದ ಡೆಡ್ ಬಾಡಿ ತರುವಾಗ ಕಷ್ಟವಾಗುತ್ತಿದೆ. ನಮ್ಮ ಇಲಾಖೆ ಈ ಹಿಂದೆ ಐದು ವರ್ಷದಿಂದ ಆಕ್ಟಿವೇಟ್ ಇಲ್ಲದ ಕಾರಣ ಹಾಗೂ ಕಚೇರಿಗೆ ಬಜೆಟ್ ಇಲ್ಲದ ಕಾರಣ ಕೆಲವು ಸಮಸ್ಯೆಗಳಾಗಿದ್ದವು. ಈ ಬಾರಿ ಬಜೆಟ್ ನಲ್ಲಿ ಹಣ ಕೇಳಲಾಗುತ್ತಿದೆ. 14 ಲಕ್ಷ ಕನ್ನಡಿಗರು ಹೊರ ದೇಶದಲ್ಲಿದ್ದಾರೆ ಎಂದು ಡಾ.ಆರತಿ ಕೃಷ್ಣ ಸಭೆಗೆ ತಿಳಿಸಿದರು
ಸಭೆಯಲ್ಲಿ ಡಿಸಿ ಗುರುದತ್ತಹೆಗಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿ ಸತ್ಯನಾರಾಯಣ, ಪ್ರದೀಪ್ ನಿಕ್ಕಂ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/19090