Girl in a jacket

ಇಂದಿನಿಂದ ನೀರಿನ ಲಭ್ಯತೆ ಮೇರೆಗೆ ಭದ್ರ ಜಲಾಶಯದಿಂದ ಎರಡೂ ನಾಲೆಗೆ ನೀರು ಹರಿಸಲು ಕಾಡಾ ಸಭೆ ನಿರ್ಧಾರ

ಕಾಡಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕರು


ಸುದ್ದಿಲೈವ್/ಶಿವಮೊಗ್ಗ


ಭದ್ರ ಅಚ್ಚುಕಟ್ಟು ಮುಂಗಾರು ಹಂಗಾಮಿನ 85 ನೇ ನೀರಾವರಿ ಸಲಹಾ ಸಮಿತಿಯ ಸಭೆ ಇಂದು‌ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿಯಲ್ಲಿ  ಕಾಡಾ ಅಧ್ಯಕ್ಷ ಅಂಶುಮಂತ್ ಗೌಡ, ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ನಡೆದಿದೆ. 


ಇಂದಿನಿಂದ ನೀರು ಬಿಡಾಗುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನೀರಿನ ಲಭ್ಯತೆಯ ಮೇರೆಗೆ ನಾಲೆಗಳ ಕೊನೆ ಹಂತದವರೆಗೂ ನೀರು ಬಿಡಲು ತೀರ್ಮಾನಿಸಲಾಗುತ್ತದೆ.  ಬಹುಶಃ ಸಂಜೆ ಅಥವಾ ರಾತ್ರಿಯ ವೇಳೆಗೆ ಜಲಾಶಯದಿಂದ ಎರಡೂ ನಾಲೆಗಳಲ್ಲಿ ನೀರು ಹರಿಸಲಾಗುತ್ತದೆ. 


ಕಾಡಾ ಅಧ್ಯಕ್ಷ ಅಂಶುಮಂತ್ ಗೌಡ ಮಾತನಾಡಿ ನೀರಿನ ನಿರ್ವಹಣೆಗೆ ಇವತ್ತಿನಿಂದ ಬಿಡಲು ಸಚಿವರ ಅನುಮತಿಯ ಮೇರೆಗೆ ತೀರ್ಮಾನಿಸಲಾಗಿದೆ. 


ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕಳೆದ ಬಾರಿ ಜಲಾಶಯದಲ್ಲಿ ನೀರಿಲ್ಲದ ಕಾರಣ  ರೈತರು ದಿಕ್ಕಾರ ಕೂಗಿದ್ದರು. ಈ ಬಾರಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ವೇಗವಾಗಿ ಜಲಾಶಯ ತುಂಬುತ್ತಿದೆ. ನೀರಾವರಿ ಸಚಿವರ ಜೊತೆ ಮಾತನಾಡಿ ಕಾಡ ಅಧ್ಯಕ್ಷರಿಗೆ ಸಹಕಾರ ನೀಡಲಾಗುವುದು ಎಂದರು. 


ಸಿಬ್ಬಂದಿಗಳನ್ನ ಮತ್ತು ನೀರಿನ ನಿರ್ವಹಣೆ ಮಾಡಲಾಗುವುದು.  ಭದ್ರ ಡ್ಯಾಂ ನಿರ್ಮಿಸಿದ್ದು ಭತ್ತಕ್ಕೆ. ಆದರೆ ಬೆಳೆ ಪದ್ದತಿ ಬದಲಾಗಿದೆ. ಇದನ್ನ ರೈತ ಮುಖಂಡರು ಸಭೆಗೆ ತಿಳಿಸಿದ್ದಾರೆ. ಅವರ ಬೇಡಿಕೆಯಂತೆ ನೀರನ್ನ ಬಿಡುವ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಸೋಣ ಎಂದರು. 


ಅಡಿಕೆಗೆ ಸ್ವಿಚ್ ಓವರ್ ಆಗಿರುವುದರಿಂದ ಬೆಳೆಪದ್ಧತಿಯಂತೆ ನೀರು ಬಿಡುವ ಅನಿವಾರ್ಯವಿದೆ. ತುಂಗ ಮತ್ತು ಭದ್ರ ನೀರಾವರಿ ಯೋಜನೆಗೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ರನ್ನ ಇಲ್ಲೇ ಕರೆಯಿಸಿ ಸಭೆ ಮಾಡಲಾಗುವುದು. ತಜ್ಞರ ಸಮಿತಿ ಕರೆಯಿಸಲಾಗುವುದು‌. ನರೇಗಾದಲ್ಲಿ ಪಿಡಿಒ ಆಟಾಡುತ್ತಿದ್ದರೆ ಅವರನ್ನ ಸಸ್ಪೆಂಡ್ ಮಾಡಲು ಡಿಸಿಯವರು ಮುಂದಾಗಲಿ ಎಂದು ಸೂಚಿಸಿದರು.‌


ಡಿಸಿಯವರೆ ಹೆಡ್ ಆಗಿರುತ್ತದೆ. ಎನ್ ಆರ್ ಐಜಿಯಲ್ಲಿ ಕಾನೂನಿನ ತೊಡಕಿದ್ದರೆ, ಮಾನವೀಯತೆಯಲ್ಲಿ ಕೈಗೊಳ್ಳಿ. ಆರ್ ಡಿಪಿಆರ್ ನಲ್ಲೂ ನಾಲೆಗಳ ದುರಸ್ಥಿ ಕೈಗೊಳ್ಳಲು ಅವಕಾಶ ಎಸಿಎಫ್ ನವರು ನಿರ್ಧರಿಸಿ ಇವತ್ತಿನಿಂದಲೇ ನೀರು ಬಿಡುವ  ಬಗ್ಗೆ ಸಚಿವ ಮಧು ಆಕ್ಷೇಪಿಸಿದರು. 


ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಹೆಸ್ ಆರ್ ಬಸವರಾಜಪ್ಪ, ಕೆ.ಟಿ.ಗಂಗಾಧರ್, ದಾವಣಗೆರೆ ರೈತ ಒಕ್ಕೂಟದ ಲಿಂಗರಾಜು, ಭದ್ರ ಎಡದಂಡೆಯ ನೀರು ಬಳಕೆದಾರ ಸಂಘ ರಘುನಾಥ್, ಚನ್ನಗಿರಿ ಶಾಸಕ ಶಿವಗಂಗೆ ಬಸವರಾಜ್, ಹೊನ್ನಾಳಿ ಶಾಸಕ ಶಾಂತನಗೌಡ, ಎಂಎಲ್ ಸಿ ಬಲ್ಕೀಸ್ ಭಾನು, ಶಾಸಕಿ ಶಾರದಾ ಪೂರ್ಯನಾಯ್ಕ್, ಡಿಸಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್, ಶಾಸಕ ಬಿ.ಕೆ.ಸಂಗಮೇಶ್ವರ್, ಹರಿಹರ ಶಾಸಕ ಹರೀಶ್, ಮಾಯಕೊಂಡ ಶಾಸಕ ಬಸವಂತಪ್ಪ ಸಂತೇಕಡೂರು ವಿಜಿ(ಧಣಿ), ಭದ್ರ ಜಲಾಶಯದ ಇಂಜಿನಿಯರ್ ರವಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://www.suddilive.in/2024/07/blog-post_631.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live