ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ಮೂಕರ ಮತ್ತು ಶ್ರವಣಮಾಂಧ್ಯರ ಸಂಘದ 10 ನೇ ದಶಮಾನೋತ್ಸವ ಸಂಭ್ರಮದ ಪ್ರಯುಕ್ತವಾಗಿ ಇಂದು ಮತ್ತು ನಾಳೆ ರಾಜ್ಯ ಮಟ್ಟದ ಕಿವುಡರ 19 ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದಿದೆ.
ಮೈಸೂರು, ಬೆಂಗಳೂರು, ವಿಜಯನಗರ, ಚಿಕ್ಕಮಗಳೂರು, ಗದಗ ಸೇರಿ 16 ಜಿಲ್ಲೆಯಿಂದ ಸುಮಾರು 250 ಜನ ಸ್ಪರ್ಧಿಗಳು ಭಾಗಿಯಾಗಿದ್ದರು. ಮಾತು ಬಾರದ ಮತ್ತು ಕಿವಿ ಕೇಳದ ಈ ಪ್ರತಿಭೆಗಳ ಆಟದ ವೈಖರಿ ನೋಡುಗರನ್ನ ಸೂರೆಗೊಳಿಸುವಂತಿತ್ತು.
ಇಂದು ಲೀಗ್ ಪಂದ್ಯಾವಳಿಗಳು ನಡೆಯುತ್ತಿದೆ. 25 ಟೇಬಲ್ ನಲ್ಲಿ 50 ಜನ ಕೂತು ಪಂದ್ಯವಾಡಿದ್ದು ವಿಶೇಷವಾಗಿತ್ತು. ಇಲ್ಲಿ ಸಮಯ ನಿಗದಿ ಮಾಡಿಲ್ಲ. ನಾಳೆಯ ಎಲ್ಲಾ ಪಂದ್ಯಗಳಿಗೆ ಸಮಯ ನಿಗದಿಯಾಗಲಿದೆ.
ಪಂದ್ಯಾವಳಿಯನ್ನ ಉದ್ಘಾಟಿಸಿದ ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಚೆಸ್ ಮೈಂಡ್ ಗೇಮ್ ಆಗಿದೆ. 16 ಜಿಲ್ಲೆಯಿಂದ ಸ್ಪರ್ಧೆಗಳು ಬಂದಿದ್ದೀರಿ. ಈ ಪಂದ್ಯಾವಳಿಯಲ್ಲಿ ಭಾಗಿಯಾಗಿ ಗೆದ್ದವರು ಅಂತರಾಷ್ಟ್ರೀಯ ಮಟ್ಟಕ್ನೂ ಕಾಲಿಡಲು ಅವಕಾಶವಿದೆ ಎಂದರು.
ಇದನ್ನೂ ಓದಿ-https://suddilive.in/archives/19085