MrJazsohanisharma

ಸಹಾಯಕ ಕೃಷಿ ನಿರ್ದೇಶಕರಿಂದ ಜಮೀನುಗಳ ಭೇಟಿ-ಓಸಲ್ ಭೀಮಾ ಯೋಜನೆಗೆ ದಿನಾಂಕ ಫಿಕ್ಸ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲ್ಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣ ಮಳೆಯಾಗುತ್ತಿದೆ. ಜುಲೈ ಒಂದರಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಸರಾಸರಿ 134 ಮಿ.ಮೀ.ಗೆ 286 ಮಿ.ಮೀ. ಮಳೆ ಆಗಿದ್ದು ಇಲ್ಲಿಯವರೆಗೆ ವಾಡಿಕೆಗಿಂತ ಶೇಕಡಾ 113 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿರುತ್ತದೆ. 




ಹವಾಮಾನ ಇಲಾಖೆಯ ಪ್ರಕಾರ ಇನ್ನು ಒಂದು ವಾರದವರೆಗೆ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಯಿದ್ದು, ಸಹಾಯಕ ಕೃಷಿ ನಿರ್ದೇಶಕರು ಜಿಲ್ಲೆಯ ಹಾನಿಗೊಳಗಾದ ರೈತರುಗಳಿಗೆ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ಪ್ರಮುಖ ಕೃಷಿ ಬೆಳೆಯಾಗಿರುವ ಮೆಕ್ಕೆಜೋಳ ಈಗಾಗಲೇ ಸುಮಾರು 13582 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು 30 ರಿಂದ 50 ದಿನಗಳ ಹಂತದಲ್ಲಿರುತ್ತದೆ. ಕಾಲುವೆ ಹಾಗೂ ಕೆರೆಯ ಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿ ನೀರು ನಿಂತಿರುವುದು ಕಂಡುಬಂದಿದ್ದು, ಇತರೆ ರೈತರ ಜಮೀನುಗಳಲ್ಲಿ ಪ್ರಸ್ತುತ ಯಾವುದೇ ಹಾನಿ ಆಗಿರುವುದು ಕಂಡುಬಂದಿರುವುದಿಲ್ಲ. 


ಒಂದು ವೇಳೆ ರೈತರ ಜಮೀನಿನಲ್ಲಿ ನೀರು ನಿಂತಿದ್ದರೆ ಬಸಿಗಾಲುವೆ ಮಾಡಿ ಹೊರಹಾಕಬೇಕು. ಹೆಚ್ಚಿನ ತೇವಾಂಶದಿಂದಾಗಿ ಬೆಳೆಯಲ್ಲಿ ಪೋಷಕಾಂಶ ಕೊರತೆಯು ಉಂಟಾಗುವುದರಿಂದ ಮಳೆ ನಿಂತ ನಂತರ ಒಂದು ವೇಳೆ ಬೆಳೆಯು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ನ್ಯಾನೊ ಯೂರಿಯಾ ಅಥವಾ ನ್ಯಾನೊ ಡಿಎಪಿ (2.5mಟ ಪ್ರತಿ ಲೀಟರ್ ನೀರಿಗೆ) ಅಥವಾ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (2.5 ಗ್ರಾಂ ಪ್ರತಿ ಲೀಟರ್ ನೀರಿಗೆ)ವನ್ನು ಸಿಂಪರಣೆ ಮಾಡಿ. 


ಬೆಳೆಯು ತಿಳಿ ಹಸಿರು ಬಣ್ಣದಲ್ಲಿದ್ದರೆ ಎಕರೆಗೆ 20 ಕೆಜಿ ಯಷ್ಟು ಯೂರಿಯಾ ಮತ್ತು 10 ಕೆಜಿ ಪೊಟ್ಯಾಶ್ ಅನ್ನು ಹಾಕಿ. ಕೇದಿಗೆ ಮತ್ತು ಎಲೆ ಚುಕ್ಕೆ ರೋಗದ ಬಾಧೆ ಕಂಡುಬರುವ ಸಾಧ್ಯತೆ ಇರುವುದರಿಂದ ಮೆಟಾಲಾಕ್ಸಿಲ್+ಮ್ಯಾಂಕೊಜೆಬ್ ಶಿಲೀಂದ್ರನಾಶಕ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ವನ್ನು ಮುಂಜಾಗ್ರತಾ ಕ್ರಮವಾಗಿ ಸಿಂಪಡಿಸಬೇಕು.


ಬೆಳೆಹಾನಿಗೆ ಫಸಲ್ ಭೀಮಾ ಯೋಜನೆ ಪಡೆಯಲು ದಿನಾಂಕ ಫಿಕ್ಸ್


ಮೆಕ್ಕೆಜೋಳ ಬೆಳೆಗೆ ದಿನಾಂಕ 31-07-2024 ರವರೆಗೆ ಹಾಗೂ ಭತ್ತದ ಬೆಳೆಗೆ 16-08-2024 ರವರೆಗೆ ಫ್ರದಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಅವಕಾಶವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿಮಾ ಕಂತು ಪಾವತಿಸಿ ನೊಂದಾಯಿಕೊಳ್ಳಿ. 


ಅತಿಯಾದ ಮಳೆಯಿಂದಾಗಿ ಬೆಳೆಯು ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ವೈಯಕ್ತಿಕವಾಗಿ ಪರಿಹಾರ ನೀಡಲು ವಿಮಾ ಯೋಜನೆಯಡಿ ಅವಕಾಶವಿರುವುದರಿಂದ, ಮೆಕ್ಕೆಜೋಳ ಬೆಳೆಗೆ ವಿಮಾ ಯೋಜನೆಯಡಿ ನೊಂದಾಯಿಸಿಕೊಂಡಿರುವ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ವಿಮಾ ನೊಂದಣಿ ಪತ್ರ ಮತ್ತು ಆಧಾರ್ ಕಾರ್ಡ್ ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ರಮೇಶ್ ಎಸ್.ಟಿ ರವರು ರೈತರಲ್ಲಿ ಮನವಿಯನ್ನು ಮಾಡಿದ್ದಾರೆ. 

                              ಇದನ್ನೂ ಓದಿ-https://www.suddilive.in/2024/07/blog-post_280.html

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close