ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟಭಕ್ತ ಬಳಗದ ವತಿಯಿಂದ ಜನಜಾಗೃತಿ ಜಾಥ

ಸುದ್ದಿಲೈವ್/ಶಿವಮೊಗ್ಗ

ಜು.18 ರಂದು ಗೋವಿಂದಾಪುರ ಮನೆಗಳನ್ನ ಆದಷ್ಟು ಬೇಗ ಹಂಚುವಂತೆ, ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸುವಂತೆ ಹಾಗೂ ಇತರೆ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರಭಕ್ತ ಬಳಗದವತಿಯಿಂದ ಬೃಹತ್ ಜನಾಗ್ರಹ ಜಾಥ ಹಮ್ಮಿಕೊಂಡಿದ್ದಾರೆ.

ಸುದ್ದಿಗೋಷ್ಣಟಿಯಲ್ಲಿ ಮಾತನಾಡಿದ ಅವರು, ಗೋವಿಂದಾಪುರ ಆಶ್ರಯ ಮನೆಗಳ ಸಮುಚ್ಚಾಯಕ್ಕೆ ಎಲ್ಲರಿಂದಲೂ ಹಣ ಪಡೆದು ಮೂರು ವರ್ಷದಲ್ಲಿ ಮನೆ ನೀಡುವುದಾಗಿ ಹೇಳಿ 288 ಮನೆಗಳಿಗೆ ಬೀಗದ ಕೈ ನೀಡಲಾಗಿದೆ.‌ 2722 ಮನೆಗಳಿಗೆ ಕೀಕೊಡುವುದಾಗಿ ಹೇಳಿ ಸರ್ಕಾರ ನೀಡಲಿಲ್ಲ ಎಂದು ದೂರಿದರು.

ವಸತಿ ಗೃಹ ಸಚಿವ ಜಮೀರ್ ಅಹ್ಮದ್ ರನ್ನ‌ಭೇಟಿ ಮಾಡಿ ಬಂದರೂ ಪ್ರಯೋಜನವಾಗಿಲ್ಲ. ಹಣ ಕಟ್ಟಿದ ಜನ ಹಣ ವಾಪಾಸ್ ಕೇಳಿತ್ತಿದ್ದಾರೆ. ಈ ಸಂಬಂಧ ಜು.18 ರಂದು ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣದಿಂದ ಗೋಪಿ ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ಮಾಡುವುದಾಗಿ ಹೇಳಿದರು.

ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡರೆ ಬಿಡೊಲ್ಲ. ಮತ್ತೆ ವಸತಿ ಸಚಿವ ಜಮೀರ್ ಅವರನ್ನ ಮೊಬೈಲ್ ನಲ್ಲಿ ಮಾತನಾಡಿ ಶಿವಮೊಗ್ಗಕ್ಕೆ ಬರಲು ಒತ್ತಾಯಿಸುತ್ತೇವೆ. ನಿಯೋಗವೂ ಹೋಗಿ ಮಂತ್ರಿಗಳನ್ನ ಭೇಟಿ ಮಾಡಲಾಗುವುದು ಎಂದರು.

6.67 ಲಕ್ಷ ರೂ ಕಟ್ಟಬೇಕಿದ್ದ ಪ.ಜಾ ಮತ್ತು ಪ.ಪಂದವರು 3.7 ಲಕ್ಷ ರೂ ಸಬ್ಸಿಡಿ ದೊರೆಯುತ್ತದೆ. ಇವರು 50 ಸಾವಿರ ಕಟ್ಟಿದರೆ ಮನೆ ಸ್ವಂತದ್ದಾಗುತ್ತದೆ. ಮತ್ತು 7.70 ಲಕ್ಷ ರೂ. ಇರುವ 3.20 ಸಾಮಾನ್ಯ ವರ್ಗದ ಜನರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇವರು 80 ಸಾವಿರ ರೂ. ಹಣ ಕಟ್ಟಬೇಕು. ಸರ್ಕಾರ ಮನೆಯನ್ನ ಹಂಚುವುದನ್ನ ಮರೆತಿದೆ. ಹಾಗಾಗಿ ಜಾಥ ನಡೆಸಲಾಗುತ್ತಿದೆ ಎಂದು ದೂರಿದರು.

ಗೋವಿಂದಾಪುರದ ಆಶ್ಯಯ ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲ. ತುಂಗ ನದಿಯಿಂದ ಬರಬೇಕಿದ್ದ ಪಣಯಪ್ ಲೈನ್ ಕಾಮಗಾರಿ ಸ್ಲೋ ಆಗಿ ನಡೆಯುತ್ತಿದೆ. ರಸ್ತೆ ಆಗಿದೆ. ಆದರೆ ಗುಂಡಿಗಳಿಂದ ತುಂಬಿದೆ. ಒಂದು ಕಿಮಿ ದೂರದ ರಸ್ತೆಗೆ ಬಲ್ಪ್ ಇಲ್ಲ.‌ಕಾರ್ಪರೇಷನ್ ನಿಂದ ಕಸ ಎತ್ತುತ್ತಿಲ್ಲ. ಬಡವರಿಗೆ ಮನೆ ಕೊಡುವುದಾಗಿ ಘೋಷಣೆ ಮಾಡಲಾಗುತ್ತಿಲ್ಲ.‌ ಸಚಿವ ಜಮೀರ್ ಅಹ್ಮದ್ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜಕಾರಣ ಮಾಡುತ್ತಿದ್ದಾರೆ. ಸೆಷನ್ ಮುಗಿಯುವ ತನಕ ಕಾದು ನಂತರ ಅವರಿಗೆ ಮನವಿ ನೀಡುವುದಾಗಿ ಹೇಳಿದರು.

ದಲಿತ ಉದ್ದಾರಕ ಎಂದು ಸ್ವಾತಂತ್ರ್ಯ ಬಂದಾಗಿನಿಂದ ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ ಯಾವ ದಲಿತರಿಗೆ ಅನುಕೂಲವನ್ನ ಮಾಡಿಕೊಡುತ್ತಿಲ್ಲ. ಕಾಂಗ್ರೆಸ್ ಲೂಟಿಕೋರರಾಗಿದ್ದಾರೆ. ಎಸ್ ಸಿ ಎಸ್ಟಿ ಸಮಾಜದವರು ಕಾಂಗ್ರೆಸ್ ನ್ನ ಕೈಬಿಡುತ್ತಿದೆ ಎಂದು ದೂರಿದರು.

ಕಟ್ಟಡ ಕಾರ್ಮಿಕರಿಗೆ ವಿದ್ಯಾಭ್ಯಾಸಕ್ಕೆ ನೀಡುವ ಸ್ಕಾಲರ್ ಶಿಪ್ ಎರಡು ವರ್ಷದಿಂದ ನೀಡುತ್ತಿಲ್ಲ. 38 ಸಾವಿರ ಜನ ಕಟ್ಟಡ ಕಾರ್ಮಿಕರು ಇದ್ದಾರೆ. ಹೆರಿಗೆ, ಮರಣ ಹೊಂದಿದ ಜನರಿಗೆ ಹಣ ಕೊಡಬೇಕಿದ್ದ ಸರ್ಕಾರ ಎರಡು ವರ್ಷದಿಂದ ನೀಡುತ್ತಿಲ್ಲ ಎಂದು ದೂರಿದರು.

ಸಂತೋಷ್ ಲಾಡ್ ಕಾರ್ಮಿಕ ಇಲಾಖೆ ಸಚಿವರಾಗಿದ್ದಾರೆ. ಇವರನ್ನೂ ನಮ್ಮ‌ನಿಯೋಗ ಕಟ್ಟಡ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡಿಎಂದು ಆಗ್ರಹಿಸಿ ಮನವಿ ಕೊಡಲಿದ್ದೇವೆ ಎಂದರು.

ಪಾಲಿಕೆ ಚುನಾವಣೆ ಇಲ್ಲವಾಗಿದೆ. ತಕ್ಷಣ 35 ವಾರ್ಡ್ ಇರುವಂತೆ ತಕ್ಷಣ ಚುನಾವಣೆ ನಡೆಯಬೇಕು. ಮಳೆಗಾಲದಲ್ಲೂ ಅನೇಕರ ಮನೆಗೆ ನೀರು ಬರುತ್ತಿಲ್ಲ. ರಸ್ತೆ ಗುಂಡಿ ಬಿದ್ದಿದೆ. ಸರ್ಕಾರ ಚುನಾಯಿತ ಪ್ರತಿನಿಧಿಗಳಿಂದ ನಡೆಯುತ್ತಿಲ್ಲ ಅಧಿಕಾರಿಗಳ ಮೂಲಕ ಆಡಳಿತ ನಡೆಯುತ್ತಿದೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/19546

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close