ಹೊಳೆಹೊನ್ನೂರಿನಲ್ಲಿ ಖಾಸಗಿ ಬಸ್ ನಿಂದ ಹಿಟ್ ಅಂಡ್ ರನ್

 


ಸುದ್ದಿಲೈವ್/ಹೊಳೆಹೊನ್ನೂರು


ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಪಾದಾಚಾರಿಗೆ ಹೊಡೆತಬಿದ್ದಿದ್ದು, ಆತನ ಮೂಳೆ ಮುರಿದಿದೆ.‌ ಬಸ್ ಅಪಘಾತ ಪಡಿಸಿ ಮುಂದೆ ಸಾಗಿದೆ.‌


ಅಗಸನಹಳ್ಳಿ ಗ್ರಾಮದ ನಿವಾಸಿ ಬಸವರಾಜ್ ಹೊಳೆಹೊನ್ನೂರು ನೃಪತುಂಗ ವೃತ್ತದ ಬಳಿ ಕೆನರಾ ಬ್ಯಾಂಕ್ ಮುಂದೆ ನಡೆದುಕೊಂಡು ಬರುತ್ತಿದ್ದು, ಶಿವಮೊಗ್ಗದ ಕಡೆಯಿಂದ ಬಂದ ಬಸ್ ದಿಡೀರ್ ಎಂದು ರಸ್ತೆ ಕೆಳೆಗೆ ಇಳಿಸಿ ಅಪಘಾತಪಡಿಸಿದ್ದಾನೆ.‌ 


ಬಸವರಾಜ್ ಗೆ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಆತನನ್ನ ಉಪಚರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ ಚಾಲಕ ಹಿಟ್ ಡ್ ರನ್‌ ಮಾಡಿದ್ದಾನೆ. ಬಸವರಾಜ್‌ ಅವರು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ


ವೈದ್ಯಕೀಯ ವರದಿಯಲ್ಲಿ ಬಸವರಾಜ್ ಗೆ ಎದೆಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿದಿರುವುದಾಗಿ ತಿಳಿದು ಬಂದಿದೆ. ಉಸಿರಾಟಕ್ಕೆ ತೊಂದರೆ ಉಂಟುಮಾಡಿ ಅಪಘಾತ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹೋಗಿರುವ ಖಾಸಗಿ ಬಸ್ ನ್ನ ಪತ್ತೆ ಮಾಡಿಕೊಡುವಂತೆ ಪತ್ನಿ‌ ಹೊಳೆಹೊನ್ನೂರಿನಲ್ಲಿ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_391.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close