Girl in a jacket

ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ

 


ಸುದ್ದಿಲೈವ್/ಶಿವಮೊಗ್ಗ


24 ಗಂಟೆಯಲ್ಲಿ ಮಳೆಯ ಪ್ರಮಾಣ ಕುಸಿದ ಹಿನ್ನಲೆಯಲ್ಲಿ ಭೋರ್ಗೆರೆಯುವ ಹಂತಕ್ಕೆ ತಲುಪಿದ ನದಿಗಳ ಶಾಂತವಾಗಿ ಹರಿಯುತ್ತಿವೆ. ತುಂಗ, ಭದ್ರ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿವೆ.


ಗಾಜನೂರಿನ ತುಂಗ ಜಲಾಶಯಕ್ಕೆ ನಿನ್ನೆ ಬೆಳಿಗ್ಗೆ 85 ಸಾವಿರ ಕ್ಯೂಸೆಕ್ ಹರಿದು ಬರುತ್ತಿತ್ತು.‌ ರಾತ್ರಿ ವೇಳೆ  70 ಸಾವಿರ ಕ್ಯೂಸೆಕ್ ಗೆ ತಲುಪಿತ್ತು. ಇಂದು  ಬೆಳಿಗ್ಗೆ 38190 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 21 ಗೇಟಿನ ಮೂಲಕ ನದಿಗೆ 36500 ಕ್ಯೂಸೆಕ್ ನೀರನ್ನ ಹರಿಸಲಾಗುತ್ತಿದೆ. ಉಳಿದಿದ್ದನ್ನ  ಚಾನೆಲ್ ಗಳ ಮೂಲಕ ಹರಿಸಲಾಗುತ್ತಿದೆ.


ಭದ್ರನದಿಗೆ ನಿನ್ನೆ ಬೆಳಿಗ್ಗೆ 49 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ 25 ಸಾವಿರ ಕ್ಯೂಸೆಕ್ ಒಳಹರಿವಿದೆ. ನಿನ್ನೆ 178 ಅಡಿ ನೀರು ಸಂಗ್ರಹವಾಗಿದ್ದ ಭದ್ರ ಜಲಾಶಯದಲ್ಲಿ ಇಂದು  180.7 ಅಡಿ ನೀರು ಸಂಗ್ರಹವಾಗಿದೆ.  64.877 ಟಿಎಂಸಿ ನೀರು ಸಂಗ್ರಹವಾಗಿದೆ.


ಲಿಂಗನಮಕ್ಕಿಯಲ್ಲೂ ಒಳಹರಿವು ಕಡಿಮೆಯಾಗಿದೆ. ನಿನ್ನೆ ಬೆಳಿಗ್ಗೆ 65 ಸಾವಿರ ಕ್ಯೂಸೆಕ್ನೀರು ಒಖಹರಿವಿತ್ತು. ಇಂದು ಬೆಳಿಗ್ಗೆ 37733 ಕ್ಯೂಸೆಕ್ ನೀರು ಒಳಹರಿವಿದೆ. 1819 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 1808.05 ಅಡಿ ನೀರು ಸಂಗ್ರಹವಾಗಿತ್ತು. ನಿನ್ನೆಗಿಂತ 1.05 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. 151.64 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ ಸಧ್ಯಕ್ಕೆ 117.45ಟಿಎಂಸಿ ನೀರು ಸಂಗ್ರಹವಾಗಿದೆ.


ಇದನ್ನೂ ಓದಿ-https://www.suddilive.in/2024/07/blog-post_682.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು