ಸುದ್ದಿಲೈವ್/ಶಿವಮೊಗ್ಗ
ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಹೆಚ್ಚಿದ್ದು ಈ ವಿಷಯದ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
7 ಜನ ಸಚಿವರ ಬದಲಾವಣೆಯಾಗಲಿದ್ದು ಮೂವರಿಗೆ ಸಚಿವ ಸಂಪುಟದಿಂದ ಕೋಕ್ ಕೊಡುವ ಸಂಭವವಿದೆ. ಉಳಿದ ನಾಲ್ವರಿಗೆ ಖಾತೆ ಬದಲಾವಣೆಯಾಗುವಸಂಭವವಿದೆ.
ಶರಣಬಸಪ್ಪ ದರ್ಶನ್, ಹಾವೇರಿಯ ಶಿವಾನಂದ ಪಾಟೀಲ್, ಶಿವಮೊಗ್ಗದ ಮಧುಬಂಗಾರಪ್ಪ ನವರಿಗೆ ಸಚಿವ ಸಂಪುಟದಿಂದ ಕೋಕ್ ಕೊಡುವ ಸಂಭವನೀಯ ಪಟ್ಟಿಯಲ್ಲಿದ್ದಾರೆ.
ಆರೋಗ್ಯ ಖಾತೆಯ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಮುನಿಯಪ್ಪ, ಡಾ.ಪರಮೇಶ್ವರ್ ಅವರ ಖಾತೆ ಬದಲಾವಣೆಯ ಸಂಭನೀಯವಿದೆ. ಗೋಪಾಲ ಕೃಷ್ಣ ಬೇಳೂರು ಅಥವಾ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಗೆ ಸಚಿವ ಸಂಪುಟದಲ್ಲಿ ಸಚಿವರಾಗುವ ಯೋಗ ಒದಗಿ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ-https://www.suddilive.in/2024/07/blog-post_439.html
Tags:
ರಾಜಕೀಯ ಸುದ್ದಿಗಳು