ಸುದ್ದಿಲೈವ್/ಶಿವಮೊಗ್ಗ
ಭಾರತೀಯ ಸೇನೆಯಲ್ಲಿ ಇತ್ತೀಚೆಗೆ ಆರಂಭವಾದ ಅಗ್ನಿವೀರ್ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಧು
ಪೂರ್ವ ಸೈನಿಕ ಪ್ತಕೋಷ್ಠದ ಉಮೇಶ್ ಬಾಪಟ್ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ 15 ವರ್ಷದಿಂದ ದೇಶದ ಸೈನಿಕರಿಗೆ ಸಲ್ಲುತ್ತಿದೆ. ಸಾರ್ವಜನಿಕವಾಗಿ ಸೈನಿಕರಿಗೆ ಗೌರವ ಕೊಡಿ ಎಂಬುದು ಆತ್ಮಬಲ ಹೆಚ್ಚಿಸಿದೆ. ಯುದ್ದ ಸಲಕರಣೆ, ಒನ್ ರ್ಯಾಂಕ್ ಪೆನ್ಷನ್ ಜಾರಿಯಾಗಿದ್ದು ಸೈನಿಕರಲ್ಲಿ ಉತ್ಸಹ ತುಂಬಿದೆ.
ಸೈನಿಕರ ನೇಮಕಾತಿ ಅಗ್ನಿವೀರ್ ನಲ್ಲಿ ಆರಂಭವಾಗಿದೆ. ಯುವ ಶಕ್ತಿಯಾಗಿರಲಿ ಎಂಬ ಉದ್ದೇಶದಿಂದ ವಯಮೀತಿಯನ್ನ 32 ರಿಂದ 28 ವಯಸ್ಸಿಗೆ ಇಳಿಸಲಾಗಿದೆ. 80 ಸಾವಿರ ನೇಮಕಾತಿಯಾಗಿದೆ. 1.50 ಲಕ್ಷ ಮುಂದಿನ ಮೂರು ವರ್ಷದಲ್ಲಿ ಸೇರ್ಪಡೆಗೊಳ್ಳುತ್ತದೆ.
ಸೈನಿಕರ ಶಿಸ್ತನ್ನ ಪಾಸ್ ಆಗಬೇಕು. ಕೌಶಲ್ಯದಲ್ಲಿ ಪಾಸ್ ಆಗಬೇಕು. 4 ವರ್ಷದಿಂದ ಸೇವೆ ಮುಗಿಸಿ ಬಂದ ನಂತರ 12 ಲಕ್ಷದ ವರೆಗೆ ಹಿಡಿಗಂಟು ಸಿಗಲಿದೆ. 24 ವರ್ಚಕ್ಕೆ ಹೊರಗಡೆ ಬಂದರೆ ಬೇರೆ ಉದ್ದಿಮೆ ಆರಂಭಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.
158 ಬೇರೆ ಬೇರೆ ಸಂಸ್ಥೆಯಿಂದ ವರದಿ ತರೆಯಿಸಿಕೊಂಡು ನೇಮಕಾತಿ ಮಾಡಿಕೊಳ್ಳಲಾಗಿದೆ. ಇರಾಕ್ ನಲ್ಲಿ ಕುಟುಂಬದ ಓರ್ವ ಸದಸ್ಯ ಸೇನೆಯಲ್ಲಿ ಸೇವೆಸಲ್ಲಿಸಿರಲೇ ಬೇಕು ಎಂಬ ಪದ್ಧತಿ ಇದೆ. ಅದೇ ರೀತಿ ಅಗ್ನಿವೀರ್ ಮುಂದಿನ 15 ವರ್ಷಗಳಲ್ಲಿ ಕುಟುಂಬಸ್ಥರಲ್ಲಿ ಓರ್ವ ಸದಸ್ಯ ಸೇನೆಯ ಅನುಭವ ಪಡೆದು ಬರಲಿದ್ದಾರೆ. ಯುಕೆ, ಮತ್ತು ಇತರೆ ಐರೋಪ್ಯ ದೇಶಗಳಲ್ಲಿ ಜಾರಿಯಿದೆ ಎಂದರು.
ರಾಹುಲ್ ಗಾಂಧಿ ಈ ಯೋಜನೆಯನ್ನ ಯೂಸ್ ಅಂಡ್ ತ್ರೋ ಯೋಜಬೆ ಆಗಿದೆ. ಅಜಾಗರೂಕತೆಯಿಂದ ಮಾತನಾಡಬಾರದು. ಸೇನೆಯಿಂದ ಸೇವೆ ಸಲ್ಲಿಸಿದ ಲಕ್ಷ್ಮಣ್ ಅವರು ಸತ್ತಾಗ ಹಣ ಬಂದಿಲ್ಲ ಎಂದರು
ನಂತರ ಸ್ವಲ್ಪ ಬಂದಿದೆ ಎಂದರು. ಇದು ಸೇನೆಗೆ ಸೇರುವ ಯುವಕರ ಸ್ಥೈರ್ಯ ಕದಿಸುವ ಪ್ರಯತ್ನವಾಗಲಿದೆ ಎಂದರು.
ನಾಲ್ಕು ವರ್ಷ ಆದ ನಂತರ ಅಗ್ನಿವೀರ್ ಅನಾಥರಾಗುತ್ತಾರೆ ಎಂದು ಬಿಂಬಿಸಲಾಗಿದೆ. ಅವರು ಆರ್ಮ್ಸ್ ಟ್ರೈನಿಂಗ್ ಪಡೆದು ಬಂದ ನಂತರ ಭಯೋತ್ಪಾದಕರಾಗುತ್ತಾರೆ ಎಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಯಾರೂ ಈ ರೀತಿ ಆಗಿರುವಬುದಾಹರಣೆ ಇಲ್ಲ. ಅಸಂಬಂಧ ಮಾತುಗಳನ್ನಾಡಬಾರದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದತ್ತಾತ್ರಿ, ಹೃಷಿಕೇಶ್ ಪೈ, ಅಣ್ಣಪ್ಪ ಮೊದಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/18900