ಸುದ್ದಿಲೈವ್/ಶಿವಮೊಗ್ಗ
ಕಾಲೇಜಿನ ಸ್ನೇಹಿತನಿಂದಲೇ 1.48 ಲಕ್ಷ ರೂ. ಕಿತ್ತುಕೊಂಡು ಹೋಗಿದ್ದ ಪ್ರಕರಣದಲ್ಲಿ ಆರೋಪಿ ಹುಚ್ಚಾಟ ಮೆರೆದಿದ್ದಾನೆ. ತಾನು ಚಾಕುವಿನಿಂದ ಕೊಯ್ದುಕೊಂಡಿದ್ದಲ್ಲದೆ. ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾನೆ.
ನಗರದ ಸಾಗರ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ವಿದ್ಯಾರ್ಥಿಯನ್ನ ಕಿಡ್ನ್ಯಾಪ್ ಅಲ್ಲದಿದ್ದರು ಕಿಡ್ನ್ಯಾಪ್ ರೀತಿಯಲ್ಲಿ ಕರೆದುಕೊಂಡು ಹೋಗಿ ಹೆದರಿಸಿ ಬೆದರಿಸಿ ಹಣಕಿತ್ತುಕೊಂಡು ಹೋಗಿರುವ ಘಟನೆ ನಡೆದಿತ್ತು.
ಕೇಳದ ವಿದ್ಯಾರ್ಥಿಯ ಸಹಪಾಠಿನೇ ಆಗಿರುವ ಅಬುಬಕರ್, ಈತನ ಸಹೋದರ ಮೊಹಮದ್ ಶಾನ್, ರುಹಾನ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಘಟನೆ ಜೂ.29 ರಂದು ಹುಟ್ಟು ಪಡೆದುಕೊಂಡಿದ್ದು ಜುಲೈ1 ನೇ ತಾರೀಖು ಹಣಕಿತ್ತುಕೊಂಡು ಆತನನ್ನ ಜೋಪಾನವಾಗಿ ಶಾನ್ ಗ್ಯಾಂಗ್ ಮನೆಗೆ ಬಿಡಲಾಗಿತ್ತು.
ಮತ್ತೆ ವಿದ್ಯಾರ್ಥಿಯ ತಂದೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟ ಕಾರಣ ವಿದ್ಯಾರ್ಥಿ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದನು.
ರಾಬರಿ ಪ್ರಕರಣ ನಡೆದಿದ್ದು ಹೇಗೆ?
ಬಿಸಿಎ ವಿದ್ಯಾರ್ಥಿಯ ತಂದೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ತಾಯಿ ಜೊತೆ ವಿನೋಬ ನಗರದ ವೀರಣ್ಣನ ಲೇಔಟ್ ನಲ್ಲಿ ವಾಸವಾಗಿದ್ದರು. ಯಾವುದಕ್ಕೂ ಕೊರತೆ ಇರದ ವಿದ್ಯಾರ್ಥಿಗೆ ಕಾಲೇಜು ತುಂಬ ಫ್ರೆಂಡ್ಸೇ ಇದ್ದರು.
ಈತನ ಜೊತೆಗೆ ಓದುತ್ತಿದ್ದ ಅಬುಬುಕರ್ ಸಹ ಆ ವಿದ್ಯಾರ್ಥಿಗೆ ಸ್ನೇಹಿತನೆ. ಜೂ.29 ರಂದು ಅಬುಬುಕರ್ ಹೊರಗಡೆ ಊಟಕ್ಕೆ ಹೋಗೋಣ ಎಂದು ಹೇಳಿ ಗಾಡಿಕೊಪ್ಪದ ಬಳಿ ಬೈಕ್ ನಲ್ಲಿ ಹೋಗುತ್ತಿರುವಾಗ ಕಾರಿನಲ್ಲೇ ಬಂದ ಇಬ್ಬರು ಅಪರಿಚಿತರು ಅಡ್ಡಹಾಕಿದ್ದಾರೆ. ಇಬ್ಬರಿಗೂ ಹೊಡೆದು ಗದರಿಸಿ ಮೊಬೈಲ್ ಕಿತ್ತುಕೊಂಡಿದ್ದಾರೆ.
ಈ ವೇಳೆ ಕಾರಿನಲ್ಲಿ ಟೂಲ್ಸ್ (ಆಯುಧಗಳು) ಇದ್ದು, ಕಾರಿನ ತುಂಬ ಸೌಂಡ್ ಮಾಡುತ್ತಿದ್ದವು ಎಂದು ದೂರುದಾರರು ಆರೋಪಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಕಸಿದುಕೊಂಡ ಅಪರಿಚಿತರು ಮೊಬೈಲ್ ಪಾಸ್ ವರ್ಡ್ ಪಡೆದುಕೊಂಡು ಗರ್ಲ್ ಫ್ರೆಂಡ್ ಜೊತೆಗಿನ ಖಾಸಗಿ ಫೋಟೊಗಳನ್ನ ನೋಡಿ 10 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.
ಅಬುಬುಕರ್ ಗೆ 2 ಲಕ್ಷ ರೂ ಹಣ ಬೇಡಿಕೆ ಇಟ್ಟಿದ್ದಾರೆ. ಅಬುಬುಕರ್ ಮೊಬೈಲ್ ಪಡೆದುತನ್ನ ಸಹೋದರ ಮೊಹಮದ್ ಶಾನ್ ಗೆ ಬರಲು ಹೇಳಿ ಕರೆಯಿಸಿಕೊಳ್ಳಲಾಗಿತ್ತು. ಮೊಹಮದ್ ಶಾನ್ ಗೂ ಗದರಿಸಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಜೂ.30 ರಂದು ಎರಡು ಲಕ್ಷ ರೂ ನೀಡಲು ಗಡವು ನೀಡಿದ್ದಾನೆ.
ಜೂ.30 ರಂದು ವಿದ್ಯಾರ್ಥಿ ಹಣಕ್ಕಾಗಿ ಪರದಾಡಿದ್ದಾನೆ. ಮಧ್ಯಾಹ್ನ 2 ಗಂಟೆಗೆ ಅಬುಬುಕರ್ ವಿದ್ಯಾರ್ಥಿಗೆ ಕರೆ ಮಾಡಿ ರುಹಾನ್ ಗುಗ್ ಕರೆಮಾಡುತ್ತಿದ್ದಾನೆ. ಸೋಮಿನಕೊಪ್ಪದ ಬಳಿ ಬರಲು ಹೇಳಿದ್ದಾನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ರುಹಾನ್, ಅಬುಬುಕರ್ ಮತ್ತು ಶಾನ್ ಹಾಗೂ ಇತರೆ ಇಬ್ಬರು ಗೂಂಡಗಳಿದ್ದು ಗೂಂಡಗಳಲ್ಲಿ ಸಮೀರ್ ಅಹ್ಮದ್ ಇರುವುದನ್ನ ವಿದ್ಯಾರ್ಥಿ ಗಮನಸಿ ಸೋಮಿನಕೊಪ್ಪದಲ್ಲಿರುವ ಖಾಲಿ ಸೈಟ್ ನಲ್ಲಿ ವಿದ್ಯಾರ್ಥಿಗೆ ಎರಡು ಲಕ್ಷ ರೂ. ಕೇಳಿದ್ದು ಎಲ್ಲಿ ಎಂದು ಗದರಿಸಿದ್ದರು.
ಎರಡು ಲಕ್ಷ ರೂ. ಸಿಕ್ಕಿಲ್ಲ ಎಂದ ವಿದ್ಯಾರ್ಥಿಗೆ ಅವರ ತಂದೆಗೆ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. 50 ಸಾವಿರ ರೂ. ಕೊಡಲು ಒಪ್ಪಿದ್ದಾರೆ. ಹೀಗಾಗಿ ವಿನೋಬನಗರದ ಸೂಡ ಕಚೇರಿಯ ಬಳಿ ವಿದ್ಯಾರ್ಥಿಯನ್ನ ಬಿಟ್ಟು ಆತನ ಮೊಬೈಲ್ ತೆಗೆದುಕೊಂಡು ಹೋಗಿದ್ದರು.
1.48 ಲಕ್ಷ ರಾಬರಿ
ಇದಾದ ಮೇಲೆ ಮರುದಿನ ಜು.1 ರಂದು ಮಧ್ಯಾಹ್ನ 3 ಗಂಟೆಗೆ ಅಬುಬುಕರ್ ಮೂಲಕ ಸೋಮಿನಕೊಪ್ಪ ಲೇಔಟ್ ಗೆ ವಿದ್ಯಾರ್ಥಿಯನ್ನ ಹಣದ ಬೇಡಿಕೆ ಇಟ್ಟವರು ಕರೆಯಿಸಿಕೊಂಡು ಆಯುಧಗಳನ್ನ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಾಗೂ ಹೀಗೂ ಡೆಬಿಟ್ ಕಾರ್ಡ್ ಮೂಲಕ ಹಾಗೂ ಇತರರ ಮೂಲಕ 1.48 ಲಕ್ಷರೂ ಹೊಂದಿಸಿಕೊಂಡ ವಿದ್ಯಾರ್ಥಿಯಿಂದ ಶಾನ್ ಗ್ಯಾಂಗ್ ಮೊಬೈಲ್ ಗೆ ವರ್ಗಾಯಿಸಿ ಹೋಟೆಲ್ ವೊಂದರ ಬಳಿ ಬಿಟ್ಟು ಹೋಗಿದ್ದರು.
ಬಿಟ್ಟುಹೋದ ಮೇಲೆ ವಿದ್ಯಾರ್ಥಿಯತಂದೆಗೆ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ. ಇಷ್ಟೇ ಆಗಿದ್ದರೆ ಯುವಕ ಸುಮ್ಮನಾಗಿ ಬಿಡುತ್ತಿದ್ದನೋ ಏನೂ.. ತಂದೆಗೂ ಕರೆ ಮಾಡಿ ಮತ್ತಷ್ಟು ಹಣದ ಬೇಡಿಕೆ ಇಟ್ಟ ಕಾರಣ ಅಬುಬುಕರ್, ಶಾನ್, ರೋಹನ್ ಹಾಗೂಇತರೆ ಇಬ್ಬರ ವಿರುದ್ಧ ವಿನೋಬ ನಗರ ಠಾಣೆಯಲ್ಲಿದೂರು ದಾಖಲಾಗಿತ್ತು.
ಪ್ರಕರಣ ದಾಖಲಾದ ಎರಡುದಿನಗಳಲ್ಲೇ ರೋಹನ್ ಗೂಗ್ ಮತ್ತು ಅಬುಬುಕರ್ ನನ್ನ ಬಂದಿಸಲಾಗಿತ್ತು. ಈ ಪ್ರಕರಣದಲ್ಲಿ ಮೊಹ್ಮದ್ ಶಾನ್ ಮಾಸ್ಟರ್ ಮೈಂಡ್ ಆಗಿದ್ದನು. ಇಬ್ವರು ಸಿಕ್ಕಿಬಿದ್ದರೂ ಶಾನ್ ತಲೆಮರೆಸಿಕೊಂಡಿದ್ದನು.
ಆರೋಪಿ ಆಸ್ಪತ್ರೆಗೆ ದಾಖಲು
ತಾಗಿಗುಡ್ಡದ ನಿವಾಸಿ ಶಿಮೂಲ್ ಹಾಲಿನ ಡೈರಿ ಬಳಿ ಇದ್ದ ಎಂದು ಮಾಹಿತಿ ತಿಳಿದು ಬಂದಿದೆ. ಪೊಲೀಸರು ಹಿಡಿಯಲು ಹೋದಾಗ ಚಾಕುವಿನಿಂದ ಆತ ಕೊಯ್ದುಕೊಂಡಿದ್ದಾನೆ. ಹೊಡಿಯಲು ಬಂದ ವಿನೋಬನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲಪ್ಪನವರ ಮೇಲೂ ಹಲ್ಲೆ ಮಾಡಿದ್ದಾನೆ. ಮಲ್ಲಪ್ಪರನ್ನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಶಾನ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/18878