ಬ್ರಾಹ್ಮಣರ ಹಾಸ್ಟೆಲ್ ನಲ್ಲಿ ಅಧ್ಯಕ್ಷರನ್ನೇ ಕೂಡಿಹಾಕಲಾಗಿತ್ತಾ?

ಸುದ್ದಿಲೈವ್/ಶಿವಮೊಗ್ಗ

ಬ್ರಾಹ್ಮಣರ ಹಾಸ್ಟೆಲ್ ನಲ್ಲಿ ಬ್ರಾಹ್ಮಣರ ಸಂಘದ ಜಿಲ್ಲಾ ಅಧ್ಯಕ್ಷರನ್ನ ಕೊಠಡಿಯಲ್ಲಿಕೂಡಿ ಹಾಕಿರುವ ಘಟನೆ ಜು.1ರ ರಾತ್ರಿ 8‌ ಘಂಟೆಯ ಸಂಧರ್ಭದಲ್ಲಿ ನಡೆದಿದೆ.

ಈ ಘಟನೆಯ ಹಿಂದೆ ಒಂದು ಪ್ರಬಲ ಫ್ಲಾಶ ಬ್ಯಾಕ್ ಇದೆ.  ಸುಮಾರು 20-25 ದಿನಗಳ ಹಿಂದೆ ಬಿಇ ವಿದ್ಯಾರ್ಥಿಯೊಬ್ಬ ಓದುತ್ತಿದ್ದು ಆ ವಿದ್ಯಾರ್ಥಿಯು ಹಾಸ್ಟೆಲ್ ನ ಕಾನೂನು ಕಟ್ಟಪಾಡುಗಳನ್ನ ಮುರಿದಿರುವುದರಿಂದ ಆತನನ್ನ ಹಾಸ್ಟೆಲ್ ನಿಂದ ಹೊರ ಹಾಕಲಾಗಿತ್ತು.

ಹೊರಹಾಕಿದ  ವಿದ್ಯಾರ್ಥಿಗೆ ಹಲವು ಸಙಧಾನಗಳು ನಡೆದ ಬಳಿಕ ಜು.1 ರಿಂದ ಹಾಸ್ಟೆಲ್ ಗೆ ಬರಲು ಹೇಳಲಾಗಿದ್ದು. ಆ ಹುಡುಗ ಬಂದಾಗ ಅಲ್ಲಿನ ಸೂಪರ್ ವೈಸರ್ ಸ್ವಲ್ಪ ಖಡಕ್ ಆಗಿ ಮಾತನಾಡಿದ್ದಾರೆ. ಎನ್ನಲಾಗಿದೆ.  ಹೊರಹಾಕಿದ ಹುಡುಗ ನನ್ನ ಹೊರಹಾಕಲು ಪ್ರಬಲ ಕಾರಣ ನೀಡಿ ಅಧ್ಯಕ್ಷ ನಟರಾಜ್ ಭಾಗವತ್ ರನ್ನ ಕರೆಯಿಸಿ ಎನ್ನಲಾಗಿದೆ.

ಅಧ್ಯಕ್ಷಕರು ಬಂದವರೆ ನೀನು ಹೊರಹೋಗು ಎಂದಿದ್ದಾರೆ. ಇದರಿಂದ ವಿದ್ಯಾರ್ಥಿ ಮತ್ತು ಆತನ ಸಹ ಕೊಠಡಿಯ ವಿದ್ಯಾರ್ಥಿಗಳು ಅಧ್ಯಕ್ಷರನ್ನ ಕೂಡಿಹಾಕಿದ್ದಾರೆ. ಈ ವೇಳೆ ಯುವಕನ ತಂದೆ ಕಮ್ನರಡಿಯಲ್ಲಿದ್ದು ಅವರನ್ನೂ ಕರೆಯಿಸಲಾಗಿದೆ.

ಯುವಕನ ತಂದೆಯ ಹೇಳಿಕೆ ಒಂದೇ ನಾನು ಮಗನನ್ನ ಹಾಸ್ಟೆಲ್ ಗೆ ಸೇರಿಸಿದ್ದು ನನಗೆ ಒಂದು ಮಾತು ಹೇಳದೆ ಅಧ್ಯಕ್ಷರು ಮಗನನ್ನ ಹೊರ ಹಾಕಿದ್ದಾರೆ. ಕಾರಣ ಕೇಳಿದರೆ ಊಟ ಸರಿಯಿಲ್ಲ, ಹಾಸ್ಟೆಲ್ ನ ಕಟ್ಟುಪಾಡಿನಲ್ಲಿ ಸಂಧ್ಯಾವಂದನೆ ಮಾಡಬೇಕಾದ್ದು ಪ್ರಮುಖವಾದುದ್ದರಿಂದ ಆತ ಮಾಡಲ್ಲ ಎನ್ನುತ್ತಾನೆ ಎಂಬ ಸಬೂಬು ಹೇಳುತ್ತಾರೆ.

ಈ ಸಬೂಬಿಗೆ ಉತ್ತರವಿಲ್ಲ. ನನ್ನ ಗಮನಕ್ಕೆ ತಾರದೆ ಮಗನನ್ನ ಹಾಸ್ಟೆಲ್ ನಿಂದ ಹೊರ ಹಾಕಲು ಇವರಿಗೆ ಅಧಿಕಾರಕೊಟ್ಟವರು ಯಾರು? ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರ ಹಾಸ್ಟೆಲ್ ನ ವಿರುದ್ಧ ವಿಡಿಯೋವೊಂದು ಹರಿಬಿಡಲಾಗಿದೆ ಎನ್ನುತ್ತಾರೆ. ಆ ವಿಡಿಯೋಗೂ ನಮಗೂ  ಸಂಬಂಧವಿಲ್ಲ ಎಂಬ ಆಕ್ರೋಶವನ್ನ ಹೊರಹಾಕಲಾಗುತ್ತಿದೆ.

ಆದರೆ ಹಾಸ್ಟೆಲ್ ನ ನಿರ್ದೇಶಕರೊಬ್ಬರು ಹಾಸ್ಟೆಲ್ ನ ನಿಯಮಗಳನ್ನ ಪಾಲಿಸಬೇಕು. ಕೆಲ ವಿದ್ಯಾರ್ಥಿಗಳು ನಿಯಮಗಳನ್ನ ಪಾಲಿಸದೆ ವಿರೋಧ ವ್ಯಕ್ತಪಡಿಸುತ್ತಾರೆ. ನಿಯಮಗಳನ್ನ ವಿದ್ಯಾರ್ಥಿಗಳು ಪಾಲಿಸದೆ ಇರುವುದು ಈ ಅವ್ಯವಸ್ಥೆಗೆ ಕಾರಣ ಎನ್ನುತ್ತಾರೆ. ಒಟ್ಟಿನಲ್ಲಿ ಸಮಾಜಕ್ಕೆ ಬುದ್ದಿಹೇಳುವ ಜನಾಂಗದಲ್ಲಿ ಯಾವುದೂ ಸರಿಯಿದ್ದಂಗೆ ಕಾಣುತ್ತಿಲ್ಲ.

ಇದನ್ನೂ ಓದಿ-https://suddilive.in/archives/18268

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close