ಸುದ್ದಿಲೈವ್/ಬೆಂಗಳೂರು
ಪತ್ರಕರ್ತ ರವೀಂದ್ರ ಮುದ್ದಿ ಅವರು ಬರೆದ ಸಿಗ್ನಲ್ ಜಂಪ್ ಎನ್ನುವ ಕಥಾ ಸಂಕಲನ ಬಿಡುಗಡೆಯಾಯಿತು.
ಬೆಂಗಳೂರಿನ ವಿಜಯನಗರದಲ್ಲಿರುವ ಎಂ ಚಿದಾನಂದಮೂರ್ತಿ ಸಭಾಂಗಣದಲ್ಲಿ ಅವ್ವ ಪುಸ್ತಕಾಲಯ ಪ್ರಕಟಿಸಿದ ರವೀಂದ್ರ ಅವರು ಬರೆದ ಈ ಸಿಗ್ನಲ್ ಜಂಪ್ ಕೃತಿಯನ್ನು ಖ್ಯಾತ ಬರಹಗಾರ ಜೋಗಿ ಅವರು ಅನಾವರಣಗೊಳಿಸಿದರು.
ವೀರಕಪುತ್ರ ಶ್ರೀನಿವಾಸ್, ಹಿರಿಯ ಬರಹಗಾರರಾದ ಯತೀರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ, ಕಥೆಗಾರ ಶಿವಾಗ್ ಹಾಗೂ ಅವ್ವ ಪುಸ್ತಕಾಲಯದ ಮುಖ್ಯ ರೂವಾರಿ ಅನಂತ್ ಕುಣಿಗಲ್ ವೇದಿಕೆಯಲ್ಲಿದ್ದರು.
ಪತ್ರಕರ್ತ ರವೀಂದ್ರ ಅವರು ಬರೆದ ಸಿಗ್ನಲ್ ಜಂಪ್ ಕಥಾ ಪುಸ್ತಕ ಕರ್ನಾಟಕದಲ್ಲಿ ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಲಭ್ಯ ಎಂದು ಅನಂತ್ ಕುಣಿಗಲ್ ಹೇಳಿದ್ದಾರೆ.
ಇದನ್ನೂ ಓದಿ-https://suddilive.in/archives/19277
Tags:
ರಾಜ್ಯ ಸುದ್ದಿಗಳು