ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ವಕೀಲರ ಬಾರ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಜಿ ಆರ್ ರಾಘವೇಂದ್ರ ಅವರು ಆಯ್ಕೆಯಾಗಿದ್ದಾರೆಚುನಾವಣೆಯಲ್ಲಿ ಜಿ ಆರ್ ರಾಘವೇಂದ್ರ ಅವರಿಗೆ ಅಭೂತಪೂರ್ವ ಗೆಲವು ದೊರೆತಿದೆ.
ಅರ್ಹತ 791 ಮತಗಳಲ್ಲಿ 734 ಮತಗಳು ಚಲಾವಣೆಗೊಂಡಿವೆ. ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಮತ್ತು ಜಯರಾಮ್ ನಡುವೆ ಫೈಟ್ ಬಿದ್ದಿತ್ತು. ಜಯರಾಮ್ 173 ಮಗಳನ್ನ ಪಡೆದರೆ ರಾಘವೇಂದ್ರ 561 ಮತಗಳಿಸಿ ಜಯಗಳಿಸಿದ್ದರು.
ಈ ರೀತಿ ಶಿವಮೊಗ್ಗದಲ್ಲಿ ಮಾದರಿಯಾದ ಹಿಂದೂ ಸಮಾಜದ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವಂತಹ ಹಿಂದೂ ಕಾರ್ಯಕರ್ತರಿಗೆ ನಿರಂತರ ಆಚಾಕಿರಣ ವಾದಂತಹ ರಾಘವೇಂದ್ರ ಅವರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ನಗರದ ಭಗತ್ ಸಿಂಗ್ ಘಟಕ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಬಜರಂಗದಳದ ಶಿವಮೊಗ್ಗ ವಿಭಾಗ ಸಂಯೋಜಕರಾದ ರಾಜೇಶ್ ಗೌಡ ಬಜರಂಗದಳದ ನಗರ ಸಂಯೋಜಕರಾದ ನಾಗೇಶ್ ಗೌಡ ಬಜರಂಗದಳ ದುರ್ಗಿ ಪ್ರಕಂಡದ ಸಂಚಾಲಕರಾದ ಕಾರ್ತಿಕ್ ಆರ್ ಸಹ ಸಂಯೋಜಕರಾದ ಮಣಿಕಂಠ ಹಾಗೂ ರಾಗಿಗುಡ್ಡದ ಎಲ್ಲಾ ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/18811