ಶಾಸಕರ ಮನೆಯ ಮುಂದೆ ಬ್ಯಾನರ್ ಹಿಡಿದು ನಿಂತ ಪಂಚಮಸಾಲಿ ಶ್ರೀಗಳು

ಸುದ್ದಿಲೈವ್/ಶಿವಮೊಗ್ಗ

ಲಿಂಗಾಯತ ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೂಡಲಸಂಗಮದ ಗುರುಗಳಾದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಯವರು ನಡೆಸುತ್ತಿರುವ ಹೋರಾಟ ಇನ್ನೊಂದು ಮಗ್ಗಲು ಪಡೆದುಕೊಂಡಿದೆ.

ಇಂದು ಶ್ರೀಗಳೇ ಖುದ್ದು ಬ್ಯಾನರ್ ಹಿಡಿದು ಸಮಾಜದ ಬಂಧುಗಳೊಂದಿಗೆ ಶಾಸಕ ಚೆನ್ನಬಸಪ್ಪನವರ ಮನೆಯ ಮುಂದೆ ಬಂದು ನಿಂತಿದ್ದರು. ಕಳೆದ 3 ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ನಡೆಸುತ್ತಿರುವ ಹೋರಾಟದ ನಿಮಿತ್ತ ಅವರ ಮನೆ ಮುಂದೆ ಬಂದ ಶ್ರೀಗಳನ್ನ ಶಾಸಕರು ಮನೆಯೊಳಗೆ ಕರೆದುಕೊಂಡು ಹೋಗಿ ಸತ್ಕಾರ್ಯಗಳನ್ನ ನಡೆಸಿ ಗೌರವಿಸಿದ್ದಾರೆ.

ಈ ವೇಳೆ ಶಾಸಕರಿಗೆ ಕೂಡಲಸಂಗಮದ ಗುರುಗಳಾದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಯವರು ಜುಲೈ 15 ರಿಂದ ನಡೆಯಲಿರುವ ರಾಜ್ಯ ಸರ್ಕಾರದ ಮುಂಗಾರು ಅಧಿವೇಶನದಲ್ಲಿ ಲಿಂಗಾಯಿತ ಪಂಚಮಸಾಲಿ ‘2ಎ’ ಮೀಸಲಾತಿಗೆ ಪಕ್ಷಾತೀತವಾಗಿ ಬೆಂಬಲಿಸುವಂತೆ ತಮ್ಮ ಆಗ್ರಹ ಪತ್ರವನ್ನು ನೀಡುವುದರ ಮುಖಾಂತರ ತಮ್ಮ‌ ನ್ಯಾಯಯುತಹೋರಾಟಕ್ಕೆ ಬೆಂಬಲಿಸುವಂತೆ ಕೋರಿದ್ದಾರೆ.

ಪಂಚಮಸಾಲಿ ಗೌಡ, ಮಲೆಗೌಡ, ಧೀಕ್ಷ ಲಿಂಗಾಯಿತ, ಗೌಳಿ ಲಿಂಗಾಯಿತರಿಗೆ 2ಎ ಮೀಸಲಾತಿ ನೀಡಬೇಕು. ಎಲ್ಲಾ ಲಿಂಗಾಯಿತ ಉಪಪಂಗಡದವರಿಗೆ ಒಬಿಸಿ ಸ್ಥಾನಮಾನ ನೀಡುವಂತೆ ಶ್ರೀಗಳು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. 7 ನೇ ಹಂತದ ಭಾಗ 2 ನೇ ಚಳುವಳಿ ಅಂಗವಾಗಿ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿಗಳ ಆಗ್ರಹ ಪತ್ರ ಚಳುವಳಿ ಹೆಸರಿನಲ್ಲಿ ಸ್ವಾಮಿಗಳು ಛಲಬಿಡದ ತ್ರಿವಿಕ್ರಮನಂತೆ ಹೋರಾಟಕ್ಕೆ ಧುಮುಕಿದ್ದಾರೆ.

ಇದನ್ನೂ ಓದಿ-https://suddilive.in/archives/18958

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close