ಕಾರಾಗೃಹದಲ್ಲಿ ನಿಷೇಧಿತ ವಸ್ತು ಪತ್ತೆ



ಸುದ್ದಿಲೈವ್/ಶಿವಮೊಗ್ಗ


ಕೆಎಸ್ಐಎಸ್ ಎಫ್ ನ ಸುತ್ತಲೂ ಕಾವಲು ಇದ್ದರೂ  ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದೆ. ಆದರೆ ಈ ನಿಷೇಧಿತ ವಸ್ತು ಯಾವುದು ಎಂಬುದರ ಬಗ್ಗೆ ಎಫ್ ಐಆರ್ ನಲ್ಲಿ ದಾಖಲಾಗಿಲ್ಲ. 


ಹೊರವಲಯದಲ್ಲಿರುವ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನ ಕಪ್ಪು, ಹಸಿರು, ನೀಲಿ ಬಣ್ಣದ ಗಮ್ ಪಟ್ಟಿಯನ್ನ ಸುತ್ತಿರುವ ಅನುಮಾನಸ್ಪದವಾದ ವಸ್ತುಗಳು ಜೈಲಿನ ಕುಮಧ್ವತಿ ವಿಭಾಗದ ಕೊಠಡಿ ಸಂಖ್ಯೆ 50 ರ ಹಿಂಭಾಗದಲ್ಲಿದಲ್ಲಿದ್ದು ಇದು ಸಿಸಿ ಟಿವಿಯನ್ನ ಪರಿಶೀಲಿಸುವಾಗ ಅಲ್ಲಿನ ಸಿಬ್ಬಂದಿಗೆ ಪತ್ತೆಯಾಗಿದೆ. 


ಇದನ್ನ ಪರಿಶೀಲಿಸಿದ ಜೈಲು ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಿಷೇಧಿತ ವಸ್ತುಗಳು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಹೊರಗಡೆ ಕೆಎಸ್ಐಎಸ್ ಎಫ್ ಭದ್ರತಾಪಡೆಗಳ ಕಣ್ಗಾವಲಿದ್ದರೂ ಕಾರಾಗೃಹದ ಪರಿಮಿತಿಯ ಒಳಗೆ ನುಸಳಿ ಕಾರಾಗೃಗದ ಒಳಗೆ ನಿಷೇಧಿತ ವಸ್ತುಗಳನ್ನ ಸಾಗಿಸುವ ಉದ್ದೇಶದಿಂದ ಕಾರಾಗೃಹದ ಗೋಡೆಯ ಒಳಗೆ ಕಪ್ಪು,ಹಸಿರು ಮತ್ತು ನೀಲಿ ಬಣ್ಣದ ಪಟ್ಟಿ ಸುತ್ತಿರುವ 4 ಸಂಖ್ಯೆಯ ಅನುಮಾನಸ್ಪದವಾದ ವಸ್ತು ಎಸೆಯಲಾಗಿದೆ.


ಈ ರೀತಿ ಮಾಡಿದವರನ್ನ ಪತ್ತೆ ಮಾಡಿಕೊಡುವಂತೆ ಮತ್ತು ಕೂಲಂಕುಶವಾಗಿ ತನಿಖೆ ಮಾಡುವಂತೆ ಜೈಲಿನ ಸೂಪರಿಂಟೆಂಡೆಂಟ್ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://www.suddilive.in/2024/07/blog-post_740.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close