ಸುದ್ದಿಲೈವ್/ಶಿವಮೊಗ್ಗ
70-80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವ ತುಂಗ ಜಲಾಶಯಕ್ಕೆ ಸಂಸದ ರಾಘವೇಂದ್ರ ಇಂದು ಗಾಜನೂರಿನಲ್ಲಿರುವ ತುಂಗ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಈ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹಾಗೂ ಬಿಜೆಪಿ ಕಾರ್ಯಕರ್ತರು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಂತರ ಸಂಸದ ರಾಘವೇಂದ್ರ ಮಾಧ್ಯಮಗಳಿಗೆ ಮಾತನಾಡಿ, ಹಾವೇರಿ ದಾವಣಗೆರೆ ಮತ್ತು ಅಪ್ಪರ್ ತುಂಗ ಭಾಗದ ಜನರಿಗೆ ತುಂಗೆ ಜೀವನನದಿಯಾಗಿದೆ. ಇಂದು ತುಂಗೆಗೆ ಬಾಗಿನ ಅರ್ಪಿಸಿರುವೆ. ಮಳೆ ಕೊರತೆಯಿಂದ ಕಳೆದ ಬಾರಿ ರೈತರ ಕಣ್ಣಿನಲ್ಲಿ ನೀರು ಬಂದಿತತ್ತು. 70-80 ಸಾವಿರ ಹೆಕ್ಟೆರ್ ಗೆ ನೀರುಣಿಸುವ ತುಂಗೆ ಈ ಬಾರಿ ಭೋರ್ಗೆರುವ ಹಂತಕ್ಕೆ ಬಂದಿದ್ದಾಳೆ. ಭರ್ತಿಯಾದ ಹಿನ್ನಲೆಯಲ್ಲಿ ಬಾಗಿನ ಅರ್ಪಿಸಿರುವುದಾಗಿ ಹೇಳಿದರು.
ಬರಗಾಲದಲ್ಲಿ ಜೂನ್ ವರೆಗೂ ನೀರುಣಿಸುವ ಕಾರ್ಯ ತುಂಗ ಜಲಾಶಯದಿಂದ ನಡೆದಿತ್ತು. ಈಗ ಭರ್ತಿಯಾಗಿದೆ. ರೈತರು ಎಚ್ಚರಿಕೆಯಿಂದ ನೀರನ್ನ ಬಳಸಿಕೊಳ್ಳಲಿ ಎಂದರು.
ಎನ್ ಡಿಎ ಸರ್ಕಾರ ಜಲೈ 23 ರಂದು ಮಂಗಳವಾರ ಬಜೆಟ್ ಮಂಡಿಸಲಾಗುತ್ತಿದೆ. ಈ ಬಾರಿಯ ಬಜೆಟ್ ಮಂಡನೆ ಐತಿಹಾಸಿಕ ಬಜೆಟ್ ಆಗಲಿದೆ. ರಾಷ್ಟ್ರದ ಸರ್ವಾಂಗಣ ಬಜೆಟ್ ಆಗಲಿದೆ. ಹೋದ ಬಾರಿ ರಾಷ್ಡ್ರಪತಿ ಭಾಷಣದ ವಂದನಾ ಭಾಷಣದಲ್ಲಿ ಶಿವಮೊಗ್ಗದ ರೈಲ್ವೆ, ಹೈವೆ ಮತ್ತು ಪ್ರವೋಸೋದ್ಯಕ್ಕೆ ಒತ್ತು ನೀಡುವಂತೆ ಮಾತನಾಡಿರುವೆ.
ಬೀರೂರು ಶಿವಮೊಗ್ಗದ ನಡುವೆ 1600 ಕೋಟಿ ವೆಚ್ಚದಲ್ಲಿ ರೈಲ್ವೆ ಡಬ್ಬಲಿಂಗ್ ಮಾಡಲು ಡಿಪಿಆರ್ ರೆಡಿ ಮಾಡಲಾಗಿದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಒಟ್ಟಾರೆ ಸೇರಿ ಶ್ರಮಿಸಲಾಗುತ್ತದೆ. ಕೆಲ ಅಭಿವೃದ್ಧಿಗೆ ರಾಜ್ಯದ ಪಾಲುದಾರಿಕೆ ಇದೆ. ಇದನ್ನ ಆಯಾ ಶಾಸಕರು ರಾಜ್ಯ ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ. ಕೇಂದ್ರದ ಯೋಜನೆಯನ್ನ ನಾವು ಮಾಡಲಿದ್ದೇವೆ ಎಂದರು.
ಆಗುಂಬೆ 12 ಕಿಮಿ ಟನಲ್, ರೈಲ್ವೆ ಡಬ್ಬಲಿಂಗ್ ಕಾರ್ಯ ನಡೆಯಬೇಕಿದೆ. ಕೇಂದ್ರದಿಂದ ಈ ವರ್ಷ 8-10 ಸಾವಿರ ಕೋಟಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬರುವ ನಿರೀಕ್ಷೆ ಇದೆ ಎಂದರು.