ಘಾಟಿಯಲ್ಲಿ ರಸ್ತೆ ಪಕ್ಕಕ್ಕೆ ಉರುಳಿದ ಖಾಸಗಿ ಬಸ್-ಸಾಮಾಜಿಕ ಜಾಲತಾಣದಲ್ಲಿ ಏನಂತ ವೈರಲ್ ಆಗುತ್ತಿದೆ ಗೊತ್ತಾ?

 

ರಸ್ತೆಯ ಪಕ್ಕದ ಗುಂಡಿಗೆ ಉರುಳಿದ ಬಸ್

ಸುದ್ದಿಲೈವ್/ಶಿವಮೊಗ್ಗ


ಕೊಲ್ಲೂರು ಘಾಟಿಯಲ್ಲಿ ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುವ‌ ಖಾಸಗಿ ಬಸ್ ವೊಂದು ರಸ್ತೆಯ ಪಕ್ಕಕ್ಕೆ ಉರುಳಿದೆ. ವಿದ್ಯಾರ್ಥಿಗಳೆ ಹೆಚ್ಚಿದ್ದ ಬಸ್ ನಲ್ಲಿ ಯಾವುದೇ ಸಾವು ನೋವುಗಳಾಗದಿದ್ದರೂ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ವರದಿಯಾಗಿದೆ. 


ನಿನ್ನೆ ಬೆಳಿಗ್ಗೆ  ಶಿವಮೊಗ್ಗದಿಂದ ಸಾಗರದ ಮೂಲಕ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಪರಿಣಾಮ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. 


ಬಸ್ ನಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಘಾಟಿಯಲ್ಲಿ ಪ್ರಯಾಣಿಸುವಾಗ ಅವಘಡ ಸಂಭವಿಸಿದೆ. ಶಾಲಾ ಮಕ್ಕಳಿಗೆ ಗಾಯಗಳಾಗಿವೆ. ಘಟನೆಗೆ ಬ್ರೇಕ್ ಫೇಲ್ ಎಂದು ಹೇಳಲಾಗುತ್ತಿದೆ. ಆದರೆ ಅಪಘಾತಕ್ಕೆ ಟಯರ್ ಗಳು ಸವದಿದ್ದರೂ ಗಾಡಿ ಚಲಾಯಿಸಿದ ಪರಿಣಾಮ ಘಟನೆ ನಡೆದಿರುವುದಾಗಿ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 


ಟಯರ್ ಸವದಿರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದರೂ ಚಾಲಕ ವಾಹನ ಚಲಾಯಿಸಿದ ಪರಿಣಾಮ ಘಟನೆ ನಡೆದಿದೆ ಎಂದು ಸಾಗರ ತಾಲೂಕಿನ ತುಮರಿ ಭಾಗದ ಸಾಮಾಜಿಕ ಹೋರಾಟಗಾರರೊಬ್ಬರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಎರಡು ಮೂರು ತಿಂಗಳಿಂದ ವಾಹನದ ನಿರ್ವಹಣೆ ಸರಿಯಲ್ಲದ ಕಾರಣ ಒಂದೊಂದು ಸಮಸ್ಯೆ ತಲೆದೋರಿತ್ತು. ಇದರ ಮುಂದುವರೆದ ಭಾಗ ಎಂದು ಸಹ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಬಗ್ಗೆ ವೈರಲ್ ಮಾಡಲಾಗಿದೆ. 


ಬಸ್ ಎರಡು ತಿರುವಿನ‌ಹಿಂದೆ ನಡೆದಿದ್ದರೆ ಬಸ್ ಸಾವಿರಾರು ಅಡಿ ಕಂದಕಕ್ಕೆ ಉರುಳುತಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಆರ್ ಟಿ ಒ ಕಣ್ಣು ಮುಚ್ಚಿಕೊಂಡಿರುವ ಬಗ್ಗೆ ಸಾಮಾಜಿಕ ಹೋರಾಟಗಾರರು ಆಕ್ಷೇಪಿಸಿದ್ದಾರೆ. ಅಫಘಾತಕ್ಕೆ ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಹಾಗೂ ಖಾಸಗಿ ಬಸ್ ಮಲೆನಾಡಿನಲ್ಲಿ ಮಲತಾಯಿ ಧೋರಣೆಯೇ ಕಾರಣ ಎಂದು  ಆಕ್ಷೇಪಿಸಿದ್ದಾರೆ. 

ಇದನ್ನೂ ಓದಿ-https://www.suddilive.in/2024/07/blog-post_838.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close