ಸುದ್ದಿಲೈವ್/ಕುಂಸಿ
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಣೆ ಹೊಸೂರು ಬಳಿ ಟಾಟಾ ಏಸ್ ಮತ್ತು ಬೈಕ್ ನಡುವೆ ಮುಖಾಮುಕಿ ಡಿಕ್ಕಿ ಉಂಟಾಗಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ನಿವಾಸಿ ಗುಡ್ಡೇನಹಳ್ಳಿಯ ನಿವಾಸಿ ಮಂಜನಾಯ್ಕ ಯಾನೆ ರಕ್ಷಿತ್ ಮತ್ತೋರ್ವ ರಘು ಬೈಕ್ ನಲ್ಲಿ ಶಿವಮೊಗ್ಗ ಕಡೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಟಾಟಾ ಏಸ್ ಕೋಣೆ ಹೊಸೂರು ಬಳಿ ಡಿಕ್ಕಿ ಹೊಡೆದಿದೆ.
ಓರ್ವನ ಮೃತ ದೇಹ ಮರಣೋತ್ತರ ಪರೀಕ್ಷ ಕೇಂದ್ರಕ್ಕೆ ಸಾಗಿಸಲಾಗಿದೆ. ಗಾಯಗೊಂಡವನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಸಂಜೆ ಸುಮಾರು 5-30 ರಿಂದ 6 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ-https://www.suddilive.in/2024/07/blog-post_232.html
Tags:
ಕ್ರೈಂ ನ್ಯೂಸ್