ಹೂತಿಟ್ಟ ಪ್ರಿಯತಮೆಯ ಶವವನ್ನ ಹೊರತೆಗೆದ ಪೊಲೀಸರು



ಸುದ್ದಿಲೈವ್/ಆನಂದಪುರ


ಹುಡುಕಿಕೊಂಡು ಬಂದಿದ್ದ  ಪ್ರಿಯತಮೆಯನ್ನ ಪ್ರಿಯಕರನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂತಿಟ್ಟ ಪ್ರಿಯತಮೆಯ ಶವನ್ನ  ಪ್ರಿಯಕರನ ಮುಂದೆ ತೆಗೆದು ಪೊಲೀಸರು ಮಹಜರ್ ನಡೆಸಿದ್ದಾರೆ. 


ಜು.2 ರಂದು ತಾಳಗುಪ್ಪದ ಸುಜನ್ ನನ್ನ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಸೌಮ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ ಹೊಸನಗರ ತಾಲೂಕಿನ ಹೆದ್ದಾರಿಪುರಕ್ಕೆ ಬಂದಿದ್ದಳು. ಹೆದ್ದಾರಿಪುರದ ಸಾಗರ ರಸ್ತೆಯಲ್ಲಿ ಯುವತಿಯನ್ನ ಕೊಂದ ಸುಜನ್ ಆನಂದಪುರ ರೈಲ್ವೆ ಟ್ರಾಕ್ ಬಳಿ ಚರಂಡಿ ಗುಂಡಿಯಲ್ಲಿ ಹೂತು ಮಣ್ಣು ಮಾಡಿದ್ದ. ಪ್ರಕರಣದ ಜಾಡು ಹಿಡಿದ ಪೊಲೀಸರು ಸುಜನ್ ನನ್ನ ವಶಕ್ಕೆ ಪಡೆದು ಜು.2 ರಂದು ಆತ ಹೂತಿಟ್ಟ ಪ್ರಿಯತಮೆಯನ್ನ ಇಂದು ನ್ಯಾಯಾಲಯದ ಆದೇಶದ ಮೂಲಕ ಹೊರತೆಗೆದಿದ್ದಾರೆ. 



ಸಾಗರ ಎಸಿ ಯತೀಶ್ ಆರ್ ಸಮ್ಮುಖದಲ್ಲೇ ಸ್ಥಳ ಪರಿಶೀಲನೆ ನಡೆಸಿ ಸೌಮ್ಯ ಮೃತದೇಹವನ್ನ ಹೊರ ತೆಗೆಯಲಾಗಿದೆ. ಆನಂದಪುರದ ಬಳಿಯ ಮದ್ಲೆಸರ ಬಳಿಯ ರೈಲ್ವೆ ಹಳಿ ಬಳಿ ಸುಜನ್ ಸೌಮ್ಯಳ ಮೃತದೇಹವನ್ನ ಹೂತು ಇಟ್ಟಿದ್ದ. ಹೂತಿಟ್ಟ ಘಟನಾ ಸ್ಥಳಕ್ಕೆ ಆರೋಪಿಯನ್ನು  ಪೊಲೀಸರು ಕರೆತಂದು ಸ್ಥಳ ಮಹಜರು ಮಾಡಿ ಹೊರತೆಗೆದಿದ್ದಾರೆ. 


ಕೆಲಹೊತ್ತು  ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಶವ ಹೊರ ತೆಗೆಯುತ್ತದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ಸ್ಥಳಕ್ಕೆ  ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರು ಭೇಟಿ ನೀಡಿದ್ದಾರೆ. ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಾಗರ ತಹಶಿಲ್ದಾರ್ ಚಂದ್ರಶೇಖರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದರು. ತೀರ್ಥಹಳ್ಳಿ ಡಿವೈ ಎಸ್ಪಿ ಗಜಾನನ ವಾಮನಸುತಾರ ನೇತೃತ್ವದಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ. ರಿಪ್ಪನ್ ಪೇಟೆ ಪೊಲೀಸರಿಂದ ಬಿಗಿಬಂದೋಬಸ್ತ್ ಮಾಡಲಾಗಿದೆ. 


ಇದನ್ನೂ ಓದಿ-https://www.suddilive.in/2024/07/blog-post_742.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close