ಸುದ್ದಿಲೈವ್/ಶಿವಮೊಗ್ಗ
ಭದ್ರಾ ಡ್ಯಾಮ್ ನಿಂದ ಪೋಲಾಗುತ್ತಿದೆ ಸಾವಿರಾರು ಕ್ಯೂಸೆಕ್ ನೀರಿನ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಲೂಯಿಸ್ ಗೇಟ್ ನಿಂದ ಪೋಲಾಗುತ್ತಿದೆ ಸಾವಿರಾರು ಕ್ಯೂಸೆಕ್ ನೀರು ನದಿಗೆ ಹರಿಯುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಅಧಿಕಾರಿಗಳ ನಿರ್ಲಕ್ಷಕ್ಕೆ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗುತ್ತಿದೆ. ಮಳೆಗಾಲದಲ್ಲಿ ಅನಗತ್ಯವಾಗಿ ನದಿಗೆ ಭಾರಿ ಪ್ರಮಾಣದ ನೀರು ಹರಿಸಲಾಗುತ್ತಿದೆ. ಸ್ಲೂಯಿಸ್ ಗೇಟ್ ನ ದುರಸ್ತಿಯನ್ನು ಮಾಡಲಾಗದೆ ಅಧಿಕಾರಿಗಳು ಒದ್ದಾಡುತ್ತಿದ್ದಾರೆ.
ಪೋಲಾಗುತ್ತಿರುವ ಭಾರಿ ಪ್ರಮಾಣದ ನೀರನ್ನು ಕಂಡು ರೈತರು ಆತಂಕಗೊಂಡಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಪೋಲಾಗುತ್ತಿರುವ ಸಾವಿರಾರು ಕ್ಯೂಸೆಕ್ ನೀರು ಪೋಲಾಗುತ್ತಿದೆ. ಗೇಟನ್ನು ಕೂರಿಸಲಾಗದೆ ಡ್ಯಾಮ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒದ್ದಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಗೇಟ್ ಅನ್ನು ಕೂರಿಸಲಾಗದೆ ಅಧಿಕಾರಿಗಳು ಪರದಾಡುತ್ತಿದ್ದಾರೆ.
ಕಣ್ಣೆದುರೇ ಪೋಲಾಗುತ್ತಿರುವ ನೀರನ್ನು ಕಂಡು ರೈತರು ಪರಿತಪಿಸುತ್ತಿದ್ದಾರೆ. ಗೇಟ್ ಅನ್ನು ಕೂರಿಸುವ ಗುತ್ತಿಗೆ ಪಡೆದಿರುವ ತೀರ್ಥಹಳ್ಳಿ ಮೂಲದ ಜಿಪಿಎಸ್ ಕನ್ಸ್ಟ್ರಕ್ಷನ್. ತಾಂತ್ರಿಕ ಅನುಭವ ಇಲ್ಲದೆ ಗೇಟನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೂರಿಸಲು ಯತ್ನಿಸುತ್ತಿರುವುದಾಗಿ ಆರೋಪಿಸಲಾಗಿದೆ.
ಬೇಸಿಗೆಯಲ್ಲಿ ನಿರ್ವಹಿಸಬೇಕಾದ ಕೆಲಸವನ್ನು ಮಳೆಗಾಲದಲ್ಲಿ ಕೈಗೊಂಡಿರುವ ಬಗ್ಗೆ ಆಕ್ರೋಶವ್ಯಕ್ತವಾಗುತ್ತಿದೆ. ಮಳೆಗಾಲದಲ್ಲಿ ಪ್ರತಿ ಹನಿಯನ್ನು ಪರಿಗಣಿಸಬೇಕಾದ ಅಧಿಕಾರಿಗಳಿಂದ ನಿರ್ಲಕ್ಷಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ ಎರಡು ಮೂರು ವರ್ಷದಿಂದ ಭದ್ರೆ ಬರ್ತೀಯಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆಯಾಗಬೇಕಾಗಿದ್ದ ಸ್ಲೋಯಿಸ್ ಗೇಟ್ ನಿಂದನೀರು ನದಿಗೆ ಹರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರು ಸಂಗ್ರಹದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.
ತುರ್ತು ಸಂದರ್ಭದಲ್ಲಿ ತೆರೆಯಬೇಕಾಗಿದ್ದ ಗೇಟ್ ಅನ್ನು ಈಗಲೇ ತೆರೆಯಲಾಗಿದೆ. ಸ್ಲೂಯೀಸ್ ಗೇಟ್ ನಿರ್ವಹಣೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ತರಾತುರಿಯಲ್ಲಿ ಟೆಂಡರ್ ಕರೆದು ಕೆಲಸವನ್ನು ನಡೆಸಲು ಅಧಿಕಾರಿಗಳು ಮುಂದಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ-https://suddilive.in/archives/18578