ಶಾಸಕ ಚೆನ್ನಿಯಿಂದ ತುಂಗೆಗೆ ಬಾಗಿನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಶಾಸಕ ಚೆನ್ನಬಸಪ್ಪ ತುಂಗ ನದಿಗೆ ಬಾಗಿನ ಅರ್ಪಿಸಿದ್ದಾರೆ. ಮೈದುಂಬಿ ಹರಿಯುತ್ತಿರುವ ತುಂಗೆಗೆ ಶಾಸಕ ಚೆನ್ನಬಸಪ್ಪ, ಅವರ ಕುಟುಂಬ ಮತ್ತು ಬಿಜೆಪಿ ಕಾರ್ಯರ್ತರು ಕೋರ್ಪಳಯ್ಯನ ಮಂಟಪದ ಬಳಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ನಂತರ ಮಾಧ್ಯಮಗಳಿಗೆ ಮಾತನಾಡಿದ ಶಾಸಕರು, ತುಂಗೆ ಜೀವನದಿಯಾಗಿರುವುದರಿಂದ ಅದನ್ನ ರಕ್ಷಿಸಬೇಕಿದೆ. ಇದರ ಸಂರಕ್ಷಣೆ ನಡೆಯುವ ಕಾರ್ಯ ನಡೆಯುತ್ತಿದೆ. ತುಂಗೆ ಮೈದುಂಬಿದ ಹಿನ್ನಲೆಯಲ್ಲಿ ಬಾಗಿನ ಅರ್ಪಿಸಿದ್ದೇನೆ. ತುಂಗೆಯನ್ನ ಭಕ್ತಿಯಿಂದ ಆರಾಧನೆ ಮಾಡಿ, ಶಾಂತಿಯಾಗಿ ಹರಿಯಲಿ ಎಂದು ಪ್ರಾರ್ಥಿಸಿ, ರೈತರ ಜೀವನ್ನವನ್ನ ಹಸನವಾಗಿಡಲಿ ಎಂದು ಪೂಜಿಸಿದ್ದೇನೆ ಎಂದರು.

ಸಂಮೃದ್ಧಿಯಾಗಿ ಬೆಳೆಗೆ ಬೇಕಾದ ಶಕ್ತಿಯನ್ನ ತುಂಗೆ ನೀಡಲಿ. ತುಂಗೆಯ ಶುದ್ದೀಕರಣದ ಕೆಲಸ ಆಗುತ್ತಿದೆ. ನಗರದಲ್ಲಿ ಆಗಬೇಕಾದ ಶುದ್ದೀಕರಣದ ಕೆಲಸ ನಡೆದಿದೆ. ನಾವು ಮುಂದಿನ ಊರಿಗೆ ತುಂಗೆಯನ್ನ ಕಳುಹಿಸಿಕೊಡುವ ವೇಳೆ ಅದರ ನೈರ್ಮಲ್ಯತೆ ಕಾಪಾಡಿಕೊಂಡು ಕಳುಹಿಸಿಕೊಡಬೇಕಿದೆ ಎಂದರು.

ನಟನ ಅಭಿಯಾನಕ್ಕೆ ಬೆಂಬಲವಿದೆ

ನಟ ಅನಿರುದ್ಧ್ ಸಹ ತುಂಗೆಯ ಶುದ್ದೀಕರಣದ ಬಗ್ಗೆ ಭೇಟಿಯ ವೇಳೆ ಮಾತನಾಡಿದ್ದಾರೆ. ಶುದ್ದೀಕರಣದ ಒಳ್ಳೆಯ ಕೆಲಸಕ್ಕಾಗಿ ಓಡಾಡುತ್ತಿದ್ದಾರೆ. ಬೇಸಿಗೆಯಲ್ಲಿ ತುಂಗೆಯನ್ನ ನೋಡಿದಾಗ ಹಸಿರು ಗಿಡ ಬೆಳದಿತ್ತು. ಈ ವೇಳೆ ಬೇಸರ ವ್ಯಕ್ತಪಡಿಸಿದ್ದರು.‌ ನಮ್ಮದೂ ಶುದ್ದಿಕೆಲಸ ನಡೆಯುತ್ತಿದೆ. ಶೃಂಗೇರಿಯಿಂದ ಮಂತ್ರಾಲಯದ ತನಕ ಶುದ್ದೀಕರಣಕ್ಕಾಗಿ ಅಭಿಯಾನ ನಡೆಯುತ್ತಿದೆ ನಟರಿಗೂ ನಮ್ಮ‌ಬೆಂಬಲವಿದೆ ಎಂದರು.

ಚಂದ್ರಶೇಖರ್ ಹತ್ಯೆ ಸರ್ಕಾರಿ ಪ್ರಯೋಜಿಕತ್ವದ ಹತ್ಯೆ

ಸರ್ಕಾರದ ಹಗರಣವನ್ನ ಬಿಜೆಪಿ ಬಯಲಿಗೆ ಎಳೆದಿದೆ. ಕೆಲ ಶಾಸಕರು ಜೈಲಿಗೆ ಹೋಗಿದ್ದಾರೆ. ಸದನದಲ್ಲಿ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ ಪರಿಹಾರ ನೀಡಬೇಕು. ಹಗರಣದಲ್ಲಿ ಭಾಗಿಯಾದವರ ರಾಜೀನಾಮೆ ನೀಡಬೇಕಿದೆ. ಶಿವಮೊಗ್ಗದ ಒಬ್ಬ ಮತದಾರ ಸರ್ಕಾರಿ ಪ್ರಯೋಜಿತ ಕೊಲೆಯಾಗಿದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಚಂದ್ರಶೇಖರ್ ಸರ್ಕಾರಿ ಪ್ರಯೋಜಿತ ಕೊಲೆಗೆ ಬಲಿಯಾಗಿದ್ದಾರೆ ಎಂದರು.

ಚಂದ್ರಶೇಖರ್ ಆತ್ಮಹತ್ಯೆಯಾಗದಿದ್ದರೆ ಪ್ರಕರಣ ಬಯಲಿಗೆ ಬರುತ್ತಿರಲಿಲ್ಲ. ಡಿಕೆಶಿಯನ್ನ ಭೇಟಿ ಮಾಡಿದೆ. ಮೂವರು ಸಚಿವರನ್ನ ಭೇಟಿ ಮಾಡಿರುವೆ. ಬಡವರಿಗೆ ಬೇಕಾದ ಸಂಗತಿಯನ್ನ‌ ಚರ್ಚಿಸಿರುವೆ. ಸ್ಲಂ ಅಭಿವೃದ್ಧಿ, ರಾಜೀವ್ ಗಾಂಧಿ ವಸತಿ ಅಧಿಕಾರಿಗಳನ್ನ ಬೇಟಿಯಾಗಿರುವೆ. 1500 ಮನೆಗಳನ್ನ ಬಡವರಿಗೆ ನೀಡಲು ನಿರ್ಧರಿಸಲಾಗಿತ್ತು.‌ ಆ ಮನೆ ನೆನೆಗುದಿಗೆ ಬಿದ್ದಿದೆ. ಮೂರು ಸಾವಿರ ಮನೆ ನಿರ್ಮಾಣಕ್ಕೆ ಸರ್ಕಾರ ಸ್ಪಂಧಿಸಿತ್ತಿದೆ ಎಂದರು.

ಬಡವರ ಪರವಾದ ಹೋರಾಟ

ಗೋವಿಂದಾಪುರದ ಬಡವರಿಗೆ ನೀಡುವ ಮನೆಗೆ ಸಾಮಾನ್ಯ ವರ್ಗ 7.7 ಲಕ್ಷ ನೀಡಬೇಕಿತ್ತು. ಇವರು 1.20 ಲಕ್ಷ ನೀಡಿದ್ದರೆ ಮನೆ ಬಡವನದಾಗುತ್ತದೆ. ಬಡವರ ಪರವಾಗಿ ಕೆಲಸ ಮಾಡಲಾಗುತ್ತಿದೆ. ಇದರ ಹಂಚಿಕೆಗೆ ಬೇಗ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.

ಸಮಸ್ಯೆಗೆ ಸ್ಪಂಧಿಸಿದ ಡಿಸಿಎಂ ಡಿಕೆಶಿ

ಡಿಸಿಎಂ ಡಿಕೆಶಿಯವರನ್ನ ಭೇಟಿ ಮಾಡಿ ನಗರದ ಪರಿಸರಾಸಕ್ತರ ಮನವಿಯನ್ನ ಅವರಿಗೆ ನೀಡಿದ್ದೇನೆ.‌ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಮನೆಗಳು ನಿರ್ಮಾಣವಾಗಿದೆ. ಕೆರೆಯನ್ನೂ ಉಳಿಸ ಬೇಕಿದೆ. ತುಂಗ ಮೇಲ್ದಂಡೆ ಯೋಜನೆಗೆ ಸರ್ವೆ ಮಾಡಿ 11 ಕಿಮಿ ಬೇಲಿ ಹಾಕಿ ಕಾಪಾಡ ಬೇಕಿದೆ.  ಸಭೆಗೆ ಗಮನ ತರಲು ಡಿಕೆಶಿ ಹೇಳಿದ್ದಾರೆ.‌ ಡಿಕೆಶಿಯವರು ಸಹಕಾರ ನೀಡಿದ್ದಾರೆ.

ಭದ್ರ ನದಿಯ ನೀರು ವಿದ್ಯಾನಗರ ಮತ್ತು ಶಾಂತಮ್ಮ ಲೇಔಟ್ ಮುಳುಗುವ ಭೀತಿ ಉಂಟ
ಅಗುತ್ತಿತ್ತು. ಎಸ್ಕೇಪ್ಸ್ ಗಳನ್ನ ಸ್ವಚ್ಛಮಾಡಲು  ಕರೆಯಾಗುತ್ತಿದೆ. ಮದಾರಿ ಪಾಳ್ಯ ದೇವಸ್ಥಾನ ಮಳೆಗೆ ಮುಳುಗುವ ಭೀಯಿ ಉಂಟಾಗಿದೆ ತಿವೆಟ್ ಮೆಂಟ್ ಗೆ ಹಣ ನೀಡುವುದಾಗಿ ಡಿಕೆಶಿ ಭರವಸೆ ನೀಡುವುದಾಗಿ ತಿಳಿದರು.

ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳ ಸಭೆ ನಡೆದಿದೆ

ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳ ಸಭೆ ನಡೆಸಿರುವೆ. ಯೋಜನೆ ಮಾಡಲಾಗಿದೆ ಆ ರೂಪದಲ್ಲಿ ನಿಯಂತ್ರಣ ನಡೆಯುತ್ತಿದೆ. ಇದು ನಿರಂತರವಾಗಿ ನಡೆಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/19571

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close