ಹವಾಮಾನಾಧರಿತ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ

 ಸುದ್ದಿಲೈವ್/ಶಿವಮೊಗ್ಗ

 2024-25 ನೇ ಸಾಲಿಗೆ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್‍ಡಬ್ಲ್ಯುಬಿಸಿಐಎಸ್)ಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ರೈತರು ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿರುತ್ತಾರೆ. 


ರೈತರು ನೋಂದಾವಣೆಗೆ ಅವಶ್ಯ ದಾಖಲೆಯಾದ ಪ್ರಸ್ತುತ ಸಾಲಿನ ಪಹಣಿ(ಆರ್‍ಟಿಸಿ), ಬ್ಯಾಂಕ್ ಪಾಸ್‍ಬುಕ್ ಪ್ರತಿ, ಆಧಾರ್ ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್‍ಗಳಿಗೆ ಅಥವಾ ಸಮೀಪದ ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಜುಲೈ 31ರೊಳಗಾಗಿ ಅರ್ಜಿ ಸಲ್ಲಿಸುವುದು.

   ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆ ಕಛೇರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ತಾಲ್ಲೂಕು ದೂರವಾಣಿ ಸಂಖ್ಯೆಗಳಾದ ಶಿವಮೊಗ್ಗ 08182-270415, ಭದ್ರಾವತಿ 08282-26239, ಶಿಕಾರಿಪುರ 08187-223544, ಸೊರಬ 08184-272112, ಸಾಗರ 08183-226193, ತೀರ್ಥಹಳ್ಳಿ 08181-228151, ಹೊಸನಗರ 08185-221364 ನ್ನು ಸಂಪರ್ಕಿಸುವುದು.

ಇದನ್ನೂ ಓದಿ-https://suddilivesmg.blogspot.com/2024/07/blog-post_30.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close