ಕಾರುಗಳ ನಡುವೆ ಡಿಕ್ಕಿ- ಮೂವರು ಸಾವು-ವಿದೇಶಿಗರಿಗೆ ಗಾಯ

ಸುದ್ದಲೈವ್/ಶಿವಮೊಗ್ಗ

ಶಿವಮೊಗ್ಗದ ಟ್ರೀಪಾರ್ಕ್ ಬಳಿ ಎರಡು ಕಾರುಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲೇ ಸಾವು ಕಂಡರೆ ಓರ್ವರು ಗಂಭೀರ ಗಾಯಗೊಂಡಿದ್ದಾರೆ.

ಕಿಮ್ಮನೆ ರೆಸಾರ್ಟ್ ನಿಂದ ವಿದೇಶಿ ಪ್ರವಾಸಿಗರನ್ನ ಕರೆದುಕೊಂಡು ಜೋಗ ನೋಡಲು ಇನ್ನೋವ ಕಾರಿನಲ್ಲಿ ಹೊರಟಿದ್ದರು.‌ ಸ್ವಿಫ್ಟ್ ಕಾರೊಂದು ಒವರ್ ಟೇಕ್ ಮಾಡಿಕೊಂಡು ಬಂದ ವೇಳೆ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.

ಗಿರೀಶ ಇನ್ನೋವ ಕಾರು ಚಾಲಕ ಗಾಯಗೊಂಡಿದ್ದಾರೆ. ಸಾವುಕಂಡ ವ್ಯಕ್ತಿಯೋರ್ವರನ್ನ ಚಳ್ಳಕೆರೆಯ ಬೆಳಲಗೆರೆ ಇಮಾಮ್ ಸಾಬ್ ಎಂದು ಗುರುತಿಸಲಾಗಿದೆ. ಸ್ವಿಫ್ಟ್ ಕಾರಿನ ಚಾಲಕ ಚಂದ್ರು, ಸಿದ್ದಣ್ಣ ಮೂವರು ಸಾವು ಕಂಡಿದ್ದಾರೆ ಓಬಕ್ಕ ಎಂಬ ಮಹಿಳೆ ಗಾಯಗೊಂಡಿದ್ದು ಗಂಭೀರವಾಗಿದ್ದಾರೆ. ಇವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿಧ.

ಖಾಸಗಿ ಆಸ್ಪತ್ರೆಗೆ  ಮೂವರು ವಿದೇಶಿಗರು ಗಾಯಗೊಂಡಿದ್ದಾರೆ. ಸಾವುಕಂಡ ಮೂವರು ಸ್ವಿಫ್ಟ್ ಕಾರಿನಲ್ಲಿದ್ದರು. ಇನ್ಬೋವಾ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ‌ಸಂಭವಿಸಿದೆ. ಸ್ಥಳಕ್ಕೆ ಪಿಐ ಹರೀಶ್ ಪಾಟೀಲ್ ಧಾವಿಸಿದ್ದಾರೆ.

ಇದನ್ನು ಓದಿ-https://suddilive.in/archives/18622

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close