ಡೆಂಗ್ಯೂ ನಡುವೆ ಜಿಲ್ಲೆಯಲ್ಲಿ 'ಝಿಕಾ' ಭೀತಿ?

ಸುದ್ದಿಲೈವ್/ಶಿವಮೊಗ್ಗ

ಡೆಂಗ್ಯೂ ಜ್ವರದ ಭೀತಿಯ ನಡುವೆ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಶಿವಮೊಗ್ಗ ದಲ್ಲಿ ಝಿಕಾ ವೈರಸ್ ಗೆ ಚಿಕಿತ್ಸೆ ಪಡೆದು ಗುಣಮುಖರಾದ ವೃದ್ಧ ಸಾವು ಕಂಡರೆ, ಸಾಗರದಲ್ಲಿ ಯುವಕನೋರ್ವನಲ್ಲಿ ರೋಗ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಝಿಕಾಗೆ ಪತ್ತೆಯಾದ ಮೊದಲ ವ್ಯಕ್ತಿ ಸಾವು ಕಂಡಿದ್ದಾರೆ. ಶಿವಮೊಗ್ಗದ ಗಾಂಧಿ ನಗರದ 74 ವರ್ಷದ ವೃದ್ಧ ಮನೆಯಲ್ಲಿ ಸಾವು ಕಂಡಿದ್ದಾರೆ. ಜೂ. 19 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು.

ಜೂ. 21 ರಂದು ಝಿಕಾ ವೈರಸ್ ಪತ್ತೆ ಆಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ  ಗುರುವಾರ ಮನೆಗೆ ವಾಪಾಸ್ ಆಗಿದ್ದರು.

ಗುಣಮುಖರಾದವರು ನಿನ್ನೆ ಮನೆಯಲ್ಲಿ ಸಾವುಕಂಡಿದ್ದಾರೆ. ಜ್ವರ ಮಾತ್ರವಲ್ಲದೇ ವಿವಿದ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

24 ವರ್ಷದ ಯುವಕನಲ್ಲಿ ಝೀಕಾ ವೈರಸ್ ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ರೋಗಗಳ ಭೀತಿ ಹೆಚ್ಚಾಗಿದೆ.ಸಾಗರ ಮೂಲದ ಯುವಕನಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ.

ಇದನ್ನೂ ಓದಿ-https://suddilive.in/archives/18601

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close