ಒಂದು ತಿಂಗಳಲ್ಲಿ ಸೊರಬದ ಸರ್ವಾಂಗೀಣ ಅಭಿವೃದ್ಧಿ-ಮಧು ಬಂಗಾರಪ್ಪ

 ಸುದ್ದಿಲೈವ್/ಶಿವಮೊಗ್ಗ

354 ಕೋಟಿ ವೆಚ್ಚದಲ್ಲಿ ಶರಾವತಿ ಡೆಡ್ ಸ್ಟೋರೇಜ್ ನಿಂದ ಶಿರಾಳಕೊಪ್ಪ, ಆನವಟ್ಟಿ ಹಾಗೂ ಸೊರಬಕ್ಕೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ಒಂದು ತಿಂಗಳಲ್ಲಿ140 ಕೋಟಿವೆಚ್ಚದಲ್ಲಿ ಸೊರಬವನ್ನ ಸರ್ವಾಂಗಿಣ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.  ವರದ ನದಿ ತಡೆಗೋಡೆಗೆ 62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

85% ಟೀಚರ್ಸ್ ನೇಮಕಾತಿ ಆಗಿದೆ. ಶಾಲೆಗಳಿಗೆ ಮಕ್ಕಳಿಗೆ 1500 ಕೋಟಿ ವೆಚ್ಚದಲ್ಲಿ ವಾರಕ್ಕೆ ಆರುದಿನವೂ ಬಿಸಿಯೂಟದಲ್ಲಿ ಮೊಟ್ಟೆ ನೀಡಲಾಗುವುದು. ದ ಝಳ ಡೌತಿ ನೀರನ್ನ ಎರಡು ಕೆಲಾನ್ ಮೂಲಕ ಕೆರೆ ತುಂಬಿಸಲಾಗುವುದು. 

ಕೆನಾಲ್ ದುರಸ್ತೆನೂ ಅಡಗಲಿದೆ. ಕೃಷಿ ಚಟುವಟಿಗೆ   ಸೋಲಾರ್ ಅಳವಡಿಕೆ ಮಾಡಲಾಗುವುದು. ಯಾರನ್ನೂ ಹೊಸ ಒತ್ತುವರಿ ಮಾಡುವರನ್ನ ಪುರಸ್ಕರಿಸಲಾಗದು. ಆದರೆ ಅರಣ್ಯ ಭೂಮಿಯಲ್ಲಿ ಅನಾದಿ ವರ್ಷಗಳಿಂದ ಬಂದವರನ್ನ ಒಕ್ಕಲೆಬ್ಬಿಸಲ್ಲ ಎಂದು ಸ್ಪಷ್ಟಪಡಿಸಿದರು. 

ಈಗಾಗಲೇ ಸಚಿವರು ಬಂದು ಮಲೆನಾಡಿಗರ ಅರಣ್ಯ ಭೂಮಿ ನಿವಾಸಿಗಳಿಗೆ ಒಳ್ಳೆಯ ಸುದ್ದಿಕೊಡುತ್ತೇನೆಂದಿದ್ದಾರೆ.ಆಕೆಲಸವನ್ನ ನಾವು ಕಾನೂನಾತ್ಮಕವಾಗಿ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ-https://suddilivesmg.blogspot.com/2024/07/blog-post_13.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close