ಬಿಜೆಪಿಗೆ ಬರುವ ಬಗ್ಗೆ ಆತುರವಿಲ್ಲ-ಬಾಗಿನ ನೀಡಿ ಈಶ್ವರಪ್ಪ ಮಾತನಾಡಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಮೈದುಂಬಿ ಹರಿಯುತ್ತಿರುವ ತುಂಗೆಗೆ ಮಾಜಿ ಡಿಸಿಎಂ ಬಾಗಿನ ಅರ್ಪಿಸಿದ್ದಾರೆ. ಈ ವರ್ಷವೂ ಕೂಡ ಮಳೆ ಬೆಳೆಯನ್ನ ಹೆಚ್ಚಾಗಿ ನೀಡಲಿ ಎಂದುಆಶಿಸಿದರು.

ರಾಹುಲ್ ಗಾಂಧಿ ಹಿಂದೂ ಸಮಾಜದ ಮೇಲೆ ಆರೋಪ ಮಾಡಿದ್ದಾರೆ.‌ಯಾರೂ ಹಿಂದೂ ವಿರುದ್ಧ ಮಾತನಾಡಿರಲಿಲ್ಲ. ಮುಸ್ಲೀಂ ಬೆಂಬಲ ಪಡೆದು ಇದುವರೆಗೂ ಮತಗಳಿಸಿದರು. ಈಗ ಹಿಂದೂಗಳಿಗೆ ನೋವು ಆಗುವಂತೆ ಮಾತನಾಡಿದ್ದಾರೆ ಎಂದರು.

ವಿಪಕ್ಷ ನಾಯಕರಾಗಿರುವ ರಾಹುಲ್ ಈ ರೀತಿ ಮಾತನಾಡಬಾರದು. ಸಮಾಜ ತಿರಗಿ ಬಿದ್ದರೆ ರಾಹುಲ್ ವಿರುದ್ಧ ಮಾತ್ರ ಅಲ್ಲ ಇಡೀ ಕಾಂಗ್ರೆಸ್ ವಿರುದ್ಧವೇ ಹಿಂದೂ ಸಮಾಜ ತಿರುಗಿ ಬಿದ್ದರೆ ಕಷ್ಟ ಎಂದರು.

ವಾಕ್ಮೀಕಿ ನಿಗಮದ ಹಗರಣ ದೇಶದ ಗಮನ ಸೆಳೆದಿದೆ.‌ಪ.ಜಾ ಮತ್ತು ಪ.ಪಂದವರಿಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ ಗೊತ್ತಾಗಿದೆ. ನಿಗಮದ ಅಧ್ಯಕ್ಷ ದದ್ದಲ್ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ ಅವರನ್ನ ಬಂಧಿಸ ಬೇಕು ಎಂದ ಅವರು, ಮೂಡ ಸೈಟ್ ಹಗರಣದಲ್ಲಿ ಹೆಣ್ಣುಮಕ್ಕಳನ್ನ ಬೀದಿಗೆ ತರಲಾಗಿದೆ. ಹಗರಣ ನಡೆಯದೆ ಇಲ್ಲವೆಂದರೆ ತನಿಖಗೆಗೆ ನೀಡಿದ್ದೇಕೆ? ಹಾಗಾಗಿ ಸಿಎಂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಮಹಲಿಂಗ ಶಾಸ್ತಿಗೆ ಜು.15 ರ ಬದಲು 10 ರಂದು ನಡೆಯಲಿದೆ. ಜು.15 ರಂದು ನಗರಸಭೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತಿಲ್ಲವೆಂಬ ಅಂಶವನ್ನ ಇಟ್ಟುಕೊಂಡು ಶಿವಪ್ಪ ನಾಯಕ ವೃತ್ತದಿಂದ ಗೋಪಿ ವೃತ್ತದ ವರೆಗೆ ಪ್ರತಿಭಟನ ಮೆರವಣಿಗೆ ನಡೆಯಲಿದೆ ಎಂದರು.

ಬಡವರಿಗೆ ಗೋವಿಂದಾಪುರದಲ್ಲಿ ಕಟ್ಟಿಸಲಾಗಿರುವ 280 ರಿಗೆ ಮನೆ ಕೊಡಲಾಗಿದೆ. 5 ಸಾವಿರ ಜನರಿಗೆ ಮನೆಗಳಿಗೆ ನೀಡಬೇಕು. ಪಾಲಿಕೆಗೆ ತಕ್ಷಣ ಚುನಾವಣೆ ನಡೆಸಬೇಕು ಎಂಬ ಬೇಡಿಕೆಯೂ ಇದರಲ್ಲಿ ಅಡಗಿದೆ

ನಾನು ಮತ್ತು ವಕೀಲರ ನಡುವೆ ಮಾನನಷ್ಠ ಮೊಕದ್ದಮೆ ಹಾಕಲಾಗಿತ್ತು. ಮೊನ್ಬೆ ನ್ಯಾಯಾಲಯ 5/7 ಕ್ಕೆ ನ್ಯಾಯಾಲಯ ರದ್ದು ಮಾಡಿದೆ. ನ್ಯಾಯಾಲಯ ಸ್ಪಷ್ಟವಾಗಿ ನನ್ನ ವಿರುದ್ಧ ಆರೋಪವನ್ನ ಸ್ಪಷ್ಟಪಡಿಸಿದೆ. ಅವರ ವಿರುದ್ಧವೂ ಕೇಸ್ ಹಾಕಲಾಗಿದೆ. ಅದು ನಡೆಯಲಿದೆ.

ಬಿಜೆಪಿಯಲ್ಲಿ ಹಿಂದೂ ಇದ್ದೆ ಮುಂದೂ ಇದ್ದೆ. ತುರ್ತಾಗಿ ಬಿಜೆಪಿ ಸೇರುವ ಪ್ರಯತ್ನ ಮಾಡುತ್ತಿಲ್ಲ. ಕೆಲ ಪತ್ರಿಕೆಗಳು ಈಶ್ವರಪ್ಪ ಇನ್ನೇನು ಹೋಗೆ ಬಿಡ್ತಾರೆ ಎಂದು ಪ್ರಕಟಿಸಿತ್ತು. ಆದರೆ ಹಾಗೇನು ಇಲ್ಲ ಎಂದರು.

ಇದನ್ನೂ ಓದಿ-https://suddilive.in/archives/18721

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close