ಸುದ್ದಿಲೈವ್/ಶಿವಮೊಗ್ಗ
ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ತಗ್ಗಿದ ಕಾರಣ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕುಸಿದಿದೆ. ಆದರೆ ಅಡಿಗಳ ಲೆಕ್ಕಾಚಾರದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ನಿನ್ನೆ ಸಂಜೆ ಪಾಲಿಕೆ ಅಲರ್ಟ್ ನೀಡಿದ ಬೆನ್ನಲ್ಲೇ ತುಂಗ ನದಿಯ ನೀರಿನ ಪ್ರಮಾಣದಲ್ಲಿ ಕುಸಿತ ಆರಂಭವಾಗಿದೆ. 45 ಸಾವಿರ ಕ್ಯೂಸೆಕ್ ನಿಂದ ನಿನ್ನೆ ರಾತ್ರಿಯ ವೇಳೆ ತುಂಗೆಯ ಒಳಹರಿವು ಏರಲೇ ಇಲ್ಲ. ಸಧ್ಯಕ್ಕೆ ಗಾಜನೂರಿನ ಜಲಾಶಯದ 21 ಗೇಟ್ ನ್ನ ಅರ್ಧ ಅಡಿಗೆ ತೆರೆದು 33 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
16 ಸಾವಿರ ಕ್ಯೂ ಸೆಕ್ ನೀರು ಹರಿದು ಬರುತ್ತ ಭದ್ರೆಯ ಅಡಿ 129.6 ಅಡಿಗೆ ಏರಿಕೆ ಆದರು ಇಂದು ಅದರ ಒಳ ಹರಿವು ಕುಸಿತಗೊಂಡಿದೆ. ಸಧ್ಯಕ್ಕೆ 9 ಸಾವಿರ ಕ್ಯೂಸೆಕ್ ಹರಿದು ಬರುತ್ತಿದೆ. ಲಿಂಗನಮಕ್ಕಿಯಲ್ಲಿ 44024 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ 1742.65 ಅಡಿ ನೀರು ಸಂಗ್ರವಾಗಿದ್ದರೆ ಪ್ರಸ್ತುತ 1763 ಅಡಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ-https://suddilive.in/archives/18531