ಸುದ್ದಿಲೈವ್/ಶಿವಮೊಗ್ಗ
ಮದುವೆಯಾಗುವಂತೆ ಒತ್ತಾಯಿಸಿ ಕೊಪ್ಪದಿಂದ ಪ್ರಿಯಕರನನ್ನ ಹುಡುಕಿಕೊಂಡು ಬಂದಿದ್ದ ಸೌಮ್ಯ ಪ್ರಿಯಕರನೊಂದಿಗೆ ಜಗಳವಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕೊಲೆ ಪ್ರಕರಣ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.
ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಜನ್ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಮೂರು ವರ್ಷದಿಂದ ಇಬ್ಬರ ನಡುವೆ ಪರಿಚಯ ವಾಗಿತ್ತು. ಸ್ನೇಹ ಸಲುಗೆಯಿಂದ ಪ್ರೀತಿ ಬೆಳೆದಿತ್ತು. ಮದುವೆ ಆಗುವಂತೆ ಯುವತಿ ಒತ್ತಾಯಿಸುತ್ತಿದ್ದಳು ಅಂತ ಯುವಕ ಹೇಳಿದ್ದಾನೆ ಎಂದಿದ್ದಾರೆ.
ಇತ್ತೀಚೆಗೆ ಸಾಗರಕ್ಕೆ ವರ್ಗಾವಣೆ ಗೊಂಡಿದ್ದ ಸುಜನ್ ನನ್ನ ನೋಡಲು ಕೊಪ್ಪದಿಂದ ಸಾಗರ,ತೀರ್ಥಹಳ್ಳಿ ಗೆ ಯುವತಿ ಬಂದು ಹೋಗುತ್ತಿದ್ದಳು. ಸಾಗರಕ್ಕೂ ಯುವತಿ ಬಂದು ಹೋಗುತ್ತಿದ್ದಳು. ಸೃಜನ್ ಗೆ ಬೇರೆ ಹುಡುಗಿ ಜೊತೆ ಸಲುಗೆ ಬೆಳೆದಿತ್ತು. ಈ ವಿಚಾರದಿಂದ ಯುವತಿಗೆ ಕೋಪ ಬಂದಿತ್ತು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
ಜುಲೈ 2ಕ್ಕೆ ಸಾಗರಕ್ಕೆ ಯುವತಿ ಬಂದಿದ್ದಳು. ಸಾಗರದಿಂದ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ.ರಿಪ್ಪನಪೇಟೆ ಬಳಿ ಯುವತಿಯನ್ನು ಇಳಿಸಿ ನಿಮ್ಮ ಮನೆಗೆ ಹೋಗು ಎಂದಿದ್ದ. ದಾರಿ ಉದ್ದಕ್ಕೂ ಜಗಳ ಮಾಡಿಕೊಂಡು ಬಂದಿದ್ದಾರೆ. ಆ ವೇಳೆ ಯುವಕ ಕೋಪದಿಂದ ಯುವತಿಗೆ ಹೊಡೆದಿದ್ದಾನೆ.
ಯುವತಿ ಕೆಳಗೆ ಬಿದ್ದಿದ್ದಾಳೆ ನಂತರ ಕಾಲಿನಿಂದ ಕುತ್ತಿಗೆಗೆ ತುಳಿದಿದ್ದಾನೆ. ಯುವತಿ ಸಾವನ್ನಪ್ಪಿದ ನಂತರ ಸಾಗರಕ್ಕೆ ಬಂದು ಕಾರು ತಂದಿದ್ದಾನೆ. ಕಾರಲ್ಲಿ ಮೃತದೇಹ ತಂದು ಜಲಜೀವನ್ ಕಾಮಗಾರಿಯ ಕಾಲುವೆಯಲ್ಲಿ ಹೂತಿಟ್ಟಿದ್ದಾನೆ ಎಂದು ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_507.html