ಚೋರ್ ಬಜಾರ್ ನಲ್ಲಿ ಹೂವಿನ ಮಾರ್ಕೆಟ್ ರೀತಿಯಲ್ಲಿ ಕಟ್ಟಡ ನಿರ್ಮಿಸಿ-ಕೆಬಿಪಿ

ಸುದ್ದಿಲೈವ್/ಶಿವಮೊಗ್ಗ

ಚೋರ್ ಬಜಾರ್ ನಲ್ಲಿ ನಡೆದ ಬೆಂಕಿ ಅನಾಹುತ, ಸ್ನಾರ್ಟ್ ಸಿಟಿ ಯೋಜನೆಯ ಅವಾಂತರ, ವಿಐಎಸ್ಎಲ್ ಆರಂಭದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ತಿಳಿಸಿದ್ದಾರೆ. ಚೋರ್ ಬಜಾರ್ ನ ಅಗ್ನಿ ದುರಂತ ದುರ್ದೈವ ಎಂದು ಜೆಡಿಎಸ್ ನ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಬಣ್ಣಿಸಿದರು.

ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕದಳದವರಿಗೆ ತಿಳಿಸಲಾಯಿತು. ಈ ಕಟ್ಟಡ ಅವಘಡ ಆಗಿರುವ ಗುರಿಟ್ಟುಕೊಂಡು, ನುಂದಿನ ದಿನಗಳಲ್ಲಿ ಹೊಸದಾಗಿ ಬಜಾರ್ ನ ಕಟ್ಟಡ ನಿರ್ಮಾಣವಾಗಬೇಕು. ಹೂವಿನ ಮಾರ್ಕೆಟ್ ನಿರ್ಮಿಸಿದ ರೀತಿಯಲ್ಲಿಯೇ ಮಾಡಿಕೊಟ್ಟಂತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು.

ಈಗಿರು ಅಂಗಡಿಯವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟು, ಶಾಪಿಂಗ್ ಕಟ್ಟಡ ಮಾಡಿಕೊಡಬೇಕು. ನೂತನ ಆಯುಕ್ತರು ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನ ಗಙಭೀರವಾಗಿ ಮಾಡಿಕೊಡಬೇಕು. ಚೋರ್ ಬಜಾರ್ ನಲ್ಲಿ ನಾಲ್ಕಾರು ಅಂಗಡಿಗಳು ಬೆಂಕಿಯ ಅನಾಹುತವಾಗಿರಬಹುದು. ಆದರೆ ಸಂತ್ರಸ್ತರು ಪೂರ್ತಿ ಕಳೆದುಕೊಂಡಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಙದು ಆಗ್ರಹಿಸಿದರು.

ಪಾಲಿಕೆ ಅಸ್ಥಿತ್ವದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸ್ವಚ್ಛತೆ ಕಾಣುತ್ತಿಲ್ಲ. ನಗರದಲ್ಲಿ ಸ್ಮಾರ್ಟ್ ಸಿಟಿ ಎನಿಸಿಕೊಂಡರೂ ಗಲೀಜು ಹೆಚ್ಚಿದೆ. ಡೆಂಗೇ ಹೆಚ್ಚಾಗಿದೆ. ಸಣ್ಣಪುಟ್ಟ ಕ್ಲೀನಿಕ್ ಗಳು ತುಂಬಿದೆ. ಅಧಿಕಾರಿಗಳ ಅಂಕಿ ಅಂಶ ಇರಬಹುದು ಆದರೆ ಆಸ್ಪತ್ರೆಯಲ್ಲಿ ಕಾಲಿಡಲು ಅವಕಾಶವಿಲ್ಲ. ಪುಟ್ ಪಾತ್ ಮೇಲೆ ಗಲ್ಲಿ ಜನ ಕೂರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹೂವಿನ ಮಾರ್ಕೆಟ್ ಕಟ್ಟಡ ಅಧಿಕೃತವಾಗಿ ಉದ್ಘಾಟಬೆ ಆದರೂ ಓಪನ್ ಆಗಿಲ್ಲ. ಅದನ್ನೂ ಆದಷ್ಟುಬೇಗ ಆರಂಭವಾಗಬೇಕು. ಮಳೆಗಾಲ ಆರಂಭಾಗಿದೆ. ಮಳೆ ಹೆಚ್ಚಾದರೆ ನೀರುಗಳು ಮನೆಗೆ ನುಗ್ಗಲಿದೆ. ಅಣ್ಣನಗರ, ಟ್ಯಾಂಕ್ ಮೊಹಲ್ಲ, ಆರ್ ಎಂಎಲ್ ನಗರ ಸೇರಿದಂತೆ ಹಲವೆಡೆ ಹಾದು ಹೋಗಿರುವ ರಾಜಾಕಾಲುವೆಯ ಸಿಲ್ಟ್ ತೆಗೆಸುವಂತೆ ಆಗ್ರಹಿಸಿದರು. ನೋಡಲು ಕೇಳಲು ಹಾಗೂ ಓದಲು ಈ ವಿಷಯ ಸಣ್ಣಪುಟ್ಟ ಎನಿಸಿಕೊಂಡರೂ ವಿಷಯ ಗಂಭಿರತೆ ಇದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರು.

24×7 ಯೋಜನೆಯ ನೀರು ಮನೆಯ ತೊಟ್ಟಿಗೆ ಬಂದು ನೀರು ಬೀಳುತ್ತಿಲ್ಲ. 24×7 ಕಾಮಗಾರಿ ಸರಿಇದ್ದಂತೆ ಕಾಣುತ್ತಿಲ್ಲ. ಸರಿ ಮಾಡುವ ವಿಚಾರಕ್ಕೆ ಬರಬೇಕು. ದೊಡ್ಡಮಟ್ಟದ ಹಣ ವ್ಯಯವಾಗುತ್ತಿದೆ. ಯುಜಿಡಿ ಕನೆಕ್ಷನ್ ಸಹ ಸರಿಆಗಬೇಕು. ಮನೆಯಿಂದ ಬಂದ 6 ಇಂಚಿನ ಪೈಪ್ ಮುಂದೆ ಸಾಗ್ತಾ ಸಾಗ್ತಾ 4 ಇಂಚಿಗೆ ಇಳಿಸಿದ ಪರಿಣಾಮ ಯುಜಿಡಿ ಹೊಲಸೆಲ್ಕಾ ರಸ್ತೆ ಮೇಲೆ ಬರುತ್ತಿದೆ ಎಂದು ದೂರಿದರು.

ಪೆಟ್ರೋಲ್, ಡಿಸೇಲ್ ಹಾಲಿನ ದರವನ್ನ ಏರಿಸಿ ನಾಳೆ ಇನ್ನೇನು ಏರಿಕೆ ಆಗಲಿದೆ ಎಂಬ ಆತಂಕದಲ್ಲಿ ಬದುಕುವಂತಾಗಿದೆ. ವರ್ಷದ ಸಾಧನೆ ಹೇಳಬೇಕಾದ ಜಾಗದಲ್ಲಿ ದರ ಏರಿಕೆಯ ಶಾಪ ಸರ್ಕಾರಕ್ಕೆ ತಟ್ಟಲಿದೆ. ಹಿಂದಿನ ಸರ್ಕಾರ ದುಬಾರಿ ಎಂದು ಜರಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತೆ ಅದೇ ದರ ಏರಿಕೆ ಮಾಡಲಾಗುತ್ತಿದೆ ಎಂದು ದೂರಿದರು.

ಶಿವಮೊಗ್ಗದಲ್ಲಿ ಹೊಸದಾಗಿ ಯೋಜನೆಗಳು ಕಂಡುಬರುತ್ತಿಲ್ಲ. ಶಾಸಕರು ಯಾವದೇಉದ್ಘಾಟನೆ ಕಾರ್ಯದಲ್ಲಿ ಕಾಣಿಸಿಕೊಳ್ತಾ ಇಲ್ಲ. ಯಾವುದೇ ಹೊಸ ಯೋಜನೆ ಬರ್ತಾ ಇಲ್ಲ. ಸರ್ಕಾರ ಇರುವ ಸಾರ್ಜನಿಕ ಆಸ್ತಿಗಳನ್ನ ಮಾರಾಟಕ್ಕೆ ಮುಂದಾಗಿದೆ ಎಂದು ದೂರಿದರು.

ವಿಐಎಸ್ಎಲ್ ಮತ್ತು ಹೊಸ ಕಾರ್ಖಾನೆ ಆರಂಭವಾಗಬೇಕೆಂದು ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಹೊಸ ಮತ್ತು ವಿಐಎಸ್ ಎಲ್ ಆರಂಭಿಸುವ ಕುರಿತು

ಜಿಲ್ಲಾ ಅಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಅಧ್ಯಕ್ಷ ದೀಪಕ್ ಸಿಂಗ್, ಸಂಗಯ್ಯ, ವಕ್ತಾರ ನರಸಿಂಹ, ಪ್ರಚಾರ ಸಮಿತಿ, ಕಶ್ಯಪ್, ಧಯಾನಂದ್, ನಿಹಾಲ್, ಸುನೀಲ್ ಮೊದಕಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/18363

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close