ಬಜಾರ್ ಗೆ ಎಸ್ಪಿ ಮಿಥುನ್ ಕುಮಾರ್‌ಭೇಟಿ ಕೊಟ್ಟಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಗಾಂಧಿ ಬಜಾರ್ ನಲ್ಲಿ ಎಸ್ಪಿ ಮಿಥುನ್ ಕುಮಾರ್ ಮಿಂಚಿನ ಸಂಚಾರ ಮಾಡಿದ್ದಾರೆ. ಸ್ಥಳೀಯರು ಎಸ್ಪಿ ಅವರು ಭೇಟಿ ನೀಡಿದಾಗ ಅವರನ್ನ ಮುತ್ತುವರೆದಿರುವ ದೃಶ್ಯ ಲಭ್ಯವಾಗಿದೆ.

ಗಾಂಧಿ ಬಜಾರ್ ನಲ್ಲಿ ರಸ್ತೆ ಮಧ್ಯೆ ಕಡ್ಲೆ ಮಾರಾಟ ಮಾಡುವ ತಳ್ಳುವ ಗಾಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದವನಿಗೆ ಟ್ರಾಫಿಕ್ ಪೊಲೀಸರು ರಸ್ತೆ ಮೇಲಿಂದ ವ್ಯಾಪಾರ ಮಾಡುವುದನ್ನ ನಿಲ್ಲಿಸಿ ಬೇರೆಡೆಗೆ ತೆಗೆದುಕೊಂಡು ಹೋಗಲು ಹೇಳಿದ್ದಾರೆ.

ಮಧ್ಯಾಹ್ನದಿಂದಲೂ ಸೂಚನೆ ನೀಡಿದರೂ ಅಂಗಡಿಯವನು ತೆಗೆಯದ ಕಾರಣ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸೇರನ್ನ ಕಿತ್ತುಕೊಳ್ಳುವಾಗ ಅಚನಾಕ್ಕಾಗಿ ಆತನ ತಲೆಗೆ ಹೊಡೆತ ಬಿದ್ದಿದೆ. ಇದರಿಂದ ಸ್ಥಳೀಯರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ವ್ಯಾಪಾರಿಯನ್ನ ಗಾಯಗೊಳಿಸಿದ ಪೊಲೀಸರ ವಿರುದ್ಧ ದೂರು ದಾಖಲಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ, ದೊಡ್ಡಪೇಟೆ ಪಿಐ ರವಿ ಸಂಗನ ಗೌಡ ಮೊದಲಾದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಸಿಸಿ ಟಿವಿ ಫೂಟೇಜ್ ಇದ್ದು ಘಟನೆ ಪರಿಶೀಲಿಸುವುದಾಗಿ ಎಸ್ಪಿ ತಿಳಿಸಿದ್ದಾರೆ. ಘಟನೆ ಕುರಿತು ಯಾವುದೇ ದೂರುಗಳಿದ್ದರೆ ಸ್ಥಳೀಯ ದೂರು ನೀಡಬಹುದಾಗಿದೆ ಅವರು ಹೇಳಿದ್ದಾರೆ.

ಆದರೆ ಕಡ್ಲೆ ಮಾರುವ ವ್ಯಕ್ತಿಗೆ ಸ್ಟಿಚ್ ಹಾಕಲಾಗಿದೆ. ಆತ ಮಾಮೂಲಿ ಕೇಳುದ್ರೆ ಕೊಡ್ತಾ ಇದ್ದವಿ, ಆದರೆ ಆತ ಬಂದು ಏಕಾಏಕಿ ತಲೆಗೆ ಸೇರಿನಿಂದ ಹೊಡೆದಿರುವುದಾಗಿ ಆರೋಪಿಸಿದ್ದಾನೆ.

ದೃಶ್ಯ ನಡೆದಿರುವ ಬಗ್ಗೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಒಬ್ಬರು ದ್ವಿಚಕ್ರವಾಹನದಲ್ಲಿ ಬಂದು ಸೇರು ತೆಗೆದುಕೊಂಡು ಹೊಡೆಯುತ್ತಾರೆ. ಆಗ ಕಡ್ಲೆ ಮಾರುವ ವ್ಯಕ್ತಿ ಗಾಡಿ ತಳ್ಳಿಕೊಂಡು ಚಲಿಸುತ್ತಾನೆ ಅಷ್ಟರಲ್ಲಿ ತಲೆ ನೋವು ಜಾಸ್ತಿಯಾಗಿದೆ. ಬೈಕ್ ನಲ್ಲಿ‌ಪೊಲೀಸ್ ಮುಂದೆ ಸಾಗುತ್ತರೆ ಕಡ್ಲೆ ಮಾರುವ ವ್ಯಕ್ತಿ ಅಲ್ಲೆ ತಲೆ ಹಿಡಿದುಕೊಂಡು ಕೂರುತ್ತಾನೆ. ದೃಶ್ಯ ಹೀಗಿದೆ ನೋಡಿ

ಇದನ್ನೂ ಓದಿ-https://suddilive.in/archives/18783

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close