ಅಗ್ನಿ ಅನಾಹುತ ನಡೆದ ಸ್ಥಳಕ್ಕೆ ಹರಿದು ಬಂದ ನಾಯಕರ ದಂಡು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗಾಂಧಿಬಜಾರನ ಚೋರ್ ಬಜಾರ್ ನಲ್ಲಿ ಕಾಣಿಸಿಕೊಡ ಅಗ್ನಿ ದುರಂತದಲ್ಲಿ ಆಹುತಿಗೊಳಗಾದ ಅಂಗಡಿಗಳನ್ನ ವೀಕ್ಷಿಸಲು ನಾಯಕರ ದಂಡೇ ಹರಿದು ಬಂದಿದೆ.

ನಿನ್ನೆ ರಾತ್ರಿ 10 ಗಂಟೆಯಲ್ಲಿ ಚೋರ್ ಬಜಾರ್ ನ ಬಳೆ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಆರಂಭದಲ್ಲಿ ಮೂರು ಅಂಗಡಿಗಳಲ್ಲಿ ಕಾಣಿಸಿಕೊಂಡಿತ್ತು. ಮೂರು ಅಂಗಳಿಗಳ ನಂತರ 6 ಅಂಗಡಿಗಳಿಗೆ ಹರಡಿಕೊಂಡು ಆತಂಕ ಹುಟ್ಟಿಸಿತ್ತು.

ಎರಡು ಫೈರ್ ಇಂಜಿನ್ ಮೂಲಕ ನೀರು ಹಾಕಿ ನಿಯಂತ್ರಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ನಿನ್ನೆ ರಾತ್ರಿ ಅಲ್ಲೇ ಇದ್ದ ಶಾಸಕ ಚೆನ್ನಬಸಪ್ಪ ಮತ್ತು ಕಾಂಗ್ರೆಸ್ ನ ನಾಯಕ ಹೆಚ್ ಸಿ ಯೋಗೀಶ್ ಇಂದು ಬೆಳಿಗ್ಗೆ ಪಾಲಿಕೆ ಆಯುಕ್ತರ ಜೊತೆ ಬಂದು ಪರಿಶೀಲಿಸಿದರು.

ಇಂದು ಬೆಳಿಗ್ಗೆ ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ ಕೆ.ಈ.ಕಾಂತೇಶ್, ಎಂಎಲ್ ಸಿ ಡಿ.ಎಸ್ ಅರುಣ್, ಮಾಜಿ‌ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸ್ಥಳಕ್ಕೆ ಧಾವಿಸಿ ಸಂತ್ರಸ್ತರ ನೋವಿಗೆ ಸ್ಪಂಧಿಸಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮಾನಸಿಕ ಬೆಂಬಲ ನೀಡಿದ್ದಾರೆ. ಈ ವೇಳೆ ತಹಶೀಲ್ದಾರ್ ಗಿರೀಶ್ ಸಹ ಸಾಥ್ ನೀಡಿದ್ದರು.

ಪರಿಹಾರ ಮಾತ್ರ ಮರೀಚಿಕೆ

ನಿನ್ನೆ ದುರಂತದಲ್ಲಿ ಅನಾಹುತಕ್ಕೊಳಗಾದ ಅಂಗಡಿ ಮಾಲೀಕರಿಗೆ ಸಾಂತ್ವಾನ ಹೇಳಿದರು. ಆದರೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಪಾಲಿಕೆಯೂ ಸಹ ಪರಿಹಾರವನ್ನ ಪರಿಶೀಲಿಸಿ ನೀಡುವುದಾಗಿ ಭರವಸೆ ನೀಡದ್ದಾರೆ. ಅಂಗಡಿಯ ಮಾಲೀಕರಿಗೆ ಯಾರು ಬಂದ್ರು, ಯಾರೂ ಹೋದರೂ ಪರಿಹಾರ ಸಿಗುತ್ತಾ ಎಂಬ ನೀರೀಕ್ಷೆಯಲ್ಲಿರುವನಿಗೆ ನಿರಾಶೆ ಮೂಡಿಸಿದೆ.

ಇದನ್ಬೂ ಓದಿ-https://suddilive.in/archives/18315

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close