ಮತ್ತೆ ಜೀವಕಳೆ ಪಡೆದ ಜಲಾಶಯಗಳು

ಸುದ್ದಿಲೈವ್/ಶಿವಮೊಗ್ಗ

ಪುನರ್ವಸು ಮಳೆ ಕಳೆದ 24 ಗಂಟೆಯಲ್ಲಿ ಮಲೆನಾಡಿನ ಅದರಲ್ಲೂ ಶಿವಮೊಗ್ಗದಲ್ಲಿ ಉತ್ತಮವಾಗಿ ಬೀಳುತ್ತಿದೆ. ಇದರಂದ ಜಿಲ್ಲೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ.

ಗಾಜನೂರಿನಲ್ಲಿರುವ ತುಂಗ ಜಲಾಶಯಕ್ಕೆ 33 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೆ ಪ್ರಮಾಣದ ನೀರನ್ನ ನದಿಗೆ ಹರಿಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಮಂಟಪ ಮುಳುಗಲು ಒಂದು ಅಡಿ ಬಾಕಿ ಇದೆ.

ಗಾಜನೂರಿನಲ್ಲಿ 21 ಗೇಟನ್ನ ಅರ್ಧ ಮೀಟರ್ ನಷ್ಟು ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ. ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭದ್ರ ಜಲಾಶಯಕ್ಕೆ 16 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ಇದರಿಂದ ನಿನ್ನೆ ಭದ್ರದ ಜಲಾಶಯದ ಮಟ್ಟ 139.8 ಅಡಿಯಿಂದ 141.3 ಅಡಿಗೆ ಏರಿಕೆಯಾಗಿದೆ. ಅಂದರೆ ಸುಮಾರು ಒಂದುವರೆ ಅಡಿಯಷ್ಟು ನೀರು 24 ಗಂಟೆಯಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷವೂ ಭದ್ರಜಲಾಶಯದ ನೀರಿನ ಮಟ್ಟ 141.3 ಅಡಿಯಷ್ಟೇ ಇತ್ತು. ಅದರಂತೆ ಲಿಂಗನಮಕ್ಕಿಯಲ್ಲಿ ಜಲಾಶಯಕ್ಕೆ 45,115 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

1819 ಅಡಿ ನೀರು ಸಂಗ್ರಹದ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದ ನಿರಿನ ಮಟ್ಟ ನಿನ್ನೆ 1775.70 ಅಡಿ ನೀರು ಸಂಗ್ರಹವಿತ್ತು. ಇಂದು 1778.15 ಅಡಿ ಏರಿಕೆಯಾಗಿದೆ. ಅಂದರೆ 24 ಗಂಟೆಯಲ್ಲಿ 2.45 ಅಡಿ ಏರಿಕೆಯಾಗಿದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟ 1755.30 ಅಡಿ ನೀರು ಸಙಗ್ರಹವಾಗಿತ್ತು.

ಇದನ್ನು ಓದಿ-https://suddilive.in/archives/19294

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close