ಸುದ್ದಿಲೈವ್/ಶಿವಮೊಗ್ಗ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಗೆ ಭದ್ರ ನದಿ ಮೈದುಂಬಿ ಹರಿಯುತ್ತಿದ್ದಾಳೆ. ಕಾರಣ ಭಿಆರ್ ಪಿಯ ಭದ್ರ ಜಲಾಶಯದಿಂದ 12 ಸಾವಿರ ಕ್ಯೂ ಸೆಕ್ ನೀರು ಹರಿಸಲಾಗುತ್ತಿದೆ.
ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರನ್ನ ಎಡ ಮತ್ತು ಬಲ ನಾಲೆಗಳಿಂದ ಹಾಗೂ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದ್ದು 12 ಸಾವಿರ ಕ್ಯೂಸೆಕ್ ನೀರನ್ನ ಜಲಾಶಯದಿಂದ ಬಿಡಲಾಗುತ್ತಿದೆ.
ಜಲಾಶಯದಿಂದ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವನ್ನ ಸೂರೆಗೊಳ್ಳಲು ಬಿಆರ್ ಪಿಯ ಜಲಾಶಯದ ಮುಂಭಾಗ ಮತ್ತು ಭದ್ರ ನದಿಯ ಸೇತುವೆಯ ಮೇಲೆ ಜನಗಳು ಫೋಟೊ ವಿಡಿಯೋಗಾಗಿ ಮುಗಿ ಬೀಳುತ್ತಿದ್ದಾರೆ.
ಸೆಲ್ಫಿಗಳ ಸುರಿ ಮಳೆ ಆರಂಭವಾಗುತ್ತಿದೆ. ಸೇತುವೆ ಮೆಲೆ ನಡೆಯುತ್ತಿದೆ. ಆದರೆ ಖಾಸಗಿ ಬಸ್ ನವರು ಮಾಧ್ಯಮಗಳವರೊಂದಿಗೆ ಜಗಳಕ್ಕೆ ಬಿದ್ದಿರುವ ದೃಶ್ಯಗಳು ಲಭ್ಯವಾಗಿದೆ. ಮಾಧ್ಯಮ ಗಳವರು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಜಗಳಕ್ಕೆ ಬಿದ್ದಿದ್ದಾರೆ.
ಇದರಿಂದ ಕಿಲೋಮೀಟರ್ ಗಟ್ಟೆಲೆ ವಾಹನಗಳು ಜ್ಯಾಮ್ ಆಗಿದೆ.
ಇದನ್ನೂ ಓದಿ-https://www.suddilive.in/2024/07/blog-post_904.html