ಜೈಲು ತಲಾಶಿ



ಸುದ್ದಿಲೈವ್/ಶಿವಮೊಗ್ಗ


ಐದು ಜನ ಪೊಲೀಸ್ ಇನ್ ಸ್ಪೆಕ್ಟರ್, 10 ಜನ ಪಿಎಸ್ಐ ಹಾಗೂ 50 ಜನ ಪೊಲೀಸ್ ಸಿಬ್ಬಂದಿಗಳ ತಂಡ ಇಂದು ಓತಿಘಟ್ಟದಲ್ಲಿರುವ ಶಿವಮೊಗ್ಗ ಕಾರಾಗೃಹದಲ್ಲಿ ತಲಾಶಿ ನಡೆಸಿದೆ. ಈ ತಲಾಶಿ ಪೊಲೀಸರ  ದಿನಚರಿಯ ಕೆಲಸವೆನಿಸಿಕೊಂಡರೂ ಸಹ ಪೊಲೀಸರ ದಾಳಿ ಮಹತ್ವ ಪಡೆದುಕೊಂಡಿದೆ. 


ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ರವರ  ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ  ಅನಿಲ್ ಕುಮಾರ್ ಭೂಮರಡ್ಡಿ ನೇತೃತ್ವದ, ಡಿವೈಎಸ್ಪಿ  ಬಾಬು ಆಂಜನಪ್ಪ, ಡಿಎಆರ್ ಡಿವೈಎಸ್ಪಿ ಕೃಷ್ಣ ಮೂರ್ತಿ, ಜಯನಗರ ಪಿಐ ಸಿದ್ದೇಗೌಡ, ಮಹಿಳಾ ಠಾಣೆ ಪಿಐ ಭರತ್, ತುಂಗ ನಗರ ಪೊಲೀಸ್ ಠಾಣೆಯ ಪ್ರಭಾರಿ ಪಿಐ ಅಶ್ವಥ್ ಗೌಡ, ಕುಂಸಿ ಠಾಣೆ ಪಿಐ ಹರೀಶ್ ಕೆ ಪಾಟೀಲ್,  ಮತ್ತು ವಿನೋಬ ನಗರ ಠಾಣೆಯ ಪಿಐ ಚಂದ್ರಕಲಾ, ಹಾಗೂ 10 ಜನ ಪಿಎಸ್ಐ  ಮತ್ತು 50 ಜನ ಪೊಲೀಸ್ ಸಿಬ್ಬಂಧಿಗಳ ತಂಡವು ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದೆ, 


ಮಹಿಳಾ ಬ್ಯಾರಾಕ್ ಗಳನ್ನು ಸೇರಿದಂತೆ ಕೇಂದ್ರ ಕಾರಾಗೃಹವನ್ನು ಪರಿಶೀಲನೆ ನಡೆಸಿದರು. ಸಧ್ಯಕ್ಕೆ ದಾಳಿಯ ವೇಳೆ ಜೈಲಿನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಾರಾಗೃಹದಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳು ಪತ್ತೆಯಾಗಿದ್ದವು. 


ಜೈಲಿನ ಖೈದಿಗಳಿಗೆ ಗಾಂಜಾ ಸಾಗಿಸಲು ಹೋಗಿ ಕೆಲ ಎಫ್ಐಆರ್ ಗಳು ದಾಖಲಾಗಿದ್ದವು. ಮೊಬೈಲ್ ಬಳಕೆ ನಿಷೇಧವಿದ್ದರೂ ಖೈದಿಗಳನ್ನ ಭೇಟಿ ಮಾಡುವ ನೆಪದಲ್ಲಿ ಸಂದರ್ಶಕರು ಸಾಗಿಸುವ ಪ್ರಯತ್ನಿಸಿದ ಉದಾಹರಣೆಗಳಿವೆ. ಕರ್ನಾಟಕ ರಾಜ್ಯ ಕೈಗಾರಿಕಾ  ಭದ್ರತಾ ಪಡೆಗಳಿಂದ ಸಧ್ಯಕ್ಕೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಅದರಲ್ಲೂ ಇಂದಿನ ಪೊಲೀಸರ ದಾಳಿ ಮಹತ್ವ ಪಡೆದುಕೊಂಡಿದೆ. 

ಇದನ್ನೂ ಓದಿ-https://www.suddilive.in/2024/07/blog-post_948.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close