ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಜಾವಗಟ್ಟಿ ಬಳಿ ಭೀಕರ ಅಪಘಾತ ನಡೆದಿದೆ. ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಉಂಟಾಗಿ ಸ್ಥಳದಲ್ಲಿ ವ್ಯಕ್ತಿಯೋರ್ವ ಸಾವು ಕಂಡಿದ್ದಾನೆ. ಮೃತವ್ಯಕ್ತಿಯನ್ನ ಅನಿಮಲ್ ರೆಸ್ಕ್ಯೂ ಪ್ರಸಾದ್ ಎಂದು ಗುರುತಿಸಲಾಗಿದೆ.
ಮುಖಾಮುಖಿ ಡಿಕ್ಕಿ ಪರಿಣಾಮ ಖಾಸಗಿ ಬಸ್ ಪಲ್ಟಿ ಹೊಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಾವಗಟ್ಟಿ ಬಳಿಯ ದೇವಿಕೊಪ್ಪ ಕೆರೆ ಏರಿ ಮೇಲೆ ಘಟನೆ ನಡೆದಿದೆ.
ಕಾರಿನ ಚಾಲಕ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಆನವಟ್ಟಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ರಾಜಲಕ್ಷಿ ಖಾಸಗಿ ಬಸ್ ಮತ್ತು ಕಾರಿಗೆ ಡಿಕ್ಕಿ ಉಂಟಾಗಿದೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗದೆ. ಶಿವಮೊಗ್ಗ ಕಡೆಯಿಂದ ಕಾರು ಹಾಗೂ ಶಿರಾಳಕೊಪ್ಪಕಡೆಯಿಂದ ಬರುತ್ತಿದ್ದ ಬಸ್ ಬರುತ್ತಿದೆ. ಗಾಯಗಳನ್ನು ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿದೆ.
ಪ್ರಸಾದ್ ಗೆ ಬೀದಿನ ನಾಯಿಗಳ ಬಗ್ಗೆ ಕಾಳಜಿ ಇತ್ತು. ಪಾಲಿಕೆಯ ಬಹುತೇಕ ಪ್ರಾಣಿಗಳನ್ನ ಸಂರಕ್ಷಣ ಕಾರ್ಯದಲ್ಲಿ ತೊಡಗಿದ್ದಾರೆ. 217 ರಲ್ಲಿ ಭದ್ರಾವತಿಯ ಗ್ರಾಮಾಂತರ ಭಾಗದಲ್ಲಿ 150 ನಾಯಿಗಳನ್ನ ಜೀವಂತ ಹೂತು ಹಾಕಲಾಗಿತ್ತು. ಈ ಪ್ರಾಕರಣವನ್ನ ತಾರ್ಕದ ಹಂತಕ್ಕೆ ತೆಗೆದುಕೊಂಡು ಹೋಗಿದ್ದೇ ಪ್ರಸಾದ್.
ಇದನ್ನೂ ಓದಿ-https://suddilive.in/archives/18374