ಗ್ರಾಮೀಣ ಅಂಚೆ ಪಾಲಕ-ಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

 ಸುದ್ದಿಲೈವ್/ಶಿವಮೊಗ್ಗ


ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

         ವೆಬ್‍ಸೈಟ್ www.indiapostgdsonline.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಆಗಸ್ಟ್ 5 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ಎಲ್ಲ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲಿಷ್‍ನಲ್ಲಿ ಕನಿಷ್ಟ ತೇರ್ಗಡೆ ಅಂಕ ಹೊಂದಿರಬೇಕು. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. 


ಅಭ್ಯರ್ಥಿಯ ವಯೋಮಿತಿ 18 ರಿಂದ 40 ವರ್ಷ. ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುವುದು. ಶಿವಮೊಗ್ಗ ಅಂಚೆ ವಿಭಾಗದಲ್ಲಿ 89 ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ ಅಂಚೆ ವಿಭಾಗದ ಸಂಪರ್ಕ ಸಂಖ್ಯೆ : 08182-222516 ಹಾಗೂ ಆಯಾ ವಿಭಾಗದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ-https://www.suddilive.in/2024/07/blog-post_132.html


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close