ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಂಡ ರೈತ ಕೊಲ್ಲೂರಪ್ಪ

ಸುದ್ದಿಲೈವ್/ರಿಪ್ಪನ್‌ಪೇಟೆ 


ಸಾಲಬಾಧೆ ತಾಳಲರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಕೆಂಚನಾಲ ಗ್ರಾಮದ ಕೊಲ್ಲೂರಪ್ಪ (55) ಮೃತ ದುರ್ಧೈವಿಯಾಗಿದ್ದಾರೆ.


ಕೊಲ್ಲೂರಪ್ಪನವರಿಗೆ ಕೆಂಚನಾಲ ಗ್ರಾಮದ ಸರ್ವೇ ನಂ:50/3 ರಲ್ಲಿ 1 ಎಕ್ಕರೆ 18 ಗುಂಟೆ ತರಿ ಜಮೀನಿರುವೆ. ಅದರಲ್ಲಿ ಸ್ವಲ್ಪ ಅಡಿಕೆ ಮತ್ತು ಸ್ವಲ್ಪ ಶುಂಠಿಯನ್ನು ಹಾಕಿರುತ್ತಾರೆ. ಸದರಿ ಜಮೀನಿನಲ್ಲಿ ಅಡಿಕೆ ಹಾಕುವ ಸಲುವಾಗಿ ಅಲ್ಲಿ ಇಲ್ಲಿ ಸಾಲ ಮಾಡಿ ಬೋರ್ ವೆಲ್ ಕೊರೆಯಿಸಿ ನಂತರ ಅಡಿಕೆ ಗಿಡಗಳನ್ನು ಹಾಕಿರುತ್ತಾರೆ. 


ಈ ಬಗ್ಗೆ ಧರ್ಮಸ್ಥಳ ಸಂಘದಲ್ಲಿ ಬೆಳೆ ಅಭಿವೃದ್ಧಿಗೆ ಡಿಸೆಂಬರ್ 2023 ರಲ್ಲಿ 4 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಅಲ್ಲದೇ ಚೈತನ್ಯ ಪೈನಾನ್ಸ್ ನಲ್ಲಿ 76,000/- ರೂಪಾಯಿ ಸಾಲವನ್ನು ಪಡೆದುಕೊಂಡಿರುತ್ತಾರೆ. ಕಳೆದ ವರ್ಷ ಮಳೆ ಸರಿಯಾಗಿ ಆಗದೇ ಬೆಳೆಯು ಬಂದಿರುವುದಿಲ್ಲ. 


ಈ ವರ್ಷ ಶುಂಠಿ ಬೆಳೆಯನ್ನು ಹಾಕಿದ್ದು ಅಡಿಕೆ ಮತ್ತು ಶುಂಠಿ ಬೆಳೆಗಾಗಿ ರಿಪ್ಪನ್ ಪೇಟೆಯ ಕೆನರಾ ಬ್ಯಾಂಕಿನಲ್ಲಿ 2 ಲಕ್ಷ ರೂಪಾಯಿ ಬೆಳೆ ಸಾಲ ಹಾಗೂ ಬಂಗಾರವನ್ನು ಅಡವಿಟ್ಟು 3 ಲಕ್ಷ ರೂಪಾಯಿ ಸಾಲವನ್ನು ಯೂನಿಯನ್ ಬ್ಯಾಂಕ್ ರಿಪ್ಪನ್ ಪೇಟೆಯಲ್ಲಿ 1 ಲಕ್ಷ ರೂಪಾಯಿ ಸಾಲ ಪಡೆದು ಬೆಳೆಗೆ ಹಾಕಿರುತ್ತಾರೆ. ಈಗ ಮಳೆ ಅತೀಯಾಗಿ ಬಂದಿದ್ದರಿಂದ ಶುಂಠಿ ಬೆಳೆಯು ಯಾಕೋ ಸರಿಯಾಗಿ ಬೆಳೆಯದೇ ಇದ್ದುದ್ದರಿಂದ ಕೊಲ್ಲೂರಪ್ಪ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:21/07/2024 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳೆನಾಶಕ ಸೇವಿಸಿದ್ದಾರೆ.


ಕುಟುಂಬಸ್ಥರು ಕೊಲ್ಲೂರಪ್ಪನವರಿಗೆ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಅಂಬ್ಯುಲೆನ್ಸ್ ವಾಹನದಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದರು ಆದರೆ ಸೋಮವಾರ ಸಂಜೆ ಚಿಕಿತ್ಸೆಯಿಂದ ಗುಣಮುಖರಾಗದೇ ಮೃತಪಟ್ಟಿರುತ್ತಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://www.suddilive.in/2024/07/blog-post_540.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು