ಹೊಸನಗರ ಮತ್ತು ಶಿವಮೊಗ್ಗದಲ್ಲಿ ಭಾರಿ ಮಳೆ ಹಾನಿಗೊಳಗಾದ ಮನೆಗಳು

 ಸುದ್ದಿಲೈವ್/ಶಿವಮೊಗ್ಗ/ಹೊಸನಗರ


ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದೆ. 66.08 ಮಿಮಿ ಮಳೆ ಜಿಲ್ಲೆಯಲ್ಲಿ ಸುರಿದಿದೆ ಜುಲೈನಲ್ಲಿ ವಾಡಿಕೆ ಮಳೆಯೇ 603.54 ಮಿಮಿ ಮಳೆ ಬೀಳುವ ನಿರೀಕ್ಷೆ ಇತ್ತು‌ ಈಗ 536.91 ಮಿಮಿ ಮಳೆ ಸುರಿದಿದೆ. 


ಹೊಸನಗರದಲ್ಲಿ 108 ಮಿಮಿ ಮಳೆಯಾಗಿದೆ. ಇಲ್ಲಿನ ವಾಡಿಕೆ ಮಳೆ 1162 ಮಿಮಿ ಮಳೆಯಾಗಬೇಕಿತ್ತು. ಈಗಾಗಲೇ  919.20 ಮಿಮಿ ಮಳೆಯಾಗಿದೆ. ಶಿವಮೊಗ್ಗದಲ್ಲೂ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿದೆ. ಪುನರ್ವಸು ಮಳೆಯ ಆರ್ಭಟಕ್ಕೆ ಹೊಸನಗರ  ತಾಲೂಕಿನ ರಿಪ್ಪನ್ ಪೇಟೆಯ ಶಿವ ಮಂದಿರ ಬಳಿಯ  ಮನೆಯೊಂದರ ಗೋಡೆ ಕುಸಿತರಿಪ್ಪನ್ ಪೇಟೆಯ ವಾರ್ಡ್ ನಂಬರ್ ಮೂರರ ಬರುವೆ ಪ್ರದೇಶದ ರತ್ನಮ್ಮ ಎಂಬವರಿಗೆ ಸೇರಿದ ಮನೆಗೋಡೆ ಕುಸಿದಿದೆ. 

ಹೊಸನಗರದಲ್ಲಿ ಬಿದ್ದ ಮನೆ


ಮನೆಯ ಮಲಗುವ ಕೊಠಡಿಯ ಗೋಡೆ ಕುಸಿತಗೊಂಡಿದೆ. ಸತತ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಗೋಡೆ ಕುಸಿತವಾಗಿದೆ. ಇಂದು ಬೆಳಗ್ಗೆ  ದುರ್ಘಟನೆ ನಡೆದಿದೆ. ಗೋಡೆ ಕುಸಿತದಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಗ್ರಾಮಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಶಿವಮೊಗ್ಗದಲ್ಲಿ 10 ಮನೆ ಹಾನಿ

ಶಿವಮೊಗ್ಗ ತಾಲೂಕು ಬನ್ನಿಕೆರೆಉ ಸಾಕಿಬಾಯಿ ಮನೆ


ಕಳೆದ 24 ಗಂಟೆಯಲ್ಲಿ ಸುರಿಯುತ್ತಿರುವ ಮಳೆಗೆ ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ 10 ಮನೆಗಳು ಹಾನಿಗೊಳಗಾಗಿದೆ. ಪ್ರಮುಖವಾಗಿ ಬನ್ನಿಕೆರೆ ವಾಸಿ ಸಾಕಿ ಬಾಯಿ ಮನೆಯ ಗೋಡೆ ಮಳೆಯಿಂದ ಕುಸಿದು ಬಿದ್ದಿದೆ. ಗಾಡಿಕೊಪ್ಪದಲ್ಲಿ ದೇವಿ ಬಾಯಿ ಮತ್ತು ಜಗದೀಶ್ ಎಂಬುವರಿಗೆ ಸೇರಿದ ಮನೆ ಹಾನಿಯಾಗಿದೆ.  ಶಿವಮೊಗ್ಗ ತಾಲೂಕಿನಲ್ಲಿ ಈ ತಿಂಗಳಲ್ಲಿ ಒಟ್ಟು 44 ಮನೆ ಗೋಡೆಗಳು ಹಾನಿಯಾಗಿವೆ.

ಇದನ್ನೂ ಓದಿ-https://www.suddilive.in/2024/07/blog-post_807.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close