ಶ್ರೀದೇವಿ ಮಹಾತ್ಮ ಧಾರವಾಹಿ ತಂಡ ಸಿಗಂದೂರಿನಲ್ಲಿ ಬೆಳಗಿದ ಅಖಂಡ ದೀಪ

ಸುದ್ದಿಲೈವ್/ಶಿವಮೊಗ್ಗ

ಶ್ರೀ ರಾಘವೇಂದ್ರ ಸ್ವಾಮಿ‌ ಮಹಿಮೆ, ಎರಡುವರೆ ವರ್ಷ ಟೆಲಿಕಾಸ್ಟ್ ಆದ  ಯಡಿಯೂರು ಸಿದ್ದಲಿಂಗೇಶ್ಚರ, ಯಲ್ಲಮ್ಮ ದೇವಿ ಮಹತ್ಮೆಯನ್ನ ಲೋಕರ್ಪಣೆ ಮಾಡಿರುವ ಸುವರ್ಣ ಚಾನೆಲ್ ನಿಂದ ಮತ್ತೊಂದು ಪೌರಾಣಿಕ ಧಾರವಾಹಿ ಶ್ರೀದೇವಿ ಮಹಾತ್ಮೆ ಈಗಾಗಲೇ ಪ್ರಸಾರವಾಗುತ್ತಿದೆ.

ಈ ತಂಡ ಶಕ್ತಿಕೇಂದ್ರವಾಗಿರುವ ಸಿಗಂದೂರಿನ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದೆ.ಈ ವೇಳೆ ನಡೆದ ಸಭಾಕಾರ್ಯಕ್ರಮದಲ್ಲಿ ನಿರ್ಮಾಪಕ ಅರವಿಂದ್ ಮಾತನಾಡಿ, ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿ 1000 ಎಪಿಸೋಡ್ ಮುಗಿದಿದೆ. 500 ಎಪಿಸೋಡನ್ನ ಯಲ್ಲಮ್ಮ ದೇವಿ ಮಹತ್ಮೆ ಮುಗಿಸಿದೆ. ಪೌರಾಣಿಕ ಧಾರವಾಹಿ ಸುಲಭವಾಗಿ ನಿರ್ಮಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಹೇಳಿದರು.

ಅದರದೇ ಆದ ವಸ್ತ್ರಾಲಂಕಾರ, ಸೆಟ್ ನ್ನ ನಿರ್ಮಿಸಬೇಕಾಗುತ್ತದೆ. ಪೌರಾಣಿಕ ಧಾರವಾಹಿ ನಿರ್ಮಾಣಕ್ಕೆ ಟಿವಿಚಾನೆಲ್ ಗಳು ಹೊರ ರಾಜ್ಯದ ನಿರ್ಮಾಪಕರಿಗೆ ಕೊಡುತ್ತದೆ‌. ಆದರೆ ಸ್ಟಾರ್ ಸುವರ್ಣ ಟಿವಿ ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿಯನ್ನ ಮೊದಲ ಬಾರಿಗೆ ಕನ್ನಡಿಗರಿಗೆ ನೀಡಿದೆ. ಧಾರವಾಹಿ ಪ್ರತಿದಿನ 7 ಗಂಟೆಗೆ ಪ್ರಸಾರವಾಗುತ್ತಿದೆ ಎಂದರು.

ಶಿವನ ಪಾತ್ರಧಾರಿ ಅರ್ಜುನ್ ರಮೇಶ್ ಮಾತನಾಡಿ, ಮೂರು ಬಾರಿ ಶಿವನ ಪಾತ್ರ ನನಗೆ ಸಿಕ್ಕಿದೆ. ಸಣ್ಣ ಗರ್ವನೂ ಇದೆ. ಪೌರಾಣಿಕ ಧಾರವಾಹಿಗಳು ಆಧುನಿಕ ಯುಗದಲ್ಲಿ ಜನ ಬೆಂಬಲಿಸುವಂತೆ ಕೋರಿದರು.

ರೀಲ್ಸ್ ಮಾಡುದ್ರೆ ಫೇಮಸ್ ಆಗ್ತೀವಿ. ಆಕ್ಟಿಂಗ್ ದುನಿಯಾದಲ್ಲಿ ಅವಕಾಶಗಳು ಬರ್ತಾವೆ  ಜಂಟಲ್ ಮ್ಯಾನ್  ಸಿನಿಮಾದಲ್ಲಿ ವಿಲನ್ ಪಾತ್ರಮಾಡಿದ್ದೀನಿ. ಕೆಲ ಧಾರವಾಹಿಯನ್ನ ತಿರಸ್ಕರಿಸಿದ್ದೇನೆ. ಕಾರಣ ಒಂದೇ ಉದ್ದೇಶ ಒಳ್ಳೆಯಪಾತ್ರ ಮಾಡುವುದು ನನ್ನ ಉದ್ದೇಶ ಎಂದರು.

ಪಾರ್ವತಿಯ ಪಾತ್ರಧಾರಿ ಜೀವಿತರವರು ಮಾತನಾಡಿ, ತಾಯಿ ಪಾತ್ರ ಮಾಡಲು ದೊಡ್ಡಪುಣ್ಯ ಮಾಡಿದ್ದೇನೆ. ಇದು ಮೊದಲನೇ ಧಾರವಾಹಿಯಾಗಿದೆ. ಒತ್ತಡ ವಿಲ್ಲದೆ ಕೆಲಸ ಮಾಡುತ್ತಿರುವೆ. ಧಾರವಾಹಿ ಈ ತಿಂಗಳು ಒಂದರಿಂದ ಆರಂಭವಾಗಿದೆ ಜನರು ಪ್ರತಿದಿನ ಸಂಜೆ 7 ಗಂಟೆಗೆ ನೋಡುವಂತೆ ಕೋರಿದರು.

ವೇದಿಕೆ ಮೇಲೆ ಗೋಪಾಲ ಕೃಷ್ಣ ಶರ್ಮ, ಧರ್ಮಾಧಿಕಾರಿಗಳ ಪುತ್ರ ರವಿಕುಮಾರ್ ಉಪಸ್ಥಿತರಿದ್ದರು. ಸ್ಟಾರ್ ಸುವರ್ಣ ದೀಪವನ್ನ ರವಿಕುಮಾರ್ ಬೆಳಗಿದರು.

ಇದನ್ನೂ ಓದಿ-https://suddilive.in/archives/19471

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close