ಮೂಲೆಗದ್ದೆ ಮಠದ ಸಮೀಪ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಸುದ್ದಿಲೈವ್/ಶಿವಮೊಗ್ಗ

ಮೂಲೆಗದ್ದೆ ಮಠದ ಸಮೀಪ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಹಾದು ಹೋಗುವ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ(NH-766c)ಯಲ್ಲಿ ಮಳೆಗೆ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದಿದೆ.

ಬೃಹತ್ ಮರ ಬಿದ್ದ ಪರಿಣಾಮ ಕೆಲವು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಮೂಲೆಗದ್ದೆ ಮಠ ಬಸ್ ನಿಲ್ದಾಣದ ಸಮೀಪವೇ ಮರ ಬಿದ್ದಿದೆ.

ಮಂಗಳವಾರ ತಡರಾತ್ರಿ ಸುರಿದ ಭೀಕರ ಮಳೆಯಿಂದ ಬೃಹದಾಕಾರದ ಮರ ಧರಾಶಾಯಿಯಾಗಿದೆ. ವಿಯಷ ತಿಳಿದು ಸ್ಥಳಕ್ಕೆ ಗ್ರಾಮಾಡಳಿತ,ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳೀಯರ ಸಹಕಾರದಿಂದ ತೆರವು ಕಾರ್ಯಕ್ಕೆ ಮುಂದಾಗಿದ್ದು ಕಲವೇ ಗಂಟೆಗಳಲ್ಲಿ ವಾಹನ ಸಂಚಾರಕ್ಕೆ ಹಾದಿ ಸುಗಮಗೊಳಿಸಲಾಗಿದೆ.

ಇದನ್ನೂ ಓದಿ-https://suddilive.in/archives/19566

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close