ಕೊಲ್ಲಾಪುರದಲ್ಲಿ ಪ್ರಾರ್ಥನಾ ಮಂದಿರದ ಮೇಲೆ ದಾಳಿ-ಶಿವಮೊಗ್ಗದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನೆ ವಿಡಿಯೋ-ಯುವಕನ ವಿರುದ್ಧ ಎಫ್ಐಆರ್

 


ಸುದ್ದಿಲೈವ್/ಶಿವಮೊಗ್ಗ


ಕೊಲ್ಲಾಪುರದಲ್ಲಿ ಮಸೀದಿಯ ಮೇಲೆ ಉದ್ರಿಕ್ತರ ಗುಂಪೊಂದು ದಾಳಿ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಇಬ್ಬರು ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸು-ಮೋಟೋ ದಾಖಲಾಗಿದೆ. 

ಸಾಂಧರ್ಭಿಕ ಚಿತ್ರ


ಕೊಲ್ಲಾಪುರದ ರಜಾ ಜಾಮಾ ಮಸೀದಿಯಲ್ಲಿ ನಡೆದ ಘಟನೆ ಎಂದು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಯುವಕರು ಕೊಲ್ಲಾಪುರದಲ್ಲಿ ಮಸೀದಿಯನ್ನ ಒಡೆದು ಹಾಕಲಾಗುತ್ತಿದೆ. ಎಲ್ಲಿ ಮುಸ್ಲೀಂರು ಹೆಚ್ಚಿನ ಜನಸಂಖ್ಯೆ ಇಲ್ಲವೋ ಅಲ್ಲಿ ಕೆಲವರು ಪುಡಾಂಡಿಕೆ ಮೆರೆಯುತ್ತಿದ್ದಾರೆ. 


ಮಸೀದಿಯನ್ನ ಒಡೆದು ಹಾಕಲಾಗುತ್ತಿರುವವರ ಮನೆಗೆ ನುಗ್ಗಿ ಒಡಿಯಬೇಕು ಎಂಬಿತ್ಯಾದಿಯ ಬಗ್ಗೆ ಅವ್ಯಾಚ್ಯಶಬ್ದಗಳಿಂದ ನಿಂದಿಸಿ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರು ಸೂಳೆಬೈಲಿನ ಯುವಕರು ವಿಡಿಯೋ ಅಪಲೋಡ್ ಮಾಡಿದ್ದಾರೆ.‌ ಇಬ್ಬರಲ್ಲಿ ಒಬ್ಬನ ಬಗ್ಗೆ ಪತ್ತೆಯಾಗಿದ್ದು ಮತ್ತೋರ್ವನ ಪತ್ತೆಹಚ್ಚಲಾಗುತ್ತಿದೆ. 


ಇಬ್ಬರು ಎರಡು ಧರ್ಮದ ನಡುವೆ ಶತೃತ್ವ ಬೆಳೆಸುವ ನಿಟ್ಟಿನಲ್ಲಿ, ಕೋಮುದ್ವೇಷ ಹರಡುವ ಉದ್ದೇಶದಿಂದ ಸಮಾನ ಮನಸ್ಕರಾಗಿದ್ದು ಇಬ್ವರ ವಿರುದ್ಧ ಕಾನೂನು ಕ್ರಮ‌ ಜರಗಿಸುವಂತೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Akhil_bhai_786 ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಈಗ ಈ ಖಾತೆ ಎರರ್ ಎಂದು ತೋರಿಸುತ್ತಿದೆ. 


ಇದನ್ನೂ ಓದಿ-https://www.suddilive.in/2024/07/blog-post_344.html


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close