ಕಾಥೋಲಿಕ್ ಧರ್ಮಕ್ಷೇತ್ರ ಕ್ರೈಸ್ತರರ ಹಿತರಕ್ಷಣ ವೇದಿಕೆಯಿಂದ ಸಬ್ ಇನ್ ಸ್ಪೆಕ್ಟರ್ ಗೆ ಮನವಿ

 ಸುದ್ದಿಲೈವ್/ಭದ್ರಾವತಿ


ಭದ್ರಾವತಿಯ ಕಾಥೋಲಿಕ್ ಧರ್ಮಕ್ಷೇತ್ರ ಕ್ರೈಸ್ತರರ ಹಿತರಕ್ಷಣ ವೇದಿಕೆಯ ಮುಖಂಡರು ನಿನ್ನೆ  ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿ  ಅಮಾನತುಗೊಳಿಸಿರುವ ರೆ.ಫಾ ವಿಲಿಯಂ ವೆನ್ನಿಫ್ರೈಡ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಲ್ಲಿನ ಸಬ್ ಇನ್ ಸ್ಪೆಕ್ಟರ್ ಗೆ ಮನವಿ ಸಲ್ಲಿಸಿದ್ದಾರೆ




ವಿಲಿಯಂ ವಿನ್ನಿಫ್ರೈಡ್ ಅವರು ನ್ಯೂಟೌನ್ ನ ಮೇರಿ ಇಮ್ಯಾಕ್ಯೂಲೇಟ್ ಚರ್ಚ್ ನಲ್ಲಿ ಸೇವೆ ಸಲ್ಲಿಸುವ ವೇಳೆ ಇವರ ವಿರುದ್ಧ ಬಂದ ದೂರಿನ‌ಅನ್ವಯ ಧಾರ್ಮಿಕ ಮುಖ್ಯಸ್ಥರಿಂದ ಅಮಾನತುಗೊಂಡಿದ್ದರು. ಹೆಚ್ಚಿನ ತನಿಖೆ ಬಾಕಿ ಉಳಿಸಿ ಅಮಾನತ್ತು ಗೊಳಿಸಲಾಗಿತ್ತು.


ಕಾನೂನು ನಿಯಮಗಳಿಗೆ ನಡೆದುಕೊಳ್ಳದ ವಿನ್ನಿಫ್ರೈಡ್ ಅವರು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ವಿರುದ್ಧವೇ ಆಧಾರ ರಹಿತ ಆರೋಪಗಳನ್ನ ಮಾಡಿದ್ದಾರೆ. ಕ್ರೈಸ್ತ ಸಮುದಾಯದ ವಿರುದ್ಧ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡುವ ರೀತಿಯಲ್ಲಿ ಬಿಂಬಿಸಿರುವುದಾಗಿ ವೇದಿಕೆ ಮನವಿಯಲ್ಲಿ ಆಕ್ಷೇಪಿಸಿದೆ.


ಕರ್ನಾಟಕ ಸರ್ಕಾರದಿಂದ ಚರ್ಚ್ ಗಳ ವಿವಿಧ ಅಭಿವೃದ್ಧಿಗೆ ಬಿಡುಗಡೆಯಾದ 60 ಲಕ್ಷಕ್ಕೂ ಹೆಚ್ಚು ಹಣ ಬಿಡುಗಡೆಯಾಗಿದ್ದು ಇದನ್ನ ಇವರೇ ನಿರ್ವಹಿಸಿದ್ದರು. ಈ ವೇಳೆ ಹಣ ಬಿಡುಗಡೆಯ ವೇಳೆ ಧರ್ಮಾಧ್ಯಕ್ಷರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ನಡೆದ ಪತ್ರ ವ್ಯವಹಾರಗಳ ಮೂಲ ದಾಖಲೆ ಮತ್ತು ಚರ್ಚ್ ಗೆ ಸಂಬಂಧ ಪಟ್ಟ ಮಹತ್ವದ ದಾಖಲಾತಿಗಳನ್ನ ಕಾನೂನು ಬಾಹಿರವಾಗಿ ತಮ್ಮೊಂದಿಗೆ ತೆಗೆದುಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ.


ಈ ಬಗ್ಗೆ ಯೂಟ್ಯೂಬ್ ಚಾನೆಲ್ ನವೊಂದರಲ್ಲಿ ಅಮಾನತುಗೊಂಡ ವಿನ್ನಿಫ್ರೈಡ್ ಅವರು ಪ್ರದರ್ಶಿಸಿದ್ದು, ಇದನ್ನು ನೋಡಿ ಪರಿಶೀಲಿಸಿದಾಗ ಈ ದಾಖಲಾತಿ ಕದ್ದಿರುವುದು ತಿಳಿದು ಬಂದಿದೆ. ಕದ್ದಿ ದಾಖಲಾತಿಯನ್ನ ಹೊತ್ತೊಯ್ದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವೇದಿಕೆ ಒತ್ತಾಯಿಸಿದೆ. 


ಭದ್ರಾವತಿಯ ಪೇಪರ್ ಟೌನ್, ನ್ಯೂಟೌನ್, ಓಲ್ಡ್ ಟೌನ್, ಕಾರೆಹಳ್ಳ ಮತ್ತು ಮಾವಿನ ಕೆರೆಯ ಚರ್ಚ್ ನ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.‌ 

ಇದನ್ನೂ ಓದಿ-https://www.suddilive.in/2024/07/blog-post_857.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು