ಶಿವಮೊಗ್ಗ ಅಭಿವೃದ್ಧಿಯ ನೀಲಿ ನಕ್ಷೆ ತೆರೆದಿಟ್ಟ ಸಂಸದ

ಸುದ್ದಿಲೈವ್/ಶಿವಮೊಗ್ಗ

ಹಿಂದುತ್ವದ ವಿರುದ್ಧದ ರಾಹುಲ್ ಗಾಂಧಿ ಅವರ ಹೇಳಿಕೆ, ಅದಕ್ಕೆ ಮೋದಿಜಿ ಅವರ ಪ್ರತಿಕ್ರಿಯೆಗಳ ಬಗ್ಗೆ ಈಗಾಗಲೇ ನೋಡಲಾಗಿದೆ. ಜನ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನ ಆಯ್ಕೆ ಮಾಡಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಬಾರಿಗೆ ಸ್ಪರ್ಧೆ ಮಾಡಿದಾಗ ಪರವಿರೋಧ ಚರ್ಚೆ ನಡೆಯಿತು, ಎರಡನೇ ಬಾರಿ‌ ಬಿಎಸ್ ವೈ ಸ್ಪರ್ಧಿಸಿದರು. ನಂತರ ವಿಧಾನ ಸಭೆ ಉಪಚುನಾವಣೆ, ನಂತರ ಬಿಎಸ್ ವೈ ಸಿಎಂ ಎಂದು ಬಿಂಬಿಸಿ ಚುನಾವಣೆ. 2018 ರ ಲೋಕಸಭಾ ಉಪ ಚುನಾವಣೆ, 2019 ರಲ್ಲಿ ಮಧು ವಿರುದ್ಧ ಸ್ಪರ್ಧ ಗೆಲುವು,, ಮತ್ತೆ ಈ ಬಾರಿ 2024 ರಲ್ಲಿ ಅಭೂತ ಪೂರ್ವ ಚುನಾವಣೆಯಲ್ಲಿ ಗೆಲುವಾಗಿದೆ ಎಂದರು.

ಈ ಲೋಕಸಭೆಯಲ್ಲಿ ಗೆದ್ದ ಹಿನ್ನಲೆಯಲ್ಲಿ ಮತದಾರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವೆ. ಇದು ಬಾರಿ ಚರ್ಚೆಯಾಗಿದೆ. ಈ ಬಾರಿ ಏನು ಮಾಡಿದರೆ ಜನರಿಗೆ ಅನುಕೂಲ ಎಂಬುದನ್ನ ಯೋಚಿಸಿ ಕೆಲಸ ಮಾಡಲಾಗುವುದು. ರೈಲ್ವೆ, ಹೈವೆ, ಏರ್ ವೇ ಕೆಲಸ ಮಾಡಲಾಗಿದೆ ಎಂದರು.

ಅರಣ್ಯ, ಶರಾವತಿ ಮುಳುಗಡೆ ಸಮಸ್ಯೆ, 20 ಸಾವಿರ ಹೆಕ್ಟೇರ್ ಜಾಗವನ್ನ ಕಾರ್ಖಾನೆಗೆ ಮುಂದುವರೆಸಲಾಗುವುದು. ನಾಲ್ಕನೇ ಬಾರಿಗೆ ಗೆದ್ದ ಮೇಲೆ ಕೇಂದ್ರದ ಭೂಸಾರಿಗೆ ಸಚಿವರ ಜೊತೆ ಅರ್ಧ ಗಂಟೆ ಮಾತುಕತೆ ಮುಗಿಸಿರುವೆ. ಸಚಿವರ ಅಶ್ವಿನ್ ವೈಷ್ಣವ್, ಭುಪೇಂದ್ರ ಯಾದವ್ ಜೊತೆ ಮಾತನಾಡಿರುವೆ. ನಮ್ಮ ಕ್ಷೇತ್ರದ ಎಲ್ಲಾ ಶಾಸಕರನ್ನ ಕರೆದುಕೊಂಡು ಬರುವುದಾಗಿ ಹೇಳಿರುವೆ. ಶೀಘ್ರದಲ್ಲಿಯೇ ಭೇಟಿಯಾಗಿ ಶರಾವತಿ ಮುಳುಗಡೆ ಬಗ್ಗೆ ಚರ್ಚಿಸಲಾಗುವುದು ಎಂದರು.

ಸಚಿವ ಕುಮಾರ ಸ್ವಾಮಿ ಅವರನ್ನ ವಿಐಎಸ್ಎಲ್ ಗೆ ಕರೆದುಕೊಂಡು ಬರಲಾಗಿದೆ. ಬಂಡವಾಳ ಹಿಂಪಡೆಯುವ ಬಗ್ಗೆ ಹಣಕಾಸು ಇಲಾಖೆಯಲ್ಲಿ ಮಾತನಾಡಿರುವೆ. ರೈಲ್ವೆ ಸಚಿವ ವಿ.ಸೋಮಣ್ಣರಿಗೆ ಮತ್ತು  ಅಶ್ವಿನ್ ವೈಷ್ಣವ್ ಗೆ ಧನ್ಯವಾದ ತಿಳಿಸುವೆ. ಶೀಘ್ರದಲ್ಲಿಯೇ ಶಿವಮೊಗ್ಗದಿಂದ ಸಂಜೆ 4 ಗಂಟೆಗೆ ಹೊರಡಲಿದ್ದು ಬೆಳಗ್ಗಿನ ಜಾವ 4-45 ಗೆ ಚೆನ್ಬೈ ತಲುಪಲಿದೆ ರಾತ್ರಿ 11-30 ಹೊರಟು ಮರುದಿನ 12 ಗಂಟೆಗೆ ಶಿವಮೊಗ್ಗ ತಲುಪಲಿದೆ ಬೆಂಗಳೂರು ಪೇಟೆ, ಚೋಳಾರು ಗುಂಟೆಯ ಮೇಲೆ ಚೆನ್ನೈಗೆ ತಲುಪಲಿದೆ. ಸೆಮಿಫಾಸ್ಟ್ ರೈಲು ಇದಾಗಿದೆ ಎಂದರು.

ಶಿವಮೊಗ್ಗ-ಬಿರೂರು 62 ಕಿಮಿ 1258 ಕೋಟಿ ಹಣ ವ್ಯಯದಲ್ಲಿ ರೈಲ್ವೆ ಡಬ್ವಲಿಂಗ್ ನ ಪ್ರಪೋಸಲ್ ಹೋಗಿದೆ. ಶೀಘ್ರದಲ್ಲಿಯೇ ಡಬ್ಬಲಿಂಗ್ ಕಾರ್ಯ ನಡೆಯಲಿದೆ. ಶಿವಮೊಗ್ಗದಿಂದ ಮಂಗಳೂರಿಗೆ ರೈಲು ಸಾಗಲಿದೆ. ಕಡೂರಿನಿಂದ ಚಿಕ್ಕಮಗಳೂರು ಇದೆ.‌ಚಿಕ್ಕಮಂಗಳೂರಿನಿಂದ ಸಕಲೇಶ್ ಪುರ ಮೂಲಕ ಮಂಗಳೂರು ತಲುಪುವ ಪ್ರಯತ್ನ ನಡೆಯುತ್ತಿದೆ ಎಂದರು.

ಕೋಟೆ ಗಂಗೂರು ರೈಲ್ವೆ ಡಿಪೋ ಭವಿಷ್ಯದಲ್ಲಿ ಉತ್ತಮ ಯೋಜನೆ ಇದೆ. ರಾಣಿಬೆನ್ನೂರಿಗೆ ಕಬೆಕ್ಟ್ ಆದರೆ ಶಿವಮೊಗ್ಗಕ್ಕೆ ದೇಶದ ಎಲ್ಲಾ ಭಾಗದಿಂದ ರೈಲು ಹರಿದುಬಂದಂತಾಗುತ್ತದೆ ಎಂದರು. ರಾಣೇಬೆನ್ನೂರಿಗೆ ಒಂದು ತಿಂಗಳಲ್ಲಿ 37 ಪಾಯಿಂಟ್ ಬ್ಲಾಕ್ ಆಗಿರುವುದನ್ನ ಸಿಎಂ ಬಗೆಹರಿಸಿಕೊಡಲಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರೆ ನೇರವಾಗಿ ಸಿಎಂಗೆ ತಿಳಿಸಿದ್ದಾರೆ‌. ಇದಕ್ಕೆ ಶಾಲಿನಿ ರಜನೀಶ್ ನೇತೃತ್ವದಲ್ಲಿ ಕಮಿಟಿ ರಚನೆಯಾಗಿದೆ ಎಂದು ತಿಳಿಸಿದರು.

2024-25 ನೇ ಸಾಲಿಗೆ ರಾಜ್ಯಕ್ಕೆ ಕೇಂದ್ರ ಭೂಸಾರಿಗೆಯು 8006 ಕೋಟಿ ನೀಡಿದ್ದಾರೆ. 2623 ಕೋಟಿ ಅಭಿವೃದ್ಧಿಯ ಹಣ ಬಂದಿದೆ.‌ 369e ಹೈವೆ ರಸ್ತೆಗೆ 920 ಕೋಟಿ ನೀಡಲಾಗಿದೆ. ಆಗುಂಬೆ ಟನಲ್ ಗೆ ಟೆಂಡರ್ ಕರೆಯಲಾಗಿದೆ.‌ಟನಲ್ ಟೂ ವೇನಲ್ಲಿ ಮನನ ಡೆದರೆ, ಹಾಲಿ ರಸ್ಯೆಯನ್ನ ವಿಸ್ತಾರಿಸಲು 403 ಕೋಟಿ‌ ಹಣ ತೆಗೆದಿಡಲಾಗಿದೆ. ಟನಲ್ ನ್ನ 3500 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ ಎಂದರು.

ಆನಂದಪುರದ ಚೂರಿಕಟ್ಟೆಯಿಂದ ಸಾಗರ ಕ್ಕೆ 400 ಕೋಟಿ ರೂ ಹಣದಲ್ಲಿ ನಿರ್ಮಾಣವಾಗಲಿದೆ.‌ ವಂದೇಭಾರತ್ ರೈಲು ತರಲು ಪ್ರಯತ್ನ ನಡೆಯುತ್ತಿದೆ. ಸಮಯದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/18549

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close